ಸುಸಂಸ್ಕೃತ ಕುಟುಂಬ,ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಜಾತ್ಯಾತೀತತೆ,ಪ್ರಾಮಾಣಿಕತೆಗಳ ಮೂಲಕ ಜನಮಾನಸ ಗೆದ್ದಿದ್ದ ಬಳಗುಳಿ ಕುಟುಂಬದ ರವೀಂದ್ರ ಭಟ್ ಇಂದು ನಿಧನರಾದರು. ಪ್ರಜಾವಾಣಿ ಪತ್ರಿಕೆಯ ಸಿದ್ಧಾಪುರ ತಾಲೂಕು ವರದಿಗಾರರು ವಕೀಲರೂ ಆಗಿದ್ದ ರವೀಂದ್ರ ಭಟ್ ಸರಳತೆ,ಜಾತ್ಯಾತೀತೆ ಮೂಲಕ ಹೆಸರು ಮಾಡಿದ್ದರು. ಮೂಲತ: ಕತೆಗಾರರಾಗಿದ್ದ ರವೀಂದ್ರಭಟ್ ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಮತ್ತು ತಂದೆ ವಿ.ಜಿ.ಭಟ್ ರ ಪ್ರಭಾವದಿಂದ ಸಾಮಾಜಿಕ ಬದುಕಿನಲ್ಲಿ ಗುರುತಿಸಿಕೊಂಡರೂ ತನ್ನ ಅನನ್ಯ ವ್ಯಕ್ತಿತ್ವದಿಂದ ಸಮಾಜಮುಖಿಯಾಗಿ ಪ್ರಸಿದ್ಧರಾಗಿದ್ದರು.
ಕೆಲವು ದಿವಸಗಳಿಂದ ಕರುಳುಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ರವೀಂದ್ರ ಭಟ್ ಮಂಗಳೂರು ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಭಟ್ ರ ನಿಧನಕ್ಕೆ ಪತ್ರಕರ್ತರು,ವಕೀಲರು ಸೇರಿದಂತೆ ಜಿಲ್ಲೆಯಾದ್ಯಂತ ಶೋಕ ವ್ಯಕ್ತವಾಗಿದೆ.
ತುಂಬ ಬೇಸರದ ಸಂಗತಿ ಕನ್ನೇಶ್