ಇದೇ ತಿಂಗಳು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಯುವಘಟಕಗಳ ಅಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಯಿತು. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗ ಗುಟ್ಟು.
ಈ ಪ್ರಕರಣಕ್ಕಿಂತ ಸ್ವಲ್ಪ ಮೊದಲು ಸಿದ್ಧಾಪುರ ಬಿಳಗಿಯಲ್ಲಿ ಕೆಲವು ಪುಂಡರು ದನದ ವ್ಯಾಪಾರಿ ಗೋವಿಂದ ಗೌಡರ ಮೇಲೆ ಹಲ್ಲೆ ನಡೆಸಿದರು.ಈ ಪ್ರಕರಣದಲ್ಲಿ ಪೊಲೀಸರು ಗೋವಿಂದ ಗೌಡರನ್ನು ಹೊಂದಾಣಿಕೆಗೆ ಬರುವಂತೆ ಒತ್ತಡ ತಂದರು.
ಈ ಘಟನೆಗಳಿಗಿಂತ ಸ್ಪಲ್ಪ ಹಿಂದೆ ಸ್ಥಳಿಯ ಶಾಸಕರು ನಾಮಧಾರಿ ಕಲ್ಯಾಣಮಂಟಪಕ್ಕೆ ಮಂಜೂರಿಯಾದ ಅನುದಾನ ತಡೆಹಿಡಿದರು. ನಂತರ ಸರಿಸುಮಾರು 9 ನೇ ಬಾರಿ ಮುಖ್ಯಂಂತ್ರಿಗಳು ನಾಮಧಾರಿ ಸಭಾಭವನಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಮತ್ತೆ ಸುದ್ದಿಯಾಯಿತು. (ಪ್ರಚಾರ ನೀಡಲಾಯಿತು)
ಈ ಪ್ರಕರಣಗಳನ್ನು ಪ್ರತ್ಯೇಕವಾಗಿ ನೋಡಿದರೆ ಸಂಶಯಕ್ಕೆ ಅವಕಾಶವಿಲ್ಲ ಆದರೆ ಈ ಪ್ರಕರಣಗಳ ಹಿಂದುಮುಂದಿನ ವಿದ್ಯಮಾನಗಳನ್ನು ಅವಲೋಕಿಸಿದರೆ ಸ್ಥಳಿಯ ಶಾಸಕ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದೊಡ್ಡ ಸಮೂದಾಯಕ್ಕೆ ಸೆಡ್ಡು ಹೊಡೆಯುತ್ತಿರುವಂತೆ ಭಾಸವಾಗುತ್ತಿದೆ.
ಪ್ರಕರಣ ಒಂದು- ಉತ್ತರ ಕನ್ನಡ ಜಿಲ್ಲೆಯ ಬಿ.ಜೆ.ಪಿ. ಕಾಗೇರಿ ಆಪ್ತರಲ್ಲಿ ಪ್ರಮುಖರಾಗಿದ್ದ ಕೆ.ಜಿ.ನಾಯ್ಕ ಹಣಜಿಬೈಲ್ ಚುನಾವಣೆ ಮೊದಲು ನಾಮಧಾರಿಗಳಿಗೆ ನಿಗಮ ಮಂಡಳಿ ಅಥವಾ ಪ್ರಮುಖ ಸ್ಥಾನ ಮಾನ ಕೇಳಿ ಕಾಗೇರಿಯವರಿಂದ ದೂರಾಗುವಂತಾಯಿತು.
ಪ್ರಕರಣ 2- ಸಿದ್ಧಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ದೀವರನ್ನು ಓಲೈಸಲು ಕಾಗೋಡು ತಿಮ್ಮಪ್ಪ,ಕುಮಾರ ಬಂಗಾರಪ್ಪ, ಹಾಲಪ್ಪರನ್ನು ಬಳಸಿಕೊಳ್ಳುತಿದ್ದ ಕಾಗೇರಿ ಈಗ ಅರಗಜ್ಞಾನೇಂದ್ರ ಮೂಲಕ ಒಕ್ಕಲಿಗರ ಮನ ಒಲಿಸುವ ಕೆಲಸ ಪ್ರಾರಂಭಿಸಿದ್ದಾರೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ.
ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಲಗದ್ದೆಯಲ್ಲಿ ರಾಜಮಾನ್ಯ ಪ್ರಶಸ್ತಿ ನೀಡಲು ಗೃಹಸಚಿವ ಅರಗಜ್ಞಾನೇಂದ್ರರೇ ಬರಬೇಕು, ಅಲ್ಲಿ ಒಕ್ಕಲಿಗರಿಂದ ಅರಗಜ್ಞಾನೇಂದ್ರರಿಗೆ ಸನ್ಮಾನ ಆಗಬೇಕೆಂದು ಕಾರ್ಯಕ್ರಮದ ರೂಪರೇಷೆ ಕೊಟ್ಟವರೇ ಕಾಗೇರಿಯವರಂತೆ!
ಇಲ್ಲಿಗೆ ದೀವರ ಸಹವಾಸ ತನಗೆ ಅಗತ್ಯವಿಲ್ಲ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸವಾಲು ಹಾಕಿದಂತಾಯಿತು. ಇದರ ಮುಂದುವರಿದ ಭಾಗವೆಂದರೆ ತಾವು ಹೇಳಿದ್ದನ್ನು ಮಾತ್ರ ಚಾಚೂ ತಪ್ಪದೆ ಬರೆಯುವವರು, ತಾವು ಹೇಳದೇ ಇದ್ದುದನ್ನು ಬರೆಯುವವರು ಎಂದು ವಿಂಗಡಿಸಿದ್ದಾರಂತೆ.
ಸರಳ-ಸಜ್ಜನ ಎನ್ನುವ ಗುರುತರ ಆರೋಪಗಳಿಗೆ ತುತ್ತಾಗಿರುವ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಕೀಯ ಸೇಡು ಪ್ರಾರಂಭಿಸಿರುವುದು, ಅದರ ಅಂಗವಾಗಿ ತಮ್ಮ ವಂದಿಮಾಗಧರು, ವಿರೋಧಿಗಳೆಂದು ವಿಂಗಡಿಸಿಕೊಂಡಿರುವುದು. ಇವೆಲ್ಲಕ್ಕಿಂತ ಮುಖ್ಯವಾಗಿ ಅಮಾಯಕ ಪರಿಶಿಷ್ಟರನ್ನು ಎತ್ತಿಕಟ್ಟಿ ತಮ್ಮ ವಿರೋಧಿಗಳ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸುತ್ತಿರುವುದು, ಸ್ವಯಂ ತಾವೇ ಕಾರ್ಯಕ್ರಮ ರೂಪಿಸಿಕೊಂಡು ಸನ್ಮಾನ, ಪ್ರಶಸ್ತಿಯ ಹೆಸರಿನಲ್ಲಿ ತಮ್ಮನ್ನೇ ಬಿಂಬಿಸಿಕೊಳ್ಳುವುದು, ಈ ಕಾರ್ಯಕ್ರಮಕ್ಕೆ ಚಪ್ಪಾಳೆ ತಟ್ಟಲು ಕೆಲವರನ್ನು ಆಹ್ವಾನಿಸಿಕೊಳ್ಳುವುದು ಇವೆಲ್ಲಾ ರಾಜ್ಯ ವಿಧಾನಸಭಾ ಅಧ್ಯಕ್ಷರ ಹೊಸ ಖಯ್ಯಾಲಿಗಳೆಂದರೆ ಅಲ್ಲ ಗಳೆಯುವವರು ಈ ಗೌರವಾನ್ವಿತರಿಗೆ ಮೊದಲೇ ಈ ಚಟ ಇತ್ತೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಒಟ್ಟಾರೆ ರಾಜಕೀಯ ಕ್ಷೇತ್ರ ಹದಗೆಟ್ಟಿದೆ ಎನ್ನುವವರು ಕೆಲವರು ಕಣ್ಮುಚ್ಚಿ ಅದೇನನ್ನೋ ಕುಡಿಯುತಿದ್ದಾರೆ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. 40 ವರ್ಷಗಳ ಸುಧೀರ್ಘ ಕಾಲ ಈ ಕ್ಷೇತ್ರದ ಶಾಸಕರಾಗಿದ್ದ ಪರಿಶಿಷ್ಟರ ಅವಧಿಯಲ್ಲಿ ಕಾಣದ ಜಾತಿನಿಂದನೆ ಪ್ರಕರಣಗಳು ರಾಷ್ಟ್ರೀಯವಾದಿಗಳ ಆಡಳಿತದಲ್ಲಿ ಬಹುಸಂಖ್ಯಾತ ಮೂಲನಿವಾಸಿಗಳ ವಿರುದ್ಧ ದಾಖಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ವಿರೋಧ, ಜಾತಿ ನಿಂದನೆ, ಜಾತಿಆಧಾರಿತ ಸುಳ್ಳುಪ್ರಕರಣಗಳು ಸಿದ್ಧಾಪುರದಲ್ಲಿ ಪ್ರಾರಂಭವಾಗಿರುವುದು ಉತ್ತರ ಕನ್ನಡ ಜಿಲ್ಲೆಗೇ ಕಳಂಕ. ಅಂದಹಾಗೆ ಈಗ ಕಾಮಗಾರಿ ಭರದಿಂದ ನಡೆಯುತ್ತಿರುವ ಸಿದ್ಧಾಪುರ ನಾಮಧಾರಿ ಸಭಾಭವನಕ್ಕೆ ದೊಡ್ಡಮನೆ ಶಶಿಭೂಷಣ ಹೆಗಡೆಯವರು ಐದು ಲಕ್ಷ ರೂಪಾಯಿ ದೇಣಿಗೆ ನೀಡಿರುವುದು, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಡಾ. ಶಶಿಭೂಷಣ ಹೆಗಡೆಯವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿರುವುದು ಶಿರಸಿ ಕ್ಷೇತ್ರದ ಸಂಚಲನದ ದೃಷ್ಟಾಂತ ಎನ್ನಲಾಗುತ್ತಿದೆ.