

ಬ್ರಾಹ್ಮಣ, ಬನಿಯಾ ಸಮುದಾಯದವರು ನನ್ನ ಜೇಬಿನಲ್ಲಿದ್ದಾರೆ: ಬಿಜೆಪಿ ನಾಯಕ ಮುರಳೀಧರ ರಾವ್
ನಿವೃತ್ತ ನೌಕರರಿಗೆ ಜೀವಿತಾವಧಿ ಪ್ರಮಾಣಪತ್ರ- ಪ್ರತಿವರ್ಷ ನವೆಂಬರ್ ನಲ್ಲಿ ಸಲ್ಲಿಸಬೇಕಾದ ನಿವೃತ್ತ ನೌಕರರ ಜೀವಿತಾವಧಿ ಪ್ರಮಾಣಪತ್ರವನ್ನು ನವೆಂಬರ್ ೧೦ ರಂದು ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ನೀಡಲು ವ್ಯವಸ್ಥೆ ಮಾಡಿದ್ದು ಅವಶ್ಯ ದಾಖಲೆಗಳೊಂದಿಗೆ ನಿವೃತ್ತರು ಇಂದು ಇಲ್ಲಿ ಬಂದು ತಮ್ಮ ಪ್ರಮಾಣ ಪತ್ರ ಸಲ್ಲಿಸಲು ನಿವೃತ್ತ ನೌಕರರ ಸಂಘದ ಸಿದ್ಧಾಪುರ ಘಟಕ ಮನವಿ ಮಾಡಿದೆ. ಈ ಬಗ್ಗೆ ಇತ್ತೀಚೆಗೆ ಬಾಲಭವನ ಸಭಾಂಗಣದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿವೃತ್ತನೌಕರರ ಸಂಘದ ಪದಾಧಿಕಾರಿಗಳು ನಿವೃತ್ತರಿಗೆ ತೊಂದರೆ ಆಗಬಾರದೆಂದು ಒಂದೇ ದಿನ ಒಂದೇ ಸೂರಿನಡಿ ಎಲ್ಲಾ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಜೀವಿತಾವಧಿ ಪ್ರಮಾಣಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಆರ್.ಕೆ.ನಾಯ್ಕ ನಿಧನ- ನಿರಂತರ ನಾಲ್ಕೈದು ಬಾರಿ ಹಾರ್ಸಿಕಟ್ಟಾ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ರಾಮಚಂದ್ರ ಕನ್ನಾ ನಾಯ್ಕ ಮಂಗಳವಾರ ನಿಧನರಾಗಿದ್ದಾರೆ.ಪತ್ನಿ,ಇಬ್ಬರು ಪುತ್ರರೊಂದಿಗೆ ಅಪಾರ ಸ್ನೇಹಿತರು,ಬಂಧು-ಬಳಗ ಹೊಂದಿದ್ದ ನಾಯ್ಕ ಕಾಂಗ್ರೆಸ್ ನ ಹಾರ್ಸಿಕಟ್ಟಾ ಬೂತ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರ ದಿವ್ಯಾತ್ಮಕ್ಕೆ ಸದ್ಗತಿ ಕೋರಿ ಅನೇಕರು ಶೃದ್ಧಾಂಜಲಿ ಅರ್ಪಿಸಿದ್ದಾರೆ.
ಇಂದು ಪ್ರತಿಭಟನೆ- ಸಿದ್ದಾಪುರ ತಾಲೂಕಿನ ಬಿಳಗಿಯಲ್ಲಿ ದನದ ವ್ಯಾಪಾರಿಯನ್ನು ಥಳಿಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಮಾಜವಾದಿ ಪಕ್ಷದಿಂದ ಇಂದು ಬೆಳಿಗ್ಗೆ ಸ್ಥಳಿಯ ಪೊಲೀಸ್ ಠಾಣೆ ಎದುರು ಪ್ರತಿಭಟನಾರ್ಥ ಧರಣಿ ಸತ್ಯಾಗ್ರಹ ನಡೆಯಲಿದೆ. ಈ ಬಗ್ಗೆ ಸಮಾಜವಾದಿ ಪಕ್ಷದ ಪ್ರಕಟಣೆ ತಿಳಿಸಿದೆ.

ಬಿಜೆಪಿ ನಾಯಕ ಪಿ. ಮುರಳೀಧರ ರಾವ್ ಅವರ ‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯದ ಜನರು ನನ್ನ ‘ಜೇಬಿನಲ್ಲಿನದ್ದಾರೆ’ ಎಂಬ ಹೇಳಿಕೆಯು ಭಾರೀ ಗದ್ದಲಕ್ಕೆ ಕಾರಣವಾಗಿದ್ದು, ರಾವ್ ಅವರು ಆ ಸಮುದಾಯಗಳಿಗೆ ಕ್ಷಮೆಯಾಚಿಸಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ.
ಮಧ್ಯಪ್ರದೇಶದ ಉಸ್ತುವಾರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾವ್ ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾವ್, ವಿರೋಧ ಪಕ್ಷವು ತನ್ನ ಹೇಳಿಕೆಯನ್ನು ‘ತಿರುಚಿದೆ’ ಎಂದು ಹೇಳಿದ್ದಾರೆ.
ಭೋಪಾಲ್‌ನಲ್ಲಿರುವ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಪಕ್ಷ ಮತ್ತು ಸರ್ಕಾರವು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲೆ ವಿಶೇಷ ಗಮನಹರಿಸಲಿವೆ. ನಮ್ಮ ಕಾಳಜಿ ಈ ಸಮುದಾಯದ ಜನರಿಗೆ ಉದ್ಯೋಗ ಮತ್ತು ಶಿಕ್ಷಣವನ್ನು ಒದಗಿಸುವುದು. ಈ ಮೂಲಕ ಹಿಂದುಳಿದಿರುವ ಸಮುದಾಯಗಳ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಕೆಲಸ ಮಾಡುತ್ತೇವೆ ಹೊರತು ವೋಟ್ ಬ್ಯಾಂಕ್‌ಗಾಗಿ ಅಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಮಾತನಾಡಿ, ಬಿಜೆಪಿ ಪಕ್ಷದ ಘೋಷಣೆಯು ‘ಎಲ್ಲರೊಂದಿಗೆ, ಪ್ರತಿಯೊಬ್ಬರ ಅಭಿವೃದ್ಧಿಗಾಗಿ’ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಆಗಿರುವ ಸಮಯದಲ್ಲಿ, ರಾವ್ ಅವರು ಎಸ್‌ಸಿ/ಎಸ್‌ಟಿಗಳಿಗೆ ವಿಶೇಷ ಗಮನ ನೀಡುವ ಬಗ್ಗೆ ಮಾತನಾಡುತ್ತಿದ್ದೀರ. ಆದರೆ ಬಿಜೆಪಿಯು ‘ಬ್ರಾಹ್ಮಣ-ಬನಿಯಾ’ಗಳ ಪಕ್ಷವಾಗಿದೆ ಎಂಬ ಗ್ರಹಿಕೆ ಇದೆ. ಅದರ ಬಗ್ಗೆ ನೀವು ಏನು ಹೇಳುತ್ತೀರಿ?’ ಎಂದು ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆಗೆ ಮುರಳೀಧರ ರಾವ್, ತಮ್ಮ ಕುರ್ತಾದ ಜೇಬಿನತ್ತ ತೋರಿಸುತ್ತಾ, ‘ಬ್ರಾಹ್ಮಣರು ಮತ್ತು ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ವೋಟ್ ಬ್ಯಾಂಕ್ ಇದೇ ವರ್ಗದವರು ಹೆಚ್ಚಾಗಿರುವುದರಿಂದ ನೀವು (ಮಾಧ್ಯಮ) ನಮ್ಮನ್ನು ಬ್ರಾಹ್ಮಣ ಮತ್ತು ಬನಿಯಾ ಪಕ್ಷ ಎಂದು ಕರೆದಿದ್ದೀರಿ’ ಎಂದು ಪ್ರತಿಕ್ರಿಯಿಸಿದರು.
‘ಕೆಲವು ವಿಭಾಗಗಳಿಗೆ ಸೇರಿದವರ ಸಂಖ್ಯೆ ಹೆಚ್ಚಿದ್ದಾಗ ಜನರು ಪಕ್ಷ ಅವರದ್ದೇ ಎಂದು ಹೇಳುತ್ತಿದ್ದರು. ನಮ್ಮ ಪಕ್ಷದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದವರ ಪ್ರಾತಿನಿಧ್ಯ ಕಡಿಮೆಯಿದ್ದು, ಅವರನ್ನು ನಮ್ಮೊಟ್ಟಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಎಲ್ಲರನ್ನು ತಲುಪುತ್ತಿದ್ದು ಬಿಜೆಪಿಯನ್ನು ಎಲ್ಲಾ ವರ್ಗದ ಪಕ್ಷವನ್ನಾಗಿ ಮಾಡುತ್ತಿದ್ದೇವೆ’ ಎಂದು ಮುರಳೀಧರ ರಾವ್ ಅವರು ಹೇಳಿದರು.
ರಾವ್ ಅವರ ವಿವಾದಾತ್ಮಕ ಹೇಳಿಕೆಯ 6 ಸೆಕೆಂಡುಗಳ ವೀಡಿಯೋವನ್ನು ವಿರೋಧ ಪಕ್ಷದ ಹಲವಾರು ನಾಯಕರು ಸೇರಿದಂತೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿಯು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷಣೆಯನ್ನು ನೀಡಿದೆ ಮತ್ತು ಅವರ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ರಾಹ್ಮಣರು ಮತ್ತು ಬನಿಯಾಗಳು ತಮ್ಮ ಜೇಬಿನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ’ ಎಂದು ಹೇಳಿದರು.
‘ಬಿಜೆಪಿಯು ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳನ್ನು ತನಗೆ ಬೇಕಾದಂತೆ ಆಡಿಸುತ್ತಿದೆ. ಅದು ಈ ವರ್ಗಗಳಿಗೆ ಮಾಡಿದ ಅವಮಾನವಾಗಿದೆ. ಬಿಜೆಪಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ವರ್ಗಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ? ಬಿಜೆಪಿ ನಾಯಕರು ಅಧಿಕಾರದ ದುರಹಂಕಾರಕ್ಕೆ ಒಳಗಾಗಿದ್ದಾರೆ’ ಎಂದರು.
‘ಬಿಜೆಪಿ ಈ ಸಮುದಾಯಗಳಿಗೆಗ ಕ್ಷಮೆಯಾಚಿಸಬೇಕು’ ಎಂದು ಕಮಲ್ ನಾಥ್ ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಬಗ್ಗೆ ಮಾತನಾಡುವ ಪಕ್ಷ ಈಗ ಅಧಿಕಾರಕ್ಕಾಗಿ ಕೆಲವು ವರ್ಗಗಳ ಮೇಲೆ ಕೇಂದ್ರೀಕರಿಸುತ್ತಿದೆ,” ಎಂದು ಅವರು ಆರೋಪಿಸಿದರು.
ನಂತರ, ವೀಡಿಯೊ ಹೇಳಿಕೆಯಲ್ಲಿ ಮಾತನಾಡಿದ, ರಾವ್ ಅವರು ಕಾಂಗ್ರೆಸ್‌ಗೆ ಸತ್ಯ ಮತ್ತು ಹೇಳಿಕೆಗಳನ್ನು ’ತಿರುಚುವ’ ಅಭ್ಯಾಸವಿದೆ ಎಂದು ಹೇಳಿದರು.
‘ನಾವು ಸಮಾಜದ ವರ್ಗಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಎಲ್ಲಾ ಭಾರತೀಯರು ಅಭಿವೃದ್ಧಿಯ ಭಾಗವಾಗಬೇಕು. ಕಾಂಗ್ರೆಸ್ ದ್ರೋಹ ಬಗೆದಿದೆ ಮತ್ತು ಸಮಾಜದ ಎಲ್ಲಾ ವರ್ಗಗಳನ್ನು ಒಡೆದಿದೆ, ಎಸ್‌ಟಿಗಳು ಹಿಂದುಳಿದಿದ್ದರೆ, ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬುದಷ್ಟೇ ಕಾರಣ.” ಎಂದು ಬಿಜೆಪಿ ಮುಖಂಡರು ತಿಳಿಸಿದರು. (ನಾಗೌ.ಕಾ)



