

ಉತ್ತರ ಕನ್ನಡ ಜಿಲ್ಲೆ ವಿಶೇಶ ಜಿಲ್ಲೆ ೧೨ ತಾಲೂಕುಗಳ ಈ ವಿಶಾಲ ಜಿಲ್ಲೆಯಲ್ಲಿ ೬ ವಿಧಾನಸಭಾ ಕ್ಷೇತ್ರಗಳಿವೆ. ಒಂದು ಕಾಲದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ ಜಿಲ್ಲೆ ಈಗ ಐದು ಜನ ಶಾಸಕರು ಬಿ.ಜೆ.ಪಿಯವರಾಗಿದ್ದಾರೆ..೨೯೧೧ ಮತದಾರರಿರುವ ಈಗಿನ ವಿಧಾನಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ.ಯಿಂದ ಕಾರವಾರದ ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್ ಸ್ಫರ್ಧಿಯಾಗಿದ್ದಾರೆ. ಕಳೆದ ವಿ.ಪ. ಚುನಾವಣೆಯಲ್ಲಿ ಒಂದು ಸಾವಿರದ ಐದು ಮತ ಪಡೆದು ಪರಾಜಿತರಾಗಿದ್ದ ಗಣಪತಿ ಉಳ್ವೇಕರ್ ನಾಲ್ಕೈದು ಬಾರಿ ಕಾರವಾರದ ನಗರಸಭೆ ಸದಸ್ಯರಾಗಿ ಎರಡು ಅವಧಿಗಳಿಗೆ ಅಧ್ಯಕ್ಷ ರಾಗಿದ್ದವರು.
ಜಿಲ್ಲೆಯ ಐದು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ನೆರವು, ಬೆಂಬಲದೊಂದಿಗೆ ಕಣದಲ್ಲಿರುವ ಗಣಪತಿ ಉಳ್ವೇಕರ್ ತಮ್ಮ ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳ ಬೆಂಬಲಗಳ ಗುಣಾತ್ಮಕ ಅಂಶಗಳಿಂದ ಗೆಲ್ಲುವ ಭರವಸೆಯಲ್ಲಿದ್ದಾರೆ.

https://samajamukhi.net/2021/11/19/bjp-modi-against-parties/
ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ಮೇಲ್ಮನೆಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಕಾರವಾರದ ಗಣಪತಿ ಉಳ್ವೇಕರ್ ರಿಗೆ ನೇರ ಸ್ಫರ್ಧಿ ಶಿರಸಿಯ ಭೀಮಣ್ಣ ನಾಯ್ಕ, ಇವರು ಮಾಜಿ ಸಚಿವ ದೇಶಪಾಂಡೆಯವರ ಬೆಂಬಲಿಗರೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹತ್ತಿರದ ಸಂಬಂಧಿಯೂ ಹೌದು. ಉತ್ತರ ಕನ್ನಡದಲ್ಲಿ ಈ ಚುನಾವಣೆಗೆ ನಾಲ್ಕುಜನರು ಸ್ಫರ್ಧೆಯಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಅಭ್ಯರ್ಥಿಗಳನ್ನು ಬಿಟ್ಟರೆ ಉಳಿದವರು ಲೆಕ್ಕಕ್ಕಿದ್ದರೂ ಆಟಕ್ಕಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಉದ್ಯಮಿಯಾಗಿದ್ದು ಒಂದು ಅವಧಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು ಬಿಟ್ಟರೆ ಅವರ ರಾಜಕೀಯ ಜೀವನದಲ್ಲಿ ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಜಿಲ್ಲಾಧ್ಯಕ್ಷರಾಗಿದ್ದವರು. ಪಕ್ಷಾತೀತ ಚುನಾವಣೆ ಇರುವುದರಿಂದ ಎಲ್ಲಾ ಪಕ್ಷಗಳ ಬೆಂಬಲಿಗರ ಮತ ಪಡೆಯುವ ನಿರೀಕ್ಷೆಯಲ್ಲಿರುವ ನಾಯ್ಕ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ನಾನು. ಪಕ್ಷದ ಜವಾಬ್ಧಾರಿಯನ್ನು ಶಿರಸಾವಹಿಸಿ ನೆರವೇರಿಸುವ ಪಕ್ಷ ನಿಷ್ಠ ರಾಜಕಾರಣ ನಮ್ಮ ಹೆಗ್ಗಳಿಕೆ ಎನ್ನುತ್ತಾರೆ.
ಈ ಹಿಂದಿನ ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಸದಸ್ಯ ಎಸ್. ಎಲ್.ಘೊಟ್ನೇಕರ್ ರಿಂದ ತೆರವಾದ ಸ್ಥಾನಕ್ಕೆ ಸ್ಫರ್ಧಿಸಿರುವ ಭೀಮಣ್ಣ ಉದ್ಯಮಿಯಾಗಿ, ಹಿರಿಯ ರಾಜಕಾರಣಿಯಾಗಿ ಹೆಸರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖ, ರಾಜ್ಯ ವಕ್ತಾರರಾಗಿರುವ ಭೀಮಣ್ಣ ನಾಯ್ಕರ ಸರಳ-ಸಜ್ಜನಿಕೆಯ ಇಮೇಜ್ ಗೆ ಎದುರಾಳಿ ಬಿ.ಜೆ.ಪಿ. ಗಣಪತಿ ಉಳ್ವೇಕರ್ ಕೂಡಾ ಸರಳ, ನಿಗರ್ವಿ ಮುಖಂಡರೇ.
ಕಾಂಗ್ರೆಸ್ ಬಿ.ಜೆ.ಪಿ. ಪಕ್ಷಗಳ ಹಿರಿಯ,ಅನುಭವಿ ರಾಜಕಾರಣಿಗಳ ನೇರ ಹಣಾಹಣಿಯಲ್ಲಿ ಪ್ರಾದೇಶಿಕತೆ, ಜಾತಿ, ಪಕ್ಷಗಳ ಲೆಕ್ಕಾಚಾರ ಸೇರಿ ಯಾರೇ ಆಯ್ಕೆಯಾದರೂ ಹೆಚ್ಚಿನ ಅಂತರ ಇರುವುದಿಲ್ಲ ಎನ್ನುವ ಸಮೀಕ್ಷೆಗಳಿವೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಬಿರುಸಿನ ಪ್ರಚಾರ, ಚುರುಕಿನ ಓಡಾಟಗಳ ಮಧ್ಯೆ ವಿಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾಳೆ ಎನ್ನುವುದು ಒಗಟು. ಈ ಇಬ್ಬರು ಪ್ರಮುಖ ಸ್ಫರ್ಧಿಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ವೈಯಕ್ತಿಕ ಸಾಮರ್ಥ್ಯಗಳ ಜೊತೆಗೆ ಪಕ್ಷಗಳ ಬಲಾಬಲದ ಪರೀಕ್ಷೆ ಕೂಡಾ ನಡೆಯಲಿರುವುದು ಈ ಕ್ಷಣದ ಸತ್ಯ.
ನನ್ನ ೩೦ ವರ್ಷಗಳ ರಾಜಕಾರಣದಲ್ಲಿ ವೈಯಕ್ತಿಕತೆಗಿಂತ ಸಾಮೂಹಿಕ ಹೋರಾಟ, ಸಂಘಟನೆ, ಪಕ್ಷ ಸಂಘಟನೆಯಿಂದ ಸಾಮಾಜಿಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದೇನೆ. ಪಕ್ಷ ಕೂಡಾ ನನ್ನ ಸೇವೆಗೆ ಪ್ರತಿಯಾಗಿ ಅವಕಾಶ ನೀಡಿದೆ. ಇದು ಪಕ್ಷಾ ತೀತ ಚುನಾವಣೆ ಇರುವುದರಿಂದ ಎಲ್ಲಾ ಮತದಾರರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ. ಬಂಗಾರಪ್ಪ ಹೆಸರು, ಮಧು ಬಂಗಾರಪ್ಪ, ಆರ್.ವಿ.ದೇಶಪಾಂಡೆಯವರಂಥ ನಾಯಕರ ಮಾರ್ಗದರ್ಶನ ನನಗೆ ಶ್ರೀರಕ್ಷೆ.- ಭೀಮಣ್ಣ ನಾಯ್ಕ ಕಾಂಗ್ರೆಸ್ ಅಭ್ಯರ್ಥಿ
ಹಿಂದೆ ೧೦೦೫ ಮತ ಪಡೆದು ಸೋತಿದ್ದೆ. ಆಗ ಇಷ್ಟು ಪೂರಕ ವಾತಾವರಣವಿರಲಿಲ್ಲ. ಈ ಬಾರಿ ಎರಡು ಸಾವಿರಕ್ಕೂ ಹೆಚ್ಚು ಮತಗಳಿಂದ ವಿಜಯಿಯಾಗುತ್ತೇನೆ. ಮೀನುಗಾರರು ಸೇರಿದಂತೆ ಎಲ್ಲಾ ಜಾತಿ, ಸಮೂದಾಯಗಳ ಬೆಂಬಲ ನನಗಿದೆ.-ಗಣಪತಿ ಉಳ್ವೇಕರ್


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
