ಉತ್ತರ ಕನ್ನಡ ಜಿಲ್ಲೆಯ ವಿಶೇಶ ಎನ್ನುವಂತೆ ಸಿದ್ದಾಪುರದಲ್ಲಿ ಇಂದು ಬಿ.ಜೆ.ಪಿ. ಹಿಂದುಳಿದ ವರ್ಗಗಳ ಸಮಾವೇಶ ನಡೆಯಿತು. ಈ ಸಮಾವೇಶದ ತಯಾರಿ, ಈ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ಪೂರ್ವಸಿದ್ಧತೆ, ನಿಶ್ಚಿತ ಉದ್ದೇಶಗಳಂತೆ ಸಂಘಟಕರು ಬಿ.ಜೆ.ಪಿ. ಹಿಂದುಳಿದ ಮೋರ್ಚಾ ಅಡಿ ಪರಿಶ್ರಮದಿಂದ ಈ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದ ಮೂಲಕ ವೈದಿಕ ಪಾರಮ್ಯದ ಬಿ.ಜೆ.ಪಿ.ಗೆ ಹಿಂದುಳಿದವರ ಶಕ್ತಿ, ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿ ಸಮೀತಿ ಸದಸ್ಯ ಕೆ.ಜಿ.ನಾಯ್ಕರ ಪ್ರಭಾವ ಪ್ರದರ್ಶಿಸುವ ಉದ್ದೇಶವೂ ಈ ಸಮಾವೇಶದ ಹಿಂದಿತ್ತು ಎನ್ನುವುದು ಬಹಿರಂಗ ಗುಟ್ಟು.
ಸಿದ್ಧಾಪುರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಅದರದ್ದೇ ಆದ ಮಹತ್ವ ಇದೆ. ಬಹುಹಿಂದೆ ಬಂಗಾರಪ್ಪ ಮಾರ್ಗದರ್ಶನದಲ್ಲಿ ಸಿದ್ಧಾಪುರದಲ್ಲಿ ನಡೆದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ ಬಂಗಾರಪ್ಪ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸಚಿವರಾಗಲು ಕಾರಣವಾಗಿತ್ತು. ಬದಲಾದ ಸನ್ನಿವೇಶದಲ್ಲಿ ಹಿಂದುಳಿದವರ ಶಕ್ತಿ ಪ್ರದರ್ಶನದ ಮೂಲಕ ಕೆ.ಜಿ. ನಾಯ್ಕರಿಗೆ ಸೂಕ್ತ ಅವಕಾಶ, ಹುದ್ದೆ ಕೊಡಿಸುವ ಯೋಚನೆಯೂ ಇತ್ತು ಎಂದರೆ ಈ ಸಮಾವೇಶದ ಹಿನ್ನೆಲೆ ಅರಿಯಬಹುದು.
ಹಿಂದೆಲ್ಲಾ ನೂರು ಜನರಿಗೆ ಸೀಮಿತವಾಗುತಿದ್ದ ಬಿ.ಜೆ,ಪಿ, ಸಮಾವೇಶಗಳ ಬದಲು ಈ ಬಾರಿಯ ಬಿ.ಜೆ.ಪಿ. ಓಬಿ.ಸಿ.. ಸಮಾವೇಶ ಸಾವಿರ ತಲೆಗಳನ್ನು ಕಂಡಿದ್ದು ಈ ಕಾರ್ಯಕ್ರಮ ಬಿ.ಜೆ.ಪಿ. ಹಿಂದುಳಿದ ವರ್ಗಗಳ ಬೇಗುದಿಗೆ ಸಾಕ್ಷಿ. ಆದರೆ ಈ ಕಾರ್ಯಕ್ರಮಕ್ಕೆ ಪ್ರಮುಖರಾದ ಹರತಾಳ ಹಾಲಪ್ಪ,ಸಚಿವ ಸುನಿಲ್ ಕುಮಾರ್, ಉತ್ತರ ಕನ್ನಡ ಉಸ್ತುವಾರಿ ಸಚಿವರು ಸೇರಿದಂತೆ ಯಾರೊಬ್ಬ ಶಾಸಕರೂ ಬಂದಿರಲಿಲ್ಲ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸಮಾಜಕಲ್ಯಾಣ ಸಚಿವ ಶ್ರೀನಿವಾಸ್ ಪೂಜಾರಿ ಮೋದಿ, ಅಮಿತ್ ಶಾ ಗುಣಗಾನ ಮಾಡಿದರೇ ವಿನ: ಹಿಂದುಳಿದ ವರ್ಗಗಳ ಪ್ರಾಮುಖ್ಯತೆ, ಬಿ.ಜೆ.ಪಿ. ಸರ್ಕಾರ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳ ಮಹತ್ವ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಪ್ರಾತಿನಿಧ್ಯಗಳಲ್ಲಿ ಹಿಂದುಳಿದವರ ಮಹತ್ವ-ಪ್ರಾಮುಖ್ಯತೆಗಳ ಬಗ್ಗೆ ಉಸಿರೇ ಒಡೆಯಲಿಲ್ಲ.
ಇಡೀ ಸಮಾವೇಶದಲ್ಲಿ ಬಿ.ಜೆ.ಪಿ.ಯಲ್ಲಿ ನಾಯಕರ ಆರಾಧನೆ ಇಲ್ಲ ಎನ್ನುವ ಪರಿವಾರದ ಲಾಗಾಯ್ತಿನ-ಸುಳ್ಳು-ಕಪಟನೀತಿಗಳನ್ನು ಪುನರುಚ್ಚರಿಸುತ್ತಾ ಪ್ರಧಾನಿ ಮೋದಿ,ಷಾ ಗಳ ಭಟ್ಟಂಗಿತನ ಮಾಡಿದ್ದು ಬಿಟ್ಟರೆ ಸಚಿವ ಶ್ರೀನಿವಾಸ ಪೂಜಾರಿ ಸಂಘದ ಗುಲಾಮಗಿರಿ ಮೀರಿ ಒಂದೆರಡು ಮಾತನಾಡದಿರುವುದು ಆ ಪಕ್ಷದ ಪಾಳೇಗಾರಿಕೆ ಪ್ರತಿಬಿಂಬಿಸುವಂತಿತ್ತು. ಹಿಂದುತ್ವದ ಆಧಾರದ ಪಕ್ಷದಲ್ಲಿ ವಿವಿಧ ಮೋರ್ಚಾಗಳು, ಸಂಕುಚಿತತೆ ಬಗ್ಗೆ ಲೇವಡಿ ಮಾಡಿದ ಸಂಸದ ಅನಂತಕುಮಾರ ಹೆಗಡೆಯ ಬೊಗಳೆ ಮಾತಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದ್ದು ಬಿ.ಜೆ.ಪಿ.ಯಲ್ಲಿರುವ ಕೆಳವರ್ಗಗಳ ಕಾರ್ಯಕರ್ತರು ನಾಯಕರ ಮೂರ್ಖತನವನ್ನು ಪ್ರತಿಬಿಂಬಿಸುವಂತಿತ್ತು. ಒಟ್ಟಾರೆ ಬಿ.ಜೆ.ಪಿ.ಯ ಬಹುನಿರೀಕ್ಷೆಯ ಹಿಂದುಳಿದ ವರ್ಗಗಳ ಸಮಾವೇಶ ಸಂಘಟಕರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದರೆ ಆಶಾಢಭೂತಿ ಮತಾಂಧ ಮುಖಂಡರ ಬೊಗಳೆ ಬಾಷಣ, ಮೋದಿ ಗುಣಗಾನದಿಂದ ಸಮಾವೇಶದ ಉದ್ದೇಶವೇ ತಲೆಕೆಳಗಾಗುವಂತಾಯಿತು. ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಗೆ ಹಿಂದುಳಿದ ವರ್ಗಗಳ ಮತಗಳೇ ಆಧಾರ ಎನ್ನುವ ಸಂದೇಶ ನೀಡಲಾಯಿತಾದರೂ ಪಕ್ಷ ಹಿಂದುಳಿದ ವರ್ಗಗಳಿಗೆ ಕೊಟ್ಟ ಅವಕಾಶ, ಅನುಕೂಲ, ಮಹತ್ವಗಳನ್ನು ಚರ್ಚಿಸಲು ವಿಫಲವಾದ ಈ ಕಾರ್ಯಕ್ರಮ ಕೆಲವು ನಾಯಕರ ಗುಣಗಾನಕ್ಕೆ ಮೀಸಲಾದದ್ದು ಹಿಂದುಳಿದ ವರ್ಗಗಳ ಬೇಡಿಕೆ, ಹೋರಾಟಕ್ಕೆ ಪಕ್ಷ, ನಾಯಕರು ಕೊಟ್ಟ ಮರ್ಯಾದೆ ಎಂದರೆ ಅದು ಟೀಕೆಯಷ್ಟೇ ಅಲ್ಲ.
https://www.facebook.com/samaajamukhi.net/videos/pcb.421781402883534/193860446232261