

ಈ ಭಾರಿ ವಿಧಾನ ಪರಿಷತ್ ಚುನಾವಣೆ(Legislative council election)ಯಲ್ಲಿ ಬಿಜೆಪಿ ಗೆಲ್ಲಲೇಲೇಬೇಕಾಗಿದೆ. ಇನ್ನೆರಡು ದಿನದಲ್ಲಿ ಹೆಸರು ಘೋಷಣೆಯಾಗಲಿದೆ. ಆದರೆ, ಈಗಾಗಲೇ ನಿಮಗೆಲ್ಲರಿಗೂ ಈ ಬಗ್ಗೆ ಗೊತ್ತಾಗಿರಬಹುದು ಎಂದು ಪರೋಕ್ಷವಾಗಿ ಗಣಪತಿ ಉಳ್ವೇಕರ್ ಅವರಿಗೆ ಟಿಕೆಟ್ ಬಹುತೇಕ ಖಾತ್ರಿಯಾಗಿರುವುದನ್ನು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ದೃಢಪಡಿಸಿದ್ದಾರೆ.

ಕಾರವಾರ: ವಿಧಾನಪರಿಷತ್ ಚುನಾವಣೆ(Legislative council election)ಗೆ ಬಿಜೆಪಿಯಿಂದ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಅವರಿಗೆ ಬಹುತೇಕ ಟಿಕೆಟ್ ಬಹುತೇಕ ಫೈನಲ್ ಆಗಿದ್ದು, ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗ್ತಿದೆ.
ವಿಧಾನ್ ಪರಿಷತ್ ಚುನಾವಣೆ ( legislative council election) ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜನಸ್ವರಾಜ್ ಸಮಾವೇಶದ ಕಾರ್ಯಕ್ರಮದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಗಣಪತಿ ಉಳ್ವೇಕರ್ ಅವರಿಗೆ ಸುಳಿವು ನೀಡಿದ್ದರು.
ಇದರ ಬೆನ್ನಲ್ಲೇ ಗಣಪತಿ ಉಳ್ವೇಕರ್ ಅವರಿಗೂ ಸಮಾವೇಶದಲ್ಲಿ ಮಾತನಾಡಲು ಅವಕಾಶ ನೀಡಲಾಗಿತ್ತು. ಬಳಿಕ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಮಾತನಾಡುವಾಗ ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆಯಲೇಬೇಕಾಗಿದೆ. ಇನ್ನೆರಡು ದಿನದಲ್ಲಿ ಹೆಸರು ಘೋಷಣೆಯಾಗಲಿದೆ. ಆದರೆ, ಈಗಾಗಲೇ ನಿಮಗೆಲ್ಲರಿಗೂ ಈ ಬಗ್ಗೆ ಗೊತ್ತಾಗಿರಬಹುದು ಎಂದು ಪರೋಕ್ಷವಾಗಿ ಗಣಪತಿ ಉಳ್ವೇಕರ್ ಅವರಿಗೆ ಟಿಕೆಟ್ ಖಾತ್ರಿಯಾಗಿರುವುದನ್ನು ದೃಢಪಡಿಸಿದ್ದಾರೆ. (etbk)
