

———————— ಬದುಕು ಬದಲಾಗಬೇಕು
ಕಾಲಕ್ಕೆ ತಕ್ಕಂತೆ ಬದಲಾದ ಬದುಕಲ್ಲಿ ಬಲವಾದ ಗುರಿ ಇರಬೇಕು
ಅದರೊಳಗೆ ಗರಿಬಿಚ್ಚಿ ಹಾರಾಡುವಂತಿರಬೇಕು
ಸುಳಿವ ಗಾಳಿಯಂತಿರಬೇಕು
ತಂಪು ಸೂಸಿ ಸೈ ಎನಿಸಿಕೊಳ್ಳುವಂತೆ ಬಳಸಿ ಅಲುಗಾಡಿದರೂ ಬೀಳದಂತಿರಬೇಕು
ಗಿಡದೆಲೆಯಂತೆ ಬದುಕು ಬದಲಾಗಬೇಕು ।।
ಚಿಗುರಿನಂತಿರಬೇಕು ಬೆಳೆದು ನೆರಳು ಸೂಸುವ ಮನಸ್ಸು ಹೊಂದಿರಬೇಕು
ಬದುಕು ಬದಲಾಗಬೇಕು ನಿರಾಳತೆ ಇರಬೇಕು
ಸರಳತೆಯ ಸಹವಾಸ ಸನಿಹದಲಿರುವಂತಿರಬೇಕು
ಬಳಲಿದ ಮನಗಳು ಹರಸುವಂತಿರಬೇಕು
ಬದುಕು ಬದಲಾಗಬೇಕು ।।
ಭರವಸೆ ಇರಬೇಕು ಬಯಕೆ ಪೂರೈಕೆಯಾಗಬೇಕು
ಕುರುಡ ನೋಡಿದಂತೆ ಕಿವುಡ ಕೇಳಿದಂತೆ ಕರುಣೆ ಬದುಕಾಗಬೇಕು
ನಡೆಯು ನುಡಿಯಾಗಬೇಕು ನುಡಿಯೇ ನಡೆಯಾಗಬೇಕು
ಜಡತೆಯ ನಡುವ ಮುರಿಯಬೇಕು
ಬದುಕು ಬದಲಾಗಬೇಕು ಬದುಕು ಬಾಳಾಗಬೇಕು ।।।।। —————
—————— ಪಟ್ಟರಾಜಗೌಡ ಗೇರುಕೊಪ್ಪ

