bit coin scam-2- ಬಿಟ್‌ ಕಾಯಿನ್‌ ಹಗರಣ ಮೋದಿ ನಿರ್ಲಕ್ಷಕ್ಕೆ ನೂರಾರು ಕಾರಣ!

ಪ್ರಧಾನಿ ಮೋದಿ ಬಿಟ್‌ ಕಾಯಿನ್‌ ಹಗರಣದ ಆರೋಪಗಳನ್ನು ನಿರ್ಲಕ್ಷಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಹೇಳಿದ್ದಾರೆ ಎನ್ನುವ ವಿದ್ಯಮಾನದ ಬಗ್ಗೆ ರಾಷ್ಟ್ರದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.

ಬಿಟ್‌ ಕಾಯಿನ್‌ ಹಗರಣ ಬಸವರಾಜ್‌ ಬೊಮ್ಮಾಯಿಯವರ ಸಿ.ಎಮ್.‌ ಕುರ್ಚಿಗೇ ಕಂಟಕವಾಗಲಿದೆ ಎನ್ನುವ ಊಹೆಗಳಿವೆ.

ಬಿಟ್‌ ಕಾಯಿನ್‌ ಹಗರಣದ ಹಿನ್ನೆಲೆಯಲ್ಲಿ ಈ ಬಾರಿ ಕೂಡಾ ಬಿ.ಜೆ.ಪಿ.ಯಿಂದ ರಾಜ್ಯದಲ್ಲಿ ಒಂದು ಅವಧಿಗೆ ಮೂರು ಮುಖ್ಯಮಂತ್ರಿಗಳಾಗುವುದು ಖಾತ್ರಿ ಎನ್ನಲಾಗುತ್ತಿದೆ.

ಇಂಥ ಊಹೆ, ವಿವಾದ,ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಬಿಟ್‌ ಕಾಯಿನ್‌ ವ್ಯವಹಾರ ನೇರ ಕರ್ನಾಟಕದ ರಾಜಕೀಯ, ರಾಜಕಾರಣಿಗಳ ತೊಳ್ಳೆ ನಡುಗಿಸಿದ್ದಂತೂ ಸ್ಪಷ್ಟ.

ತುಸು ಹಿನ್ನೋಟ ಹರಿಸಿದರೆ…. ಬಿ.ಜೆ.ಪಿ. ಮತ್ತು ಬಿಟ್‌ ಕಾಯಿನ್‌ ನಂಟಿನ ಗಂಟು ಬಿಚ್ಚಿಕೊಳ್ಳುತ್ತದೆ. ೨೦೧೪ ರ ನಂತರ ಬಿಟ್‌ ಕಾಯಿನ್‌ ವ್ಯವಹಾರ ಜಾಗತಿಕವಾಗಿ ಪ್ರಾರಂಭವಾಗಿ ಅದೇ ವೇಳೆಗೆ ಭಾರತದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಅಸ್ಥಿತ್ವದಲ್ಲಿದ್ದುದು ಕಾಕತಾಳೀಯ. ಅಲ್ಲಿಂದ ಮುಂದೆ ಬಿಟ್‌ ಕಾಯಿನ್‌ ವ್ಯಹಾರಕ್ಕೆ ಸಂಬಂಧಿಸಿದ ಹಣಕಾಸಿನ ಉತ್ತರದಾಯಿತ್ವದ ಬಗ್ಗೆ ಎನ್.ಡಿ.ಎ.ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದ್ದು ಬಿಟ್ಟರೆ ಬಿಟ್‌ ಕಾಯಿನ್‌ ವ್ಯವಹಾರಕ್ಕೆ ಸಂಬಂಧಿಸಿದ ಪರವಾನಗಿ ಅಥವಾ ನಿಷೇಧದ ಬಗ್ಗೆ ಭಾರತ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟಿಸಲಿಲ್ಲ. ಸುಮಾರು ೨೦೧೬ ರ ನಂತರ ದೆಹಲಿ ಮಟ್ಟದಲ್ಲಿ ಕೇಂದ್ರ ಸಚಿವ ರಾಜನಾಥ ಸಿಂಗ್‌ ಸೇರಿದ ಕೆಲವು ಹಿರಿಯ ನಾಯಕರು ಮುಸ್ಲಿಂ ಮುಖಗಳನ್ನು ಮುಂದಿಟ್ಟುಕೊಂಡು ಕೆಲವು ಬಿಟ್‌ ಕಾಯಿನ್‌ ಕಂಪನಿಗಳನ್ನು ಪ್ರಾರಂಭಿಸುತ್ತಾರೆ.

ಹೀಗೆ ಬಿ.ಜೆ.ಪಿ. ನಾಯಕರು ಅವರ ಕುಟುಂಬದ ಆಪ್ತರ ಪರಿವಾರ ಪ್ರಾರಂಭಿಸಿದ ಬಿಟ್‌ ಕಾಯಿನ್‌ ಕಂಪನಿಗಳಲ್ಲಿ ರುಬೆಕ್ಸ್‌ ಒಂದು. ರುಬೆಕ್ಸ್‌ ಥರದ ಹಲವು ಕಂಪನಿಗಳಲ್ಲಿ ಬಿಟ್‌ ಕಾಯನ್‌ ಟ್ರೇಡಿಂಗ್‌ ಪ್ರಾರಂಭಿಸಿದ ಕೆಲವರು ೨೦೧೮ ರ ಸುಮಾರಿಗೆ ಸರ್ಕಾರದ ಹೊಸ ಆದೇಶ, ಕಾನೂನು, ಸರ್ಕಾರಿ ಮಾನ್ಯತೆಯ ರಗಳೆ ಎಂದೆಲ್ಲಾ ನೆಪ ಹೇಳಿ ಬಿಟ್‌ ಕಾಯಿನ್‌ ಸಂಸ್ಥೆಗಳನ್ನು ಮುಚ್ಚಿ ಹೂಡಿಕೆದಾರರಿಗೆ ಹಣವನ್ನೂ ಕೊಡದೆ ಪರಾರಿಯಾಗುತ್ತಾರೆ.ಇದು ಮೊದಲ ಭಾಗ.

ನಂತರ ಅಂತರಾಷ್ಟ್ರೀಯ ಬಿಟ್‌ ಕಾಯಿನ್‌ ವ್ಯವಹಾರದ ಟ್ರೇಡಿಂಗ್‌, ಮೈನಿಂಗ್‌ ಗಳ ಹಣಕಾಸಿನ ವ್ಯವಹಾರವನ್ನು ಸರ್ಕಾರಕ್ಕೆ ಮಾಹಿತಿ ಒಪ್ಪಿಸಿ ತೆರಿಗೆ ನೀಡಿದರೆ ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಹಾರಕ್ಕೆ ತೊಂದರೆ ಇಲ್ಲ ಎಂದು ಪರಿವಾರ ಪ್ರಚಾರ ಮಾಡಿತು. ಆ ನಂತರ ಕೂಡಾ ಭಾರತದಲ್ಲಿ ಬಿಟ್‌ ಕಾಯಿನ್‌ ವ್ಯವಹಾರಕ್ಕೆ ಮಾನ್ಯತೆ ದೊರೆಯದಿರುವುದು ಬೇರೆ ಕಥೆ. ಈ ದ್ವಂದ್ವ,ಸರ್ಕಾರಿ ವ್ಯವಸ್ಥೆಯ ಕಣ್ಣಳತೆಯಲ್ಲೇ ನಡೆದ ಬಿಟ್‌ ಕಾಯಿನ್‌ ವ್ಯವಹಾರದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರು ಅವರೊಂದಿಗೆ ಬಹುತೇಕ ಅಮಾಯಕರು ಬಿಟ್‌ ಕಾಯಿನ್‌ ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಸಾವಿರಾರು ಕೋಟಿ ವಹಿವಾಟಿನ ಬಿಟ್‌ ಕಾಯಿನ್‌ ದಂಧೆ ಬಿ.ಜೆ.ಪಿ. ಪರಿವಾರ ಅವರ ಆಪ್ತರ ಹೆಸರು, ನೇತೃತ್ವಗಳಲ್ಲಿ ಪ್ರಾರಂಭವಾಗಿ ಈಗ ತಾರ್ಕಿಕ ಅಂತ್ಯ ಕಂಡಿಲ್ಲ. ಈ ನಡುವೆ ಹ್ಯಾಕರ್‌ ಶ್ರೀಕಿ ಜಾಮೀನು ಪಡೆದು ಅನಾಯಾಸವಾಗಿದ್ದಾನೆ.

Business hands joined together teamwork

ಕೆಲವು ಮಾಹಿತಿ-ದಾಖಲೆಗಳ ಪ್ರಕಾರ ಬಿಟ್‌ ಕಾಯಿನ್‌ ಹಗರಣದಲ್ಲಿ ಭಾಗಿಯಾದವರಲ್ಲಿ ಹೆಚ್ಚಿನವರು ಬಿ.ಜೆ.ಪಿ. ಪ್ರಮುಖರು,ಸರ್ಕಾರಿ ಆಯಕಟ್ಟಿನ ಸ್ಥಾನಮಾನಗಳಲ್ಲಿರುವವರು. ಈ ಸತ್ಯದ ವಾಸನೆ ಹಿಡಿದಿರುವ ಪ್ರೀಯಾಂಕ ಖರ್ಗೆ, ದಿನೇಶ್‌ ಗುಂಡೂರಾವ್‌ ಸಿದ್ಧರಾಮಯ್ಯ ಸೇರಿದ ಕೆಲವು ಕಾಂಗ್ರೆಸ್‌ ನಾಯಕರು ಬಿಟ್‌ ಕಾಯಿನ್‌ ವ್ಯವಹಾರ,ಹಗರಣ ಬಿ.ಜೆ.ಪಿಯ ಸರ್ಕಾರಗಳ ಕೆಲವು ಹಗರಣಗಳಲ್ಲೊಂದು ಎಂದು ದೂರುತಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಸಾವಿರಾರು ಕೋಟಿ ಅವ್ಯವಹಾರದ ಬಿಟ್‌ ಕಾಯಿನ್‌ ಪ್ರಕರಣದ ಬಗೆಗಿನ ಆರೋಪಗಳನ್ನು ನಿರ್ಲಕ್ಷಿಸುವಂತೆ ಚುನಾಯಿತ ಸರ್ಕಾರದ ಮುಖ್ಯಮಂತ್ರಿಗೆ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯೊಬ್ಬ ರು ಕೂರಿಸಿ,ಸಮಾಧಾನದಿಂದ ಹೇಳಿ ಕಳಿಸುತ್ತಾರೆಂದರೆ….

.ಅಲ್ಲಿ ಸಂಶೋಧಿಸಬಹುದಾದ ವಾಸ್ತವ-ಸತ್ಯಗಳ ಕಂತೆ ಹುದುಗಿದೆಯೆಂದೇ ಅರ್ಥ. ಅಷ್ಟಕ್ಕೂ ಪ್ರಧಾನಿ ಮೋದಿ ಪ್ರಭಾವಿಗಳ ಸಾಲ ಮನ್ನಾ, ರಾಫೇಲ್‌ ಡೀಲ್‌, ಬೆಳೆವಿಮೆವ್ಯವಹಾರ ಸೇರಿದಂತೆ ಅನೇಕ ವ್ಯವಹಾರಗಳನ್ನು ನಿರ್ಲಕ್ಷಿಸಿಕೊಂಡು ಪರಿವಾರವನ್ನು ರಕ್ಷಿಸಿದವರಲ್ಲವೆ? ಧರ್ಮೋ…….ರಕ್ಷತಿ

ಬಿ.ಜೆ.ಪಿ. ಪರಿವಾರದ ಬಿಟ್‌ ಕಾಯಿನ್‌ ಮೌನದ ಹಿಂದೆ ಈ ಹಿಂದಿನ ಮೌನ, ನಿರ್ಲಿಪ್ತತೆಗಳ ಶಾಖ-ನೆರಳುಗಳಿವೆ. ಈ ಹಿತಕರ ವಾತಾವರಣ ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ಎಲ್ಲಾ ಕಾಲದಲ್ಲಿ ಎಲ್ಲರನ್ನೂ ವಂಚಿಸಲೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಬಿಟ್‌ ಕಾಯಿನ್‌ ನಂಥ ವ್ಯವಹಾರಗಳೇ ಸಾಬೀತು ಮಾಡಬಲ್ಲವು. ದುರಂತವೆಂದರೆ ಸ್ವಯಂಘೋಶಿತ ರಾಷ್ಟ್ರೀ ಯವಾದಿಗಳು, ದೇಶಪ್ರೇಮಿಗಳು ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲು ಕುಡಿಯುವುದನ್ನು ನೋಡುತ್ತಾ ಕೂರುವ ಜನಸಾಮಾನ್ಯ ಇವರ ಹಗಲುವೇಶದ ತೆರಿಗೆ ತುಂಬಿ ರೋಗ-ರುಜಿನ,ಅಪಘಾತಗಳ ನೆಪದಲ್ಲಿ ಸಾಯಲೂ ಸಿದ್ಧನಾಗಿರುವುದು ಒಪ್ಪಿತ ಸತ್ಯವಾಗುತ್ತಿರುವ ಆಘಾತ.

ಸರ್ಕಾರದ ಯಾವೊಬ್ಬ ನಾಯಕನೂ ಕೂಡ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ, ನಾವು ಯಾರನ್ನೂ ರಕ್ಷಿಸುತ್ತಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ರಾಜ್ಯ ಸರ್ಕಾರ ಯಾವುದೇ ನಾಯಕನೂ ಕೂಡ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ. ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ.

File photo

ಬೆಂಗಳೂರು: ರಾಜ್ಯ ಸರ್ಕಾರ ಯಾವುದೇ ನಾಯಕನೂ ಕೂಡ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿಲ್ಲ. ನಾವು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುಜರಾತ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಸನ್ಮಾನ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಟ್ ಕಾಯಿನ್ ಹಗರಣದ ಕುರಿತು ಪ್ರಸ್ತಾಪ ಮಾಡುತ್ತಿರುವವರು ವಾಸ್ತವವಾಗಿ ಹಗರಣ ಏನೆಂದು ನಿಖರವಾಗಿ ತಿಳಿಸಲಿ. ಇದನ್ನು ಸಾಬೀತು ಪಡಿಸುವ ದಾಖಲೆಗಳನ್ನು ಈಗಾಗಲೇ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿ, ಆರೋಪಗಳನ್ನು ಸಾಬೀತು ಪಡಿಸಲಿ. ಸರ್ಕಾರದ ಯಾವುದೇ ನಾಯಕರೂ ಕೂಡ ಹಗರಣದಲ್ಲಿ ಭಾಗಿಯಾಗಿಲ್ಲ. ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಪ್ರತಿದಿನ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಬಯಸುವುದಿಲ್ಲ. ಈ ಕುರಿತು ಆರೋಪಗಳನ್ನು ಮಾಡುತ್ತಿರುವವರು ಹಗರಣ ಏನು ಹಾಗೂ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತಿಳಿಸಲಿ. ಈಗಾಗಲೇ 8-9 ತಿಂಗಳ ಹಿಂದೆಯೇ ಪ್ರಕರಣವನ್ನು ಇಡಿಗೆ ಹಸ್ತಾಂತರಿಸಲಾಗಿದೆ. ಅಂತರಾಷ್ಟ್ರೀಯ ವಿಷಯವಾಗಿರುವುದರಿಂದ ಸಿಬಿಐನ ಇಂಟರ್ ಪೋಲ್ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ. ಈ ಹಗರಣದ ಮೊತ್ತದ ಬಗ್ಗೆ ವಿಭಿನ್ನ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಯಾವುದೇ ದಾಖಲೆಗಳ ಆಧಾರವಿಲ್ಲ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೂ ಇಲ್ಲ. ನಾವು ಯಾರೂ ಭಾಗಿಯಾಲ್ಲ ಎಂದರು.

ಮುಖ್ಯಮಂತ್ರಿ ಹುದ್ದೆಗೆ ಸಂಚಕಾರ ಬರಲಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಎಂದಷ್ಟೇ ತಿಳಿಸಿದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. S.ಬಂಗಾರಪ್ಪ ತತ್ವ ಉಳ್ಳ ನನಗಿಷ್ಟವಾಗುವ ರಾಜಕಾರಣಿ ಸಿದ್ದಾಪುರದ ಬಂಗಾರಪ್ಪ. ವಸಂತ್ ನಾಯ್ಕ್ ಮನಮನೆ. ಸಿರ್ಸಿ ಸಿದ್ದಾಪುರ ಭೀಮಣ್ಣ M. L. A. ಆಗ್ತಾರೆ ಅಂದ್ರೆ ಅದು ಇಂತ ರಾಜಕಾರಣಿಯಿಂದ ಮಾತ್ರ. ಸಾಧ್ಯ ಆಗೇ ಅಕ್ತಾರೆ

Leave a Reply

Your email address will not be published. Required fields are marked *