ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಅಕಾಲಿಕ ಮಳೆ ರೈತರಿಗೆ ಹಾನಿ ಮಾಡಿದೆ. ಬೆಳೆನಾಶ, ಪ್ರಕೃತಿಯೊಂದಿಗೆ ಸೆಣಸಾಡುತ್ತಿರುವ ರೈತ ಈ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದು ಕೆಲವೆಡೆ ಆತ್ಮಹತ್ಯೆಗಳು ಕೂಡಾ ನಡೆಯುತ್ತಿವೆ. ಈ ಬಗ್ಗೆ ತೀವೃ ಕಳವಳ ವ್ಯಕ್ತಪಡಿಸಿರುವ ರಾಜ್ಯ ವಿಧಾನಸಭೆಯ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದಾರೆ.
ತಮ್ಮ ಕ್ಷೇತ್ರ ಶಿರಸಿ-ಸಿದ್ಧಾಪುರಗಳಲ್ಲಿ ಅಕಾಲಿಕ ಮಳೆಯ ಹಾನಿ ಪರಿಶೀಲಿಸಿದ ವಿಧಾನಸಭಾ ಅಧ್ಯಕ್ಷರು ರಾಜ್ಯದ ರೈತರು ಧೃತಿಗೆಡುವ ಅಗತ್ಯವಿಲ್ಲ.ರಾಜ್ಯಸರ್ಕಾರ ನೊಂದ ರೈತರ ಪರವಾಗಿದೆ. ಬೆಳೆವಿಮೆ, ಬೆಳೆಸಮೀಕ್ಷೆ ಇತ್ಯಾದಿ ಸರ್ಕಾರದ ಪ್ರಯತ್ನ, ರೈತರ ಹಿತಕಾಪಾಡುವ ಯತ್ನಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಮಾಡುತ್ತಿದೆ. ಎಂದಿದ್ದಾರೆ.
ಬೆಳೆಸಮೀಕ್ಷೆ, ಬೆಳೆಹಾನಿ ವರದಿ ಮಾಡುವ ಮೂಲಕ ಅಧಿಕಾರಿಗಳು ಸರ್ಕಾರದ ಪರಿಹಾರ, ಬೆಳೆವಿಮೆ, ಪ್ರಕೃತಿ ವಿಕೋಪದಡಿ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಲು ಕೆಲಸ ಮಾಡುತಿದ್ದಾರೆ ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕ್ಷೇತ್ರ ಸಮೀಕ್ಷೆ ವೇಳೆ ಸ್ಫೀಕರ್ ಕಾಗೇರಿಯವರಿಗೆ ರೈತರು ತಮ್ಮ ಬವಣೆ ಹೇಳಿಕೊಂಡರು. ರೈತರ ಅಹವಾಲು, ಅನಿವಾರ್ಯತೆಗಳನ್ನು ಕೇಳಿ ಸಾಂತ್ವನ ಹೇಳಿದ ಅವರು ನಗರ ಗ್ರಾಮೀಣ ಪ್ರದೇಶಗಳೆನ್ನದೆ ರಾಜ್ಯದಾದ್ಯಂತ ಮಳೆ ಹಾನಿ ಗಣನೀಯ ಪ್ರಮಾಣದಲ್ಲಿ ಆಗಿದೆ. ಈ ಹಾನಿ. ತೊಂದರೆಗೆ ಹೆದರದಂತೆ ರೈತರಿಗೆ ಧೈರ್ಯನೀಡುವ ಕೆಲಸವನ್ನು ಸ್ಥಳಿಯ ಜನಪ್ರತಿನಿಧಿಗಳು, ಸಹಕಾರಿ ಕ್ಷೇತ್ರ ಮಾಡಬೇಕು. ಇದಕ್ಕೆ ಅಗತ್ಯ ನೆರವು ನೀಡಲು ಸರ್ಕಾರವನ್ನೂ ಕೋರಬೇಕು ಎಂದರು.
ಸ್ಥಳದಲ್ಲಿದ್ದ ಸ್ಥಳಿಯ ಜನಪ್ರತಿನಿಧಿಗಳು ರೈತರ ಪರವಾಗಿ ತಮ್ಮ ಬೇಡಿಕೆ ಸಲ್ಲಿಸಿದರು.ಇದಕ್ಕೆ ಪ್ರತಿಕ್ರೀಯಿಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ,ನ್ಯಾಯ ಒದಗಿಸುವ ಭರವಸೆ ನೀಡಿದರು.