ಸಿದ್ಧಾಪುರದಲ್ಲಿ ತಾಲೂಕಾ ಬಿ.ಜೆ.ಪಿ. ಮಂಡಳದ ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಂಗಳವಾರ ಹಿಂದುಳಿದ ವರ್ಗಗಳ ಸಮಾವೇಶ ನಡೆಯುತ್ತಿದೆ. ಬಿ.ಜೆ.ಪಿ. ಪಕ್ಷ ಅಧಿಕಾರದಲ್ಲಿರಲು ಹಾಗೂ ಅಧಿಕಾರಕ್ಕೆ ಬರಲು ಇಂಥ ಸಮಾವೇಶಗಳನ್ನು ನಡೆಸುತ್ತದೆ.ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾಲೂಕುವಾರು ಹಿಂದುಳಿದವರ್ಗಗಳ ಸಮಾವೇಶ ಮಾಡಲು ಪಕ್ಷ ಆದೇಶಿಸಿದೆಯಂತೆ ಅದರ ಪ್ರಕಾರ ಈ ಸಮಾವೇಶ ನಡೆಯುತ್ತಿರುವುದು ಎನ್ನುವುದು ಪ್ರಮುಖ ಕಾರಣವಾದರೆ ಶಿರಸಿ ಕ್ಷೇತ್ರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿರುವುದಕ್ಕೆ ಉತ್ತರ ವಾಗಿ ಪಕ್ಷದ ವೇದಿಕೆಯಲ್ಲೇ ಪ್ರತಿಭಟನಾ ಸಮಾವೇಶವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎನ್ನಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಎನ್.ಜಿ ಕೊಲ್ಲೆ, ಶಿವಾನಂದ ನಾಯ್ಕ ಮಹಾರುದ್ರ ಬಾನಾವಳಿ,ಸಿದ್ಧಾಪುರದ ಮಹಾಬಲನಾಯ್ಕ ಬಿಕ್ಕಳಸೆ ಸೇರಿದಂತೆ ಅನೇಕರು ಜನಸಂಘದ ಕಾಲದಿಂದ ಬಿ.ಜೆ.ಪಿ.ಗಾಗಿ ದುಡಿದಿದ್ದರು. ಆದರೆ ದೇಶಪ್ರೇಮದ ಸೋಗು, ರಾಷ್ಟ್ರೀಯತೆಯ ನಾಟಕಗಳ ಮೂಲಕ ಯುವಕರನ್ನು ಸೆಳೆಯುವ ಬಿ.ಜೆ.ಪಿ.ಯಲ್ಲಿ ಅಧಿಕಾರ, ಅನುಕೂಲ ಅನುಭವಿಸಿದವರು ಮಾತ್ರ ಮೇಲ್ವರ್ಗದವರು. ಸೈದ್ಧಾಂತಿಕವಾಗಿ ಮೇಲ್ವರ್ಗ-ಮೇಲ್ಜಾತಿ, ಬಂಡವಾಳಶಾಹಿಗಳ ಹಿತಕಾಯುವ ಬಿ.ಜೆ.ಪಿ. ಹಿಂದುತ್ವದ ಹೆಸರಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರು, ನಾಯಕರನ್ನು ಬಳಸಿಕೊಳ್ಳುವುದು ಬಿಟ್ಟರೆ ಬಿ.ಜೆ.ಪಿ ಮತ್ತು ಅದರ ಮಾತ್ರಸಂಸ್ಥೆ ಆರ್ ಎಸ್. ಎಸ್. ಗಳಲ್ಲಿ ಹಿಂದುಳಿದ ವರ್ಗಗಳಿಗೆ ಅಧಿಕಾರ ಸಿಗುವುದೇ ಅಪರೂಪ ಸಿಕ್ಕರೂ ಅವರು ಪರಿವಾರದ ನಿರ್ಧೇಶನದಂತೆ ನಡೆದು ಮೇಲ್ಜಾತಿ-ಮೇಲ್ವರ್ಗಗಳ ಹಿತಕ್ಕಾಗಿ ದುಡಿಯಬೇಕು. ಇಂಥ ಅಪವಾದ, ವಾಸ್ತವಗಳ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಗಮ ಮಂಡಳಿಗಳ ಸದಸ್ಯರು, ಅಧ್ಯಕ್ಷರು, ಸರ್ಕಾರದ ಲಾಭದಾಯಕ ಹುದ್ದೆಗಳಲ್ಲೆಲ್ಲಾ ಮೇಲ್ವರ್ಗದವರೇ ವಿಜೃಂಬಿಸುತಿದ್ದಾರೆ.
ಜಿಲ್ಲೆಯ ಹಿಂದುಳಿದ ವರ್ಗಗಳ ಮತದಾರರು, ನಾಯಕರಿಂದ ಬೆಳೆದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ಸಂಸದ ಅನಂತಕುಮಾರ ಹೆಗಡೆಗಳ ನೇತೃತ್ವದಲ್ಲಿ ಪಕ್ಷದ ಸಂಘಟನೆಗಳಲ್ಲಿ ಹಿಂದುಳಿದ ವರ್ಗಗಳ ನಾಯಕರದ್ದೇ ಆಟಾಟೋಪ. ಆದರೆ ಅಧಿಕಾರ, ಅನುಕೂಲ ಅವಕಾಶಗಳ ವಿಚಾರ ಬಂದಾಗ ಹಿಂದುಳಿದವರಿಗೆ ಪಾಧಾನ್ಯತೆ ದೊರೆತ ಉದಾಹರಣೆಗಳೇ ಇಲ್ಲ. ಈ ವಾಸ್ತವ,ಅಸಮಾನತೆ ಹಿನ್ನೆಲೆಯಲ್ಲಿ ಬಿ.ಜೆ.ಪಿಯ ಹಿರಿಯ ಮುಖಂಡರೆಲ್ಲಾ ಸಮಾಲೋಚನೆ ನಡೆಸಿ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಿ ಬಿ.ಜೆ. ಪಿ.ಯ ಹಿಂದುಳಿದ ವರ್ಗಗಳ ಶಕ್ತಿ ಪ್ರದರ್ಶನ ಮಾಡುವುದೇ ಈ ಸಮಾವೇಶದ ಉದ್ದೇಶ ಎನ್ನಲಾಗಿದೆ.
ಸಿದ್ದಾಪುರ: ತಾಲೂಕಿನಲ್ಲಿ 68.4% ಮತದಾರರನ್ನು ಹೊಂದಿರುವ ಹಿಂದುಳಿದ ವರ್ಗಗಳ ಸಮುದಾಯವನ್ನು ನಮ್ಮ ತಾಲೂಕಿನ ಮಟ್ಟಿಗೆ ಸಂಘಟನೆ ಮಾಡಬೇಕೆಂಬ ಉದ್ದೇಶದಿಂದ ಹಿಂದುಳಿದ ವರ್ಗಗಳ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜೆ.ಪಿ. ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ಕೆ.ಜಿ ನಾಯ್ಕ ಹಣಜಿಬೈಲ್ ಹೇಳಿದರು.
ಅವರು ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ
ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ತಾಲೂಕಿನ ಶಂಕರಮಠದಲ್ಲಿ ಇದೇ ನವೆಂಬರ್ 9 ನಡೆಸಲು ಈ ಹಿಂದೆ ನಿಶ್ಚಯಿಸಿದಂತೆ ಅದರ ತಯಾರಿಗಳು ನಡೆಯುತ್ತಿವೆ.
ತಾಲೂಕಿನಲ್ಲಿ ಒಟ್ಟು 83,379 ಮತದಾರರಿದ್ದಾರೆ ಅದರಲ್ಲಿ 57,043 ಹಿಂದುಳಿದ ವರ್ಗದ ಮತದಾರರು, 17612 ಸಾಮಾನ್ಯವರ್ಗದ ಮತದಾರರು, 4663 ಎಸ್ಸಿ ಎಸ್ಟಿ ಮತದಾರರು, 4061 ಅಲ್ಪಸಂಖ್ಯಾತ ಮತದಾರರು ಇದ್ದಾರೆ ಅಂದರೆ ತಾಲೂಕಿನಲ್ಲಿ 68.4% ಹಿಂದುಳಿದ ವರ್ಗ, 28.1% ಸಾಮಾನ್ಯವರ್ಗ, 5.6% ಎಸ್ಸಿ ಎಸ್ಟಿ, 4.9 % ಅಲ್ಪಸಂಖ್ಯಾತ ಮತದಾರರಿದ್ದಾರೆ. ಹಾಗಾಗಿ 68.4% ಮತದಾರರನ್ನು ಹೊಂದಿರುವ ಹಿಂದುಳಿದ ವರ್ಗಗಳ ಸಮುದಾಯವನ್ನು ನಮ್ಮ ತಾಲೂಕಿನ ಮಟ್ಟಿಗೆ ಸಂಘಟನೆಯನ್ನು ಮಾಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಸಮಾರಂಭಕ್ಕೆ ಆಗಮಿಸಲಿರುವ ಗಣ್ಯರು ಗಳಿಗೆ ಆಮಂತ್ರಣ ಪತ್ರಿಕೆ ನೀಡಿ ಈಗಾಗಲೇ ಆಮಂತ್ರಿಸಲಾಗಿದೆ. ಭಟ್ಕಳದಿಂದ ಕಾರವಾರ ವರೆಗೆ ಇಬ್ಬರು ಎಂಎಲ್ಎ ಗಳನ್ನು ಸೇರಿದಂತೆ ಗಣ್ಯರನ್ನು ಆಮಂತ್ರಿಸುವ ಕಾರ್ಯಕ್ರಮ ಬಾಕಿ ಇದ್ದು ಎಂದು ಅವರನ್ನು ಆಮಂತ್ರಣ ನೀಡಿ ಸಮಾರಂಭಕ್ಕೆ ಕರೆಯಲಾಗುವುದು
ಬೂತ್ ಸಮಿತಿಯಿಂದ ಹಿಡಿದು ರಾಜ್ಯಮಟ್ಟದ ವರೆಗೆ ಯಾರ್ಯಾರು ಹಿಂದುಳಿದ ವರ್ಗಗಳ ಸಮಾಜಕ್ಕೆ ಸೇರಿದ ಕಾರ್ಯಕರ್ತರು ಪದಾಧಿಕಾರಿಗಳು ಇದ್ದಾರೋ ಅವರೆಲ್ಲರನ್ನು ಈ ಸಮಾವೇಶಕ್ಕೆ ಕರೆಯಲು ನಿರ್ಧರಿಸಲಾಗಿದೆ
ಈಗಾಗಲೇ ನಮ್ಮ ಮಂಡಲ ಅಧ್ಯಕ್ಷ ರಾದ ನಾಗರಾಜ್ ನಾಯ್ಕರವರು ಓಬಿಸಿ ಮಂಡಲ ಅಧ್ಯಕ್ಷರಾದ ಬಲರಾಮ ನಾಮದಾರಿ ಯವರು ಅಂದಾಜಿಸಿರುವ ಂತೆ ಸಂಘಟನೆಯ ಬೇರೆಬೇರೆ ಹಂತಗಳಲ್ಲಿ ಅಂದರೆ ಗ್ರಾಮ ಪಂಚಾಯಿತಿ ಸದಸ್ಯರುಗಳು, ಭೂತ್ ಸಮಿತಿಯ ಮೇಲ್ಪಟ್ಟ ಎಲ್ಲ ಹುದ್ದೆಗಳಲ್ಲಿ ಇರುವ ಕಾರ್ಯಕರ್ತರು, ಸದಸ್ಯರು ಸೇರಿ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕಾರಣಿಯಲ್ಲಿ ಸಹ ಹಿಂದುಳಿದ ವರ್ಗ ಎಸ್ಸಿ ಮತ್ತು ಎಸ್ಟೀ ಮತ್ತು ಅಲ್ಪಸಂಖ್ಯಾತರ ಸಮಾವೇಶವನ್ನು ನಡೆಸುವುದರ ಮೂಲಕ ಸಂಘಟನೆಯನ್ನು ಬಲಪಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಅಲ್ಪಸಂಖ್ಯಾತರ ಹಾಗೂ ಎಸ್ಸಿ ಎಸ್ಟಿ ಗಳ ಸಮಾವೇಶವನ್ನು ಜಿಲ್ಲಾಮಟ್ಟದಲ್ಲಿ ನಡೆಸಲಾಗುವುದು. ಈಗಾಗಲೇ ಭಟ್ಕಳದಲ್ಲಿ ಅಲ್ಪಸಂಖ್ಯಾತರ ಸಮಾವೇಶ ಆಗಿದೆ. ದೊಡ್ಡ ಪ್ರಮಾಣದಲ್ಲಿರುವ ಹಿಂದುಳಿದ ವರ್ಗ ದವರನ್ನು ಈ ಒಂದು ಸಂಘಟನೆಯಲ್ಲಿ ತೊಡಗಿಸುವ ಉದ್ದೇಶದಿಂದ, ಹಿಂದುಳಿದ ವರ್ಗಗಳಿಗೆ ಇರುವಂತಹ ಸೌಲಭ್ಯವನ್ನು ಮತ್ತು ಇಲಾಖೆಯ ಮಂತ್ರಿಗಳ ಮುಖಾಂತರ ಗಮನಕ್ಕೆ ತರುವ ಉದ್ದೇಶದಿಂದ ಈ ಸಮಾವೇಶವನ್ನು ನಡೆಸುತ್ತಿದ್ದೇವೆ
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಅಂತ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲು ನಿರ್ಣಯಿಸಲಾಗಿದೆ
ಇದೇ ವೇಳೆಯಲ್ಲಿ ವಿವಿಧ ಪಕ್ಷಗಳಿಂದ ಭಾಜಪ ಪಕ್ಷಕ್ಕೆ ಸೇರ್ಪಡೆಗೊಳ್ಳಲಿರುವ ಅನೇಕರನ್ನು ಗಣ್ಯರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಕೊಳ್ಳುವ ಕಾರ್ಯಕ್ರಮ ನಡೆಯಲಿದೆ
ಭಾರತೀಯ ಜನತಾ ಪಕ್ಷದಲ್ಲಿ ಒಟ್ಟು ಎಂಟು ಮೋರ್ಚಾ ಗಳಿದ್ದು ಅವುಗಳಲ್ಲಿ ಯುವ ಮೋರ್ಚಾ, ಮಹಿಳಾ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ ರೈತ ಮೋರ್ಚಾ, ಎಸ್ಸಿ ಮೋರ್ಚಾ , ಎಸ್ ಟಿ ಮೋರ್ಚಾ ಅಲ್ಪಸಂಖ್ಯಾತರ ಮೋರ್ಚಾ, ಹಾಗೂ ಸ್ಲಮ್ ಮೋರ್ಚ
ಇವುಗಳಲ್ಲಿ ಸ್ಲಂ ಮೋರ್ಚಾದ ಪ್ರಭಾವ ಕಡಿಮೆ ಇರುವುದರಿಂದ ಈ ಸಲ ಸ್ಲಂ ಮೋರ್ಚಾ ಮಾಡಿಲ್ಲ. ಉಳಿದ 7 ಮೋರ್ಚಾಗಳ ಸಕ್ರಿಯವಾಗಿವೆ ಎಂದರು
ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ನಾಗರಾಜ ನಾಯ್ಕ, ಪ.ಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ್ ಹೊನ್ನೆಗುಂಡಿ, ಓಬಿಸಿ ಮೋರ್ಚಾದ ಕಾರ್ಯದರ್ಶಿ ಲೋಕೇಶ ನಾಯ್ಕ, ನಗರ ಮೋರ್ಚ ಅಧ್ಯಕ್ಷ ತೋಟಪ್ಪ ನಾಯ್ಕ, ಶಿವಕುಮಾರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.