ಧಾವಂತದ ಸುದ್ದಿ, ಎಡವಟ್ಟು ಬೇಡ. ಸಿಎಂ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಅಭಿಪ್ರಾಯ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ‘ಧಾವಂತದ ಸುದ್ದಿ, ಎಡವಟ್ಟು ಬೇಡ’; ಸಿಎಂ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಅಭಿಪ್ರಾಯ

ನಾವೇ‌ ನೊಟ್ಟ ಮೊದಲು ಸುದ್ದಿ ಕೊಡಬೇಕೆನ್ನುವ ಧಾವಂತದಲ್ಲಿ ಎಡವಟ್ಟುಗಳನ್ನು ಮಾಡುವ ಕಾರ್ಯವನ್ನು ಮಾಧ್ಯಮದವರು ಮಾಡಬಾರದು ಎಂದು ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿ ಜಿ.‌ಜಗದೀಶ್ ಅವರು ಅಭಿಪ್ರಾಯಪಟ್ಟರು.

Information commissioner G Jagadiesh Malalagadde speaks on celebration on national press day at Karnataka media academy

ಬೆಂಗಳೂರು: ನಾವೇ‌ ಮೊಟ್ಟ ಮೊದಲು ಸುದ್ದಿ ಕೊಡಬೇಕೆನ್ನುವ ಧಾವಂತದಲ್ಲಿ ಎಡವಟ್ಟುಗಳನ್ನು ಮಾಡುವ ಕಾರ್ಯವನ್ನು ಮಾಧ್ಯಮದವರು ಮಾಡಬಾರದು ಎಂದು ಬಸವರಾಜ ಬೊಮ್ಮಾಯಿ ಅವರ ಜಂಟಿ ಕಾರ್ಯದರ್ಶಿ ಜಿ.‌ಜಗದೀಶ್ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಕರ್ನಾಟಕ ಮಾಧ್ಯಮ‌ ಅಕಾಡೆಮಿ‌ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ ವಿಚಾರಗೋಷ್ಠಿ‌ ಉದ್ಘಾಟಿಸಿ ಮಾತನಾಡಿದರು. “ಅವಸರದಲ್ಲಿ ಬ್ರೇಕಿಂಗ್ ಕೊಡುವಾಗ ಪ್ರಮಾದಗಳಾಗುತ್ತವೆ ಎಂಬುದಕ್ಕೆ ಅವರು ತಮ್ಮ ಅನುಭವವನ್ನೇ ಉದಾಹರಣೆಯನ್ನಾಗಿ ನೀಡಿದರು. ಶಿರಸಿಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಟಿವಿಯೊಂದರಲ್ಲಿ ವಿಭಾಗಾಧಿಕಾರಿ ಜಗದೀಶ್ ಹಠಾತ್ ಮರಣ ಎಂಬ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಕ್ಷೇತ್ರದ‌ ಶಾಸಕರು ಮಂತ್ರಿಯಾಗಿದ್ದರು. ‌ಅವರು ಗಾಬರಿಯಿಂದ ವಿಚಾರಿಸಿದ್ದರು. ನನ್ನ ಪತ್ನಿ, ಪೋಷಕರು ನೋಡಿದ್ದರೆ ಅವರಿಗೆ ಹೃದಯಾಘಾತವಾಗುತ್ತಿತ್ತೇನೋ ಎಂದು ಆತಂಕ ವ್ಯಕ್ತಪಡಿಸಿದರು. ‌ಯಾವುದೇ ಸುದ್ದಿ ನೀಡುವ ಮುನ್ನ ಎರಡೆರಡು ಬಾರಿ ಖಚಿತಪಡಿಸಿಕೊಳ್ಳಿ” ಎಂದುಸಲಹೆನೀಡಿದರು.

“ಕಳೆದ 14 ವರ್ಷಗಳ ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಸಂಘರ್ಷ ಮಾಡಿಕೊಂಡಿಲ್ಲ. ಮಾಧ್ಯಮಗಳಿಂದ ಸರ್ಕಾರದ ನೀತಿ ನಿರೂಪಣೆಯನ್ನು ತಕ್ಷಣ ತಿಳಿಸುವುದು ಸಾಧ್ಯ. ನಮ್ಮದು ದೊಡ್ಡ ಪ್ರಜಾಪ್ರಭುತ್ವ. ‌ಮಾಧ್ಯಮ‌ ನಾಲ್ಕನೆ ಅಂಗ. ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣ ಇರಬೇಕು” ಎಂದರು.

“ಪತ್ರಕರ್ತರು ಅಂದರೆ ವರದಿ ಮಾಡುವುದು. ಆದರೆ ಕೆಲವರು ನ್ಯೂಸ್ ಕ್ರಿಯೇಟ್ ಮಾಡುತ್ತಾರೆ. ಇದು ಸರಿಯಾದ ಕೆಲಸವಲ್ಲ. ಇದ್ದಿದ್ದನ್ನು ವರದಿ ಮಾಡಬೇಕು. ‌ಇದರಿಂದ ಸಮಾಜವನ್ನು ಎಚ್ಚರಿಸಬೇಕು. ಮಾಧ್ಯಮದವರು ಸರ್ಕಾರದ ರಚನಾತ್ಮಕ ಟೀಕಾಕಾರರು. ಪ್ರತಿಪಕ್ಷಗಳ ಮಿತ್ರರು ಎಂದು ಅಭಿಪ್ರಾಯ ಪಟ್ಟರು. ಸಮಾಜದ‌ ಕಣ್ಣುಕಿವಿ ಮಾಧ್ಯಮ.‌ ಇವುಗಳಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ”‌ ಎಂದರು.

ಖ್ಯಾತನಟ ರಮೇಶ್ ಅರವಿಂದ್ ಮಾತನಾಡಿದರು. “ನಾನು ಜನರಿಗೆ ಗೊತ್ತಾಗಿದ್ದು ಮಾಧ್ಯಮಗಳಿಂದ. ಮೀಡಿಯಾದಿಂದ ಅಪಾರ ಜನರನ್ನು ತಲುಪುತ್ತೇವೆ. ಅದು ಶಕ್ತಿ, ಪದಗಳ ಜಾದೂ. ಮೈಂಡ್ ಬದಲಾಯಿಸುವ ಶಕ್ತಿಯಿದೆ. ನಾನು ಎಡವಿದಾಗ ಮಾಧ್ಯಮ‌ ಮಿತ್ರರು ತಿದ್ದಿದ್ದಾರೆ. ಸೋಶಿಯಲ್‌ ಮೀಡಿಯಾ ಬಂದ ನಂತರ ಎಲ್ಲರೂ ಮೀಡಿಯಾದವರೇ ಆಗಿದ್ದಾರೆ. ಪ್ರತಿಯೊಬ್ಬರಿಗೂ ಅಲ್ಲಿ ಅವಕಾಶವಿದೆ. ವೇದಿಕೆಯಿದೆ. ಅದು ಮೈಕ್ ಆಗಿದೆ. ಮೀಡಿಯಾ ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನಿರೂಪಿಸಿದರು. “ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟದ ಫಲವಾಗಿ ಮಾಧ್ಯಮ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಈಗ ಒಂದು ಕೋಟಿ ಅನುದಾನ ಬಂದಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದರು.

ಮಾಧ್ಯಮ ಕಂಡರೆ ಯಾರಿಗೆ ಭಯವಿಲ್ಲ ಎಂಬ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ ಅವರು, “ಶ್ರಮಿಕ ವರ್ಗ, ರೈತಾಪಿ ವರ್ಗಕ್ಕೆ ಮಾಧ್ಯಮ‌ ಕಂಡರೆ ಭಯವಿಲ್ಲ. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ” ಎಂದು ಅಭಿಪ್ರಾಯಪಟ್ಟರು.

ಮಾಧ್ಯಮ‌ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿದರು. “ರಾಷ್ಟ್ರೀಯ ‌ದಿನಾಚರಣೆಯನ್ನು ಮಂಗಳೂರಿನಲ್ಲಿ ಮಾಡಬೇಕು ಅಂತ ಇತ್ತು.‌ ಚುನಾವಣೆ ನೀತಿ ಸಂಹಿತೆಯಿಂದದಾಗಿ ಬೆಂಗಳೂರಿನಲ್ಲಿ ಮಾಡಿದೆವು. ಮಾಧ್ಯಮಗಳ ಎಲ್ಲ ವಿಭಾಗದವರು ಬಂದಿದ್ದಾರೆ” ಎಂದರು.

“ಮಾಧ್ಯಮ‌ ಅಕಾಡೆಮಿ 40ನೇ ವರ್ಷದ ಸಂಭ್ರಮದಲ್ಲಿದೆ. 40 ಪುಸ್ತಕ ತರುವ ಯೋಜನೆಯಿದೆ. ಈಗಾಗಲೇ ಆಚರಣೆ ಆರಂಭಿಸಿದ್ದೇವೆ” ಎಂದು ಮಾಹಿತಿ ನೀಡಿದರು. ಹಿರಿಯ ಪತ್ರಕರ್ತರು, ಮಾಧ್ಯಮ‌ ಅಕಾಡೆಮಿಯ ಸದಸ್ಯರುಗಳು ಹಾಜರಿದ್ದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *