ಪುನೀತ್ ನೆನಪು, ಶಶಿಧರ ಭಟ್‌ ಬರಹ

,,,ಆದು ಮಧ್ಯಾನ್ಹದ ಹೊತ್ತು.. ನಾನು ಡಾ. ರಾಜಕುಮಾರ್ ಅವರ ಸಿನಿಮಾ ಒಂದರ ಚಿತ್ರೀಕರಣ ನೋಡಿ ವರದಿ ಮಾಡಲು ಚಾಮುಂಡೇಶ್ವರಿ ಸ್ಟುಡೀಯೋ ಕ್ಕೆ ಹೋಗಿದ್ದೆ. ಚಿತ್ರೀಕರಣ ನೋಡಲು ವ್ಯವಸ್ಥೆ ಮಾಡಿದ್ದು ಸಾ.ರಾ. ಗೋವಿಂದು ಮತ್ತು ಟಿ, ವೆಂಕಟೇಶ್, ನಾನಾಗ ಟಿ.ವೆಂಕಟೇಶ್ ಅವರ ಅಭಿಮಾನಿ ವಾರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ರಾಜಾಜಿನಗರದ ರಾಜ್ ಕುಮಾರ್ ರಸ್ತೆಯ ಕಟ್ಟಡ ಒಂದರ ಮಹಡಿಯಲ್ಲಿ ನಮ್ಮ ಕಚೇರಿ,, ಜಾಣಗೆರೆ ವೆಂಕಟರಾಮಯ್ಯ ಪತ್ರಿಕೆಯ ಸಂಪಾದಕರು, ನಾನು ಅವತ್ತು ಕಚೇರಿಯಲ್ಲಿ ಕುಳಿತಿದ್ದಾಗ ವೆಂಕಟೇಶ್ ರಾಜಕುಮಾರ್ ಅವರ ಸಿನಿಮಾ ಒಂದರ ಚಿತ್ರೀಕರಣದ ಸ್ಥಳಕ್ಕೆ ಹೋಗಿ ವರದಿ ಮಾಡುವಂತೆ ಸೂಚಿಸಿದರು, ಅವರೇ ವಾಹನ ವ್ಯವಸ್ಥೆಯನ್ನು ಮಾಡಿದ್ದರು.. ಚಿತ್ರೀಕರಣವನ್ನು ಸ್ವಲ್ಪ ಹೊತ್ತು ನೋಡಿ ಡಾ. ರಾಜ್ ಕುಮಾರ್ ಅವರ ಮಿನಿ ಸಂದರ್ಶನ ಮಾಡಿ ಅಲ್ಲಿಂದ ಹೊರಡಬೇಕು.. ಊಟ ಮಾಡಿಯೇ ಹೋಗಬೇಕು ಅಂದರು ಪಾರ್ವತಮ್ಮ ರಾಜಕುಮಾರ್,,

ಅದು ಡಾ. ರಾಜಕುಮಾರ್ ಅವರ ಸಂಸ್ಥೆಯ ಸಂಪ್ರದಾಯ. ಮಧ್ಯಾನ್ಹದ ಹೊತ್ತಿಗೆ ಹೋದರೆ ಊಟ ಇಲ್ಲದೇ ಯಾರನ್ನು ಅವರು ಕಳಿಸಲಾರರು.ಊಟ ಮಾಡಿ ಅಲ್ಲಿಂದ ಹೊರಡುವಾಗ ಪಾರ್ವತಮ್ಮ ಹೇಳಿದರು.. ನೀವು ಹೋಗುವಾಗ ಇವನನ್ನು ರಾಜಾಜಿನಗರದಲ್ಲಿ ವರದಪ್ಪ ಅವರ ಮನೆಯಲ್ಲಿ ಬಿಟ್ಟು ಹೋಗಿ.. ನಾನು ಸರಿ ಅಂದೆ. ಅವರದೇ ಕಾರು..ನಾನು ಡ್ರಾಪ್ ತೆಗೆದುಕೊಳ್ಳುತ್ತಿದ್ದವನು,,,ಅವನು ಪುನೀತ್ ರಾಜಕುಮಾರ್,, ಆಗ ಆತನಿಗೆ ೧೦ ವರ್ಷ ವಯಸ್ಸು… ಸರಿ ಎಂದು ನಾನು ಡಾ. ರಾಜಕುಮಾರ್ ಅವರ ಪ್ರೊಡಕ್ಷನ್ ಮೆನೇಜರ್ ನೀಡಿದ ಅಂಬಾಸಿಡರ್ ಕಾರು ಹತ್ತಿದೆ. ಜೊತೆಗೆ ಪುನೀತ್…ಅವನ ಕೈಯಲ್ಲಿ ಒಂದು ವಿಎಚ್ ಎಸ್ ಇತ್ತು.. ಅದನ್ನು ತೆಗೆದುಕೊಂಡು ವರದಪ್ಪ ಅಂದರೆ ಚಿಕ್ಕಪ್ಪನ ಮನೆಗೆ ಪುನಿತ್ ಹೊರಟಿದ್ದು. ಇದು ನಾನು ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಎಂಬ ಅದ್ಭುತ ನಟನನ್ನು ನೋಡಿದ್ದು ಮಾತನಾಡಿದ್ದು,,ಅದು ೧೯೮೫ನೆಯ ಇಸ್ವಿ,,,

ನಾನು ಆಗ ಸಿನಿಮಾ ವರದಿಗಾರನಾಗಿಯೂ ಕೆಲಸ ಮಾಡುತ್ತಿದ್ದೆ,, ಚಾಮುಂಡೇಶ್ವರಿ ಸ್ಟುಡಿಯೋ ದಿಂದ ರಾಜಾಜಿನಗರದ ವರದಪ್ಪನವರ ಮನೆಗೆ ಹೋಗುವ ವರೆಗೆ ಈ ಪೋರ ಇಂಗ್ಲೀಷ್ ಸಿನಿಮಾ ಕುರಿತು ಮಾತನಾಡಿದ್ದ. ನನಗೆ ಶಾಕ್.. ಆಗಲೇ ನನಗೆ ಈ ಪ್ರತಿಭಾವಂತ ನಟನ ಪರಿಚಯ ಆಗಿಬಿಟ್ಟಿತ್ತು,ಪುನೀತ್ ರಾಜಕುಮಾರ್ ಅಭಿನಯದ ಬೆಟ್ಟದ ಹೂವು ಇವತ್ತಿಗೂ ನನಗೆ ಇಷ್ಟದ ಸಿನಿಮಾ. ಆ ಸಿನಿಮಾದಲ್ಲಿ ಪುನೀತ್ ತಾನೆಂಥ ನಟ ಎಂಬುದನ್ನು ತೋರಿಸಿಬಿಟ್ಟಿದ್ದ,, ಹಳ್ಳಿಯ ಹುಡುಗನ ಮುಗ್ದತೆ ಅನಾವರಣ ಮಾಡುವುದರಲ್ಲಿ ಯಶಸ್ವಿಯಾಗಿದ್ದ ಪುನೀತ್ ಈ ಸಿನಿಮಾದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದುಬಿಟ್ಟಿದ್ದ.ಡಾ.ರಾಜಕುಮಾರ್ ಮತ್ತು ಪಾರ್ವತಮ್ಮನವರಿಗೆ ಪುನೀತ್ ಅಂದರೆ ಅಚ್ಚುಮೆಚ್ಚು,, ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಡಾ, ರಾಜ್ ಪುನೀತ್ ನನ್ನು ಆಗಾಗ ಕರೆದೊಯ್ಯುತ್ತಿದ್ದರು. ಪುನೀತ್ ಆ ಸಿನಿಮಾ ವಾತಾವರಣದಲ್ಲೇ ಬೆಳೆದ. ಪುನೀತ್ ಅವರ ಬದುಕನ್ನು ಮೂರು ಹಂತದಲ್ಲಿ ನಾವು ಗುರುತಿಸಬಹುದು.. ಬಾಲ್ಯ ಮೊದಲ ಹಂತ. ಬಾಲ್ಯದಲ್ಲೇ ತಾನು ಅಭಿಜಾತ ಕಲಾವಿದ ಎಂದು ಪುನೀತ್ ತೋರಿಸಿಯಾಗಿತ್ತು…ಡಾ. ರಾಜ್ ಕೂಡ ಪುನೀತ್ ದೊಡ್ಡ ಕಲಾವಿದನಾಗುತ್ತಾನೆ ಎಂದು ನಿರೀಕ್ಷಿಸಿದ್ದರು.. ಈ ಮೊದಲ ಹಂತದ ನಂತರ ಪುನೀತ್ ಸಿನಿಮಾದ ಆಸಕ್ತಿಯನ್ನು ಕಳೆದುಕೊಂಡ, ತಾನು ದೊಡ್ಡ ಬ್ಯುಸಿನೆಸ್ ಮೆನ್ ಆಗಬೇಕು ಎನ್ನುವ ಅಸೆ ಪುನೀತ್ ಅವರದಾಗಿತ್ತು,ಹೀಗಾಗಿ ಬೇರೆ ಬೇರೆ ವ್ಯಾಪಾರ ಒಹಿವಾಟು ಕಡೆ ಲಕ್ಷ್ಯ ಒಹಿಸಿದ ಪುನೀತ್. ಇದಕ್ಕೆ ಡಾ. ರಾಜಕುಮಾರ್ ಅವರಾಗಲೀ ಪಾರ್ವತಮ್ಮ ರಾಜಕುಮಾರ್ ಅವರಾಗಲೀ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಪುನೀತ್ ಅವರ ಬಗ್ಗೆ ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರಿಗೆ ಸ್ವಲ್ಪ ಆತಂಕ ಉಂಟಾಗಿತ್ತು,, ಜೊತೆಗೆ ಯಾವುದೇ ಆರ್ಥಿಕ ವಹಿವಾಟು ಅವರ ಕೈಹಿಡಿಯಲಿಲ್ಲ.ಕೊನೆಗೆ ಪುನೀತ್ ಮತ್ತೆ ಸಿನಿಮಾ ರಂಗದ ಕಡೆಗೆ ತಿರುಗಿ ನೋಡಿದರು..

ತಮ್ಮ ವರ್ತಮಾನ ಭವಿಷ್ಯ ಎಲ್ಲವೂ ಸಿನಿಮಾ ಎಂಬುದು ಅವರಿಗೆ ಅರಿವಾಗಿತ್ತು,,, ಹಾಗೆ ಡಾ. ರಾಜ್ ಮತ್ತು ಪಾರ್ವತಮ್ಮ ಕೂಡ ಚಿತ್ರರಂಗದಲ್ಲೇ ಪುನೀತ್ ಮುಂದುವರಿಯಲಿ ಎಂದು ಬಯಸಿದ್ದರು,, ಅವರಿಗೂ ಪುನೀತ್ ಭವಿಷ್ಯ ಇರುವುದು ಚಿತ್ರರಂಗದಲ್ಲೇ ಎಂದು ಅನ್ನಿಸಿಬಿಟ್ಟಿತ್ತು,,ಪುನೀತ್ ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದ ಮರು ಪ್ರವೇಶ ಪಡೆದರು.. ಅದು ಅವರ ಬದುಕನ್ನೇ ಬದಲಿಸಿಬಿಟ್ಟಿತ್ತು. ಇದು ಪುನೀತ್ ರಾಜಕುಮಾರ್ ಅವರ ಬದುಕಿನ ಮೂರನೆಯ ಘಟ್ಟ..ಈ ಹೊತ್ತಿಗೆ ಪುನೀತ್ ಸಂಪೂರ್ಣವಾಗಿ ಬದಲಾಗಿದ್ದರು. ಡಾ. ರಾಜಕುಮಾರ್ ಅವರ ಗುಣವನ್ನೆಲ್ಲ ಆಹ್ವಾನಿಸಿಕೊಂಡು ಬಿಟ್ಟಿದ್ದರು,,ಡಾ. ರಾಜ್ ಅವರ ವ್ಯಕ್ತಿತ್ವ ದ ಭಾಗವಾಗಿದ್ದ ಸೌಜನ್ಯ, ಗುರು ಹಿರಿಯರ ಬಗ್ಗೆ ಗೌರವ, ಸದಾ ಮುಖದ ಮೇಲೆ ಮುಗುಳ್ನಗು ಎಲ್ಲವನ್ನೂ ಪುನೀತ್ ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿದ್ದರು. ಹೀಗಾಗಿ ಬಹಳ ಸಂದರ್ಭದಲ್ಲಿ ಪುನೀತ್ ಡಾ. ರಾಜ್ ಅವರ ನೆನಪು ಮೂಡುವಂತೆ ಮಾಡುತ್ತಿತ್ತು,,ನಾನು ಪುನೀತ್ ಅವರನ್ನು ಟೀವಿಗಾಗಿ ಸಂದರ್ಶಿಸುವಾಗ ಇದೇ ಪ್ರಶ್ನೆ ಕೇಳಿದ್ದೆ. ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ. ?

ನಾನು ಪುನೀತ್ ಅವರ ಕಣ್ಣಿನಲ್ಲಿ ಡಾ. ರಾಜ್ ಅವರನ್ನು ನೋಡಲು ಯತ್ನ ಮಾಡಿದ್ದೆ. ಯಾಕೆಂದರೆ ಡಾ, ರಾಜ್ ಅವರಂತಹ ಮಹಾನ್ ಕಲಾವಿದರ ಮಗನಾಗುವುದು ಸುಲಭ ಅಲ್ಲ.. ಪ್ರತಿ ಹಂತದಲ್ಲೂ ಡಾ. ರಾಜ್ ಅವರ ಜೊತೆ ಪುನೀತ್ ಅವರನ್ನು ಹೋಲಿಕೆ ಮಾಡುವುದು ಕೆಲವೊಮ್ಮೆ ತೀವ್ರ ರೂಪದ ಸಮಸ್ಯೆಯನ್ನು ಒಡ್ಡುತ್ತಿತ್ತು. ಡಾ, ರಾಜ್ ಅವರ ಪ್ರಭಾವಳಿಯಿಂದ ಹೊರಗೆ ಬಂದು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಪುನೀತ್ ಅವರ ಮುಂದಿದ್ದ ಸವಾಲಾಗಿತ್ತು. ಈ ಸವಾಲನ್ನುಉ ಅದ್ಭುತವಾಗಿ ಸ್ವೀಕರಿಸಿ ನಿರ್ವಹಿಸಿದವರು ಪುನೀತ್.. ಯಾವುದೇ ಹಂತದಲ್ಲೂ ಪುನೀತ್ ತಮ್ಮ ತಂದೆಯವರ ಅನುಕರಣೆ ಮಾಡಲಿಲ್ಲ. ತಂದೆಯವರಿಗಿಂತ ಭಿನ್ನವಾದ ನಟಾನಾ ಶೈಲಿಯನ್ನು ಅವರು ರೂಢಿಸಿಕೊಂಡರು. ಜೊತೆಗೆ ಇವತ್ತಿನ ಪ್ರೇಕ್ಷಕರಿಗೆ ಬೇಕಾದ್ದು ಏನು ಎಂಬುದನ್ನು ಸ್ವಯಂ ಪ್ರಯತ್ನನಿದಿಂದ ಅವರು ಕಂಡುಕೊಂಡರು.

ಪುನೀತ್ ಅವರು ನಾಯಕರಾಗಿ ಚಿತ್ರರಂಗ ಪ್ರವೇಶಿಸುವಾಗ ಅವರಿಗೆ ಹಿರಿಯರ ಮಾರ್ಗದರ್ಶನ ಇತ್ತು ಎಂಬುದು ನಿಜ.. ಆದರೆ ಅವರು ಕ್ರಮೇಣ ಇದೆಲ್ಲವುದರಿಂದ ಹೊರಗೆ ಬಂದರು. ಜೊತೆಗೆ ಇವತ್ತಿನ ಸಿನಿಮಾದ ಎಲ್ಲ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ಮನಸ್ಸು ಅವರದಾಗಿತ್ತು.ಒಟಿಟಿ ಪ್ಲಾ ಟ್ ಫಾರ್ಮ್ ಬಂದಾಗ ಇದರ ಸಾಧ್ಯತೆಗಳ ಬಗ್ಗೆ ತಿಳಿದುಕೊಂಡ ಪುನೀತ್ ಚಿತ್ರಗಳ ನಿರ್ಮಾಣಕ್ಕೂ ಕೈ ಹಾಕಿದರು,,,ಇನ್ನೂ ಕೆಲವು ಸಿನಿಮಾಗಳ ನಿರ್ಮಾಣ ಯೋಜನೆಗಳೂ ಅವರಲ್ಲಿ ಇದ್ದವು,,ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದ ಪುನೀತ್ ಟೀವಿಗಳಲ್ಲೂ ಕಾಣಿಸಿಕೊಳ್ಳತೊಡಗಿದರು.. ಕನ್ನಡ ಕೋಟ್ಯಾಧಿಪತಿ ಟೀವಿಯಲ್ಲಿನ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು, ಟೀವಿಗಳಲ್ಲಿ ಹೊಸ ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುವ ವಿಚಾರದಲ್ಲಿ ಅವರು ತೆರೆದ ಮನಸ್ಸಿನವರಾಗಿದ್ದರು,ಸಾಮಾಜಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಪುನೀತ್ ದಾನ ಧರ್ಮ ಮಾಡುವುದರಲ್ಲಿಯೂ ಎತ್ತಿದ ಕೈ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡುತ್ತಿದ್ದ ಪುನೀತ್ ನೀವು ಯಾರಿಗೆ ಸಹಾಯ ಮಾಡುತ್ತೀರೋ ಅದನ್ನು ಬಹಿರಂಗ ಪಡಿಸಬಾರದು, ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರಾಗಿದ್ದರು.

ಅಕ್ರಮವಾಗಿ ಸಾಗಿಸುತ್ತಿದ್ದ 22 ಜಾನುವಾರು ರಕ್ಷಣೆ: ಕುಮಟಾದಲ್ಲಿ ಆರೋಪಿಗಳ ಬಂಧನ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಜಾನುವಾರುಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ತಪಾಸಣೆ ನಡೆಸಿದಾಗ 13 ಕೋಣಗಳು, 9 ಎಮ್ಮೆಗಳು ಪತ್ತೆಯಾಗಿವೆ.

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ 22 ಜಾನುವಾರುಗಳನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಪೊಲೀಸರು ಕುಮಟಾದ ಹೊಳೆಗದ್ದೆ ಟೋಲ್‌ಗೇಟ್ ಬಳಿ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ 22 ಜಾನುವಾರುಗಳ ರಕ್ಷಣೆ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ತಪಾಸಣೆ ನಡೆಸಿದಾಗ 13 ಕೋಣಗಳು, 9 ಎಮ್ಮೆಗಳು ಪತ್ತೆಯಾಗಿವೆ. ಇವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಆರೋಪಿಗಳ ವಿರುದ್ದ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪುನೀತ್ ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು.. ವಾಟ್ಸಾಪ್ ನಲ್ಲಿ ಸಕ್ರಿಯವಾಗಿರುತ್ತಿದ್ದ ಅವರು ಎಂತಹ ಬಿಸಿಯಲ್ಲಿದ್ದರೂ ಸಂದೇಶಗಳಿಗೆ ಉತ್ತರ ನೀಡುತ್ತಿದ್ದರು.. ತಾನೊಬ್ಬ ದೊಡ್ದ ನಟ,,ನಾನ್ಯಾಕೆ ಇವರ ಸಂದೇಶಗಳಿಗೆ ಉತ್ತರ ನೀಡಬೇಕು ಎಂಬ ಭಾವನೆ ಅವರಲ್ಲಿ ಇರಲೇ ಇಲ್ಲ…ಹೀಗಾಗಿ ಅವರ ಸ್ನೇಹವನ್ನು ಕಳೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ. ಚಿತ್ರೀಕರಣದ ಸಂದರ್ಭದಲ್ಲಿ ಇರಲಿ ಸಿನಿಮಾ ಇರಲಿ, ಕನ್ನಡದ ಕೋಟ್ಯಾಧಿಪತಿ ಅಂತಹ ಟೀವಿ ಕಾರ್ಯಕ್ರಮ ಇರಲಿ ಎಲ್ಲರ ಜೊತೆ ನಗು ನಗುತ್ತ ಬೆರೆಯುತ್ತಿದ್ದ ಪುನೀತ್ ಗೆ ಸಿಟ್ಟು ಬರುತ್ತಿದ್ದುದು ಕಡಿಮೆ,, ತಮ್ಮ ಬದುಕಿನ ಎರಡನೆಯ ಹಂತದಲ್ಲಿ ಅಂದರೆ ಬ್ಯುಸಿನೆಸ್ ಮಾಡಲು ಹೊರಟ ಸಂದರ್ಭದಲ್ಲಿ ಕೆಲವೊಮ್ಮೆ ಸಿಟ್ಟು ಮಾಡಿಕೊಂಡ ಉದಾಹರಣೆ ಇದೆ.. ಆದರೆ ಚಿತ್ರರಂಗದ ನಾಯಕ ನಟನಾದ ಮೇಲೆ ನಾಯಕನಂತೆ ಇದ್ದವರು ಪುನೀತ್.ಹಾಗೆ ತಮ್ಮ ದಿನಚರಿಯಲ್ಲಿ ಶಿಸ್ತನ್ನು ಅಳವಡಿಸಿಕೊಂಡವರು.

ಬೆಳಿಗ್ಗೆ ಎದ್ದ ಮೇಲೆ ವಾಕಿಂಗ್ ನಂತರ ಜಿಮ್ ಯಾವುದನ್ನು ತಪ್ಪಿಸಿದವರಲ್ಲ. ಡಾ. ರಾಜ್ ಕುಮಾರ್ ಅವರಂತೆ ಶಿಸ್ತಿನ ಸಿಫಾಯಿ ಆಗಿದ್ದವರು.. ದೇಹವನ್ನು ಮಣಿಸುವುದು ಕುಣಿಸುವುದು ಅವರಿಗೆ ಇಷ್ಟ,, ಕೆಲವೊಮ್ಮೆ ಅನಿಸುತ್ತದೆ, ಶಿಸ್ತಿನ ವ್ಯಕ್ತಿಗಳು ಕೆಲವೊಮ್ಮೆ ಅಶಿಸ್ತಿನಿಂದ ಇರುವುದನ್ನು ಕಲಿಯಬೇಕು ಅಂತ. ಜೊತೆಗೆ ತಮ್ಮ ದೇಹದ ಜೊತೆ ಮಾತನಾಡುವುದನ್ನು ಕಲಿಯಬೇಕು. ದೇಹದ ಮಾತು ಕೇಳಿಸಿಕೊಳ್ಳಬೇಕು. ಪುನೀತ್ ಅಸು ನೀಗಿದ ಮೇಲೆ ನಾನು ಈಗ ನೀಡಿದ ಸಲಹೆಯ ಮಾದರಿಯಲ್ಲಿ ಎಲ್ಲರೂ ಸಲಹೆ ನೀಡುತ್ತಿದ್ದಾರೆ,,ಎಲ್ಲರೂ ವೈದ್ಯರಾಗಿ ಬಿಟ್ಟಿದ್ದಾರೆ,, ಬೇರೆ ಬೇರೆ ಸುದ್ದಿ ವಾಹಿನಿಗಳ ಯಾಂಕರುಗಳು ವೈದ್ಯಕೀಯ ಸಲಹೆ ನೀಡುವುದರಲ್ಲಿ ನಿರತರಾಗಿದ್ದಾರೆ,ನಲವತ್ತಾರು ಸಾಯುವ ವಯಸ್ಸಲ್ಲ ಎಂದು ಎಲ್ಲರೂ ಹೇಳುತ್ತಾರೆ, ಅದು ನಿಜ. ಆದರೆ ಸಾಯುವುದಕ್ಕೆ ವಯಸ್ಸು ಎಂಬುದು ಇರುವುದಿಲ್ಲ…ಯಾವ ಕ್ಷಣದಲ್ಲಿ ಬೇಕಾದರೂ ಸಾವು ಬರಬಹುದು,,ಒಬ್ಬ ವ್ಯಕ್ತಿ ಅಸು ನೀಗಿದಾಗ ನಾವೆಲ್ಲ ಅವನು ಬದುಕಿದ ಸಮಯವನ್ನು ನೆನಪು ಮಾಡಿಕೊಳ್ಳುತ್ತ ಆ ವ್ಯಕ್ತಿ ಹೇಗೆ ಬದುಕಿದ್ದ ಎಂಬುದನ್ನು ಮೆಲಕು ಹಾಕುತ್ತೇವೆ, ಈಗಲೂ ಪುನೀತ್ ರಾಜಕುಮಾರ್ ಅವರ ನೆನಪು ಮಾಡಿಕೊಳ್ಳುತ್ತಿದ್ದೇವೆ. ಡಾ. ರಾಜ ನಿಧನರಾದಾಗಲೂ ನೆನಪು ಮಾಡಿ ಕೊಂಡಿದ್ದೆವು,.ಕೊನೆಯದಾಗಿ ನಾವು ಹೇಳುವುದು ಪುನೀತ್ ಇನ್ನೂ ಕೆಲಕಾಲ ನಮ್ಮ ನಡುವೆ ಇರಬೇಕಿತ್ತು ಎಂದು,,

-ಶಶಿಧರ್ ಭಟ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *