

ಅಕಾಲಿಕ ಮಳೆಯಿಂದ ಭತ್ತ ಮತ್ತು ಮೇವು ಹಾಳಾಗಿದ್ದು ಭತ್ತದ ಬೆಳೆ ಮತ್ತು ಹಾಲಿನ ಉತ್ಫಾದನೆ ಮೇಲೆ ಪರಿಣಾಮವಾದರೆ ಭವಿಷ್ಯ ಕರಾಳವಾಗಲಿದೆ ಎಂದು ಎಚ್ಚರಿಸಿರುವ ಜನತಾದಳ ಜಾತ್ಯಾತೀತ ಮುಖಂಡ ಡಾ.ಶಶಿಭೂಷಣ ಭತ್ತ ಮತ್ತು ಮೇವಿನ ಹಾನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳೆ ಹಾನಿಯಾದ ಸಿದ್ಧಾಪುರ ಪೂರ್ವಭಾಗದ ಭತ್ತದ ಕ್ಷೇತ್ರ ಸಂದರ್ಶಿಸಿ,ಹಾನಿಗೊಳಗಾದ ರೈತರೊಂದಿಗೆ ಮಾತನಾಡಿದ ಅವರು
ಬೆಳೆಹಾನಿಯಾದ ರೈತರ ಪರವಾಗಿ ನಿಲ್ಲಬೇಕಾಗಿದ್ದ ರಾಜ್ಯ ಸರ್ಕಾರ ಜನಸ್ವರಾಜ್ ಯಾತ್ರೆ ನಡೆಸುತ್ತಿದೆ. ಸರ್ಕಾರ ಜವಾಬ್ಧಾರಿಯಿಂದ ನುಣುಚಿಕೊಳ್ಳುತ್ತಿದೆ. ಹಿಂಗಾರಿನಲ್ಲಿ ಕೂಡಾ ೫ ಸೆಂಟಿಮೀಟರ್ ಮಳೆ ಬಿದ್ದರೆ ಮಾತ್ರ ಬೆಳೆವಿಮೆ ಎನ್ನುವ ಬೆಳೆವಿಮೆ ನಿಯಮ ಅವೈಜ್ಞಾನಿಕ ಕೊಯ್ಲಿನಸಮಯದಲ್ಲಿ ೫ ಮಿ.ಮೀ. ಮಳೆ ಬಿದ್ದರೂ ಬೆಳೆಹಾಳಾಗಿ ರೈತರಿಗೆ ತೊಂದರೆಯಾಗುತ್ತದೆ ಈ ಬಗ್ಗೆ ಸರ್ಕಾರ ಜವಾಬ್ಧಾರಿಯ ನಡೆ ಪ್ರದರ್ಶಿಸಬೇಕು. ಈ ವರ್ಷದ ಮಳೆಹಾನಿಯನ್ನು ವಿಶೇಶ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಬೇಕು. ರೈತರ ವಿಚಾರದಲ್ಲಿ ಸರ್ಕಾರ ಜವಾಬ್ಧಾರಿಯಿಂದ ನಡೆದುಕೊಳ್ಳದಿದ್ದರೆ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


