ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!
ನಾವು ನೀವೆಲ್ಲಾ ವಸ್ತುಗಳು, ಹಣ್ಣು, ಹೂ, ತರಕಾರಿ ಇತರ ವಸ್ತುಗಳನ್ನು ಮಾರುವುದನ್ನು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದ್ರೆ ಇಲ್ಲೊರ್ವ ಟಿವಿ ಸೆಲೆಬ್ರಿಟಿಯೊಬ್ಬರು ತಮ್ಮ ಹೂಸನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೂಲಕ…
ಹೈದರಾಬಾದ್: ನಾವು ನೀವೆಲ್ಲಾ ವಸ್ತುಗಳು, ಹಣ್ಣು, ಹೂ, ತರಕಾರಿ ಇತರ ವಸ್ತುಗಳನ್ನು ಮಾರುವುದನ್ನು ನೋಡಿದ್ದೇವೆ ಅಥವಾ ಕೇಳಿದ್ದೇವೆ. ಆದ್ರೆ ಇಲ್ಲೊರ್ವ ಟಿವಿ ಸೆಲೆಬ್ರಿಟಿಯೊಬ್ಬರು ತಮ್ಮ ಹೂಸನ್ನು ಅಪರಿಚಿತರಿಗೆ ಮಾರಾಟ ಮಾಡುವ ಮೂಲಕ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿದ್ದಾರಂತೆ.
ಈ ತಾರೆ ಅಮೆರಿಕದ ಸಾಮಾಜಿಕ ಮಾಧ್ಯಮಗಳನ್ನು ಆವರಿಸಿಕೊಂಡಿದ್ದು, ಹೊಸ ಅಲೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಈಕೆ ತನ್ನ ವಾಯುವನ್ನು ಹೇಗೆ ಸೆರೆ ಹಿಡಿದು ಜಾರ್ನಲ್ಲಿ ಹಾಕುತ್ತಾಳೆ ಎಂಬುದನ್ನು ಹೇಳುವ ವಿಡಿಯೋ ಪ್ರಸ್ತುತ 6.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
31 ವರ್ಷದ ಕಿರುತೆರೆ ಸೆಲೆಬ್ರಿಟಿ ಹೆಸರು ಸ್ಟೆಫನಿ ಮ್ಯಾಟಿಯೊ. ರಿಯಾಲಿಟಿ ಟಿವಿ ಶೋ “90 ಡೇ ಫಿಯಾನ್ಸಿ” ನಲ್ಲಿ ಕಾಣಿಸಿಕೊಂಡ ನಂತರ ಮ್ಯಾಟಿಯೊ ಮೊದಲು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು ಮತ್ತು ಅಂದಿನಿಂದ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ. ಪುಸ್ತಕಗಳನ್ನು ಬರೆಯುವುದರೊಂದಿಗೆ ಆನ್‌ಫಿಲ್ಟರ್ಡ್ ಎಂಬ ತನ್ನ ಸ್ವಂತ ಎಕ್ಸ್-ರೇಟೆಡ್ ಚಂದಾದಾರಿಕೆ ಸೈಟ್ ಅನ್ನು ಸಹ ಸ್ಥಾಪಿಸಿದ್ದಾರೆ.
ಈಕೆಗೂ ಹಲವಾರು ಅಭಿಮಾನಿಗಳು ಇದ್ದು, ಇದರಿಂದ ಆಕೆ ತನ್ನ ಗ್ಯಾಸ್ ಅನ್ನು ಭಾರಿ ಮೊತ್ತಕ್ಕೆ ಅಭಿಮಾನಿಗಳಿಗೆ ಮಾರುತ್ತಿದ್ದಾಳೆ. ಎರಡು ದಿನದಲ್ಲಿ 97 ಜಾರ್ ಮಾರಾಟವಾಗಿದೆ ಎಂದರೆ ಇವುಗಳಿಗೆ ಬೇಡಿಕೆ ಎಷ್ಟಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಆಕೆಯ ವಾಯುವಿನಿಂದ ಇಷ್ಟೆಲ್ಲಾ ಲಾಭ ಬರುತ್ತದೆ ಎಂದು ಆಕೆಗೂ ತಿಳಿದಿರಲಿಲ್ಲವಂತೆ.
ಸುಮಾರು 20,000 ವೀಕ್ಷಣೆಗಳನ್ನು ಪಡೆದುಕೊಂಡಿರುವ ಇತ್ತೀಚಿನ ವಿಡಿಯೋದಲ್ಲಿ ಸ್ಟೆಫನಿ ಮ್ಯಾಟಿಯೊ ಒಂದು ವಾರದಲ್ಲಿ ಸುಮಾರು 38 ಲಕ್ಷ ರೂಪಾಯಿ ತನ್ನ ಗ್ಯಾಸ್ನಿಂದ ಸಂಪಾದಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಈಕೆ ಗ್ಯಾಸ್ನನ್ನು ಜಾರ್ನಲ್ಲಿ ಹೂವಿನ ದಳಗಳಿಂದ ಪ್ಯಾಕ್ ಮಾಡಿ ತನ್ನ ಅಭಿಮಾನಿಗಳಿಗೆ ನೀಡುತ್ತಿದ್ದಾಳೆ. ಹೀಗೆ ಮಾಡುವುದರಿಂದ ಗ್ಯಾಸ್ ನಿಂದ ಹೂವಿನ ದಳಗಳು ಮತ್ತಷ್ಟು ಪರಿಮಳಯುಕ್ತವಾಗಿಸುತ್ತವಂತೆ.
ಇನ್ನು ಹಲವಾರು ಆಕೆಯ ಅಭಿಮಾನಿಗಳು ನೀವು ಗ್ಯಾಸ್ ಅನ್ನು ಹೇಗೆ ಹೆಚ್ಚು ಮಾಡಿಕೊಳ್ಳುತ್ತೀರಾ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಆಕೆ, ಬೀನ್ಸ್, ಪ್ರೋಟೀನ್ ಮಫಿನ್, ಮೊಸರು, ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವ ಮೂಲಕ ಗ್ಯಾಸ್ನನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದು ವಿಡಿಯೋವೊಂದರಲ್ಲಿ ಅವರು ಹೇಳಿದ್ದಾರೆ.
ಆಕೆಯ ಹೂಸಿಗಷ್ಟೆ ಅಲ್ಲದೇ ಆಕೆ ಧರಿಸುವ ಬ್ರಾಗಳು, ಪ್ಯಾಂಟಿಗಳು, ಬಟ್ಟೆ ಮತ್ತು ಸಾಬೂನು ಸೇರಿದಂತೆ ಇತರ ವಸ್ತುಗಳನ್ನು ಈಕೆಯ ಅಭಿಮಾನಿಗಳು ಕೇಳುತ್ತಿದ್ದಾರೆ ಎಂದು ಆಕೆಯೇ ಹೇಳಿಕೊಂಡಿದ್ದಾಳೆ.
“ನಾವು ಈಗಾಗಲೇ ಆಕೆಯ ಜಾರ್ ಆಫ್ ಫಾರ್ಟ್ಗಳನ್ನು ಖರೀದಿಸಿದ 97 ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹುಮಾನ್ ಪುಟ್-ಪಟ್ ಕಾರ್ಖಾನೆ ಹೇಳಿದೆ.
“ನಾನು ನಿಜವಾಗಿಯೂ ದೊಡ್ಡ ಮಾರುಕಟ್ಟೆಗೆ ಪ್ರವೇಶಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಮತ್ತು ಅಂತ್ಯವಿಲ್ಲದ ಸಾಮರ್ಥ್ಯವಿದೆ ಎಂದು ತೋರುತ್ತದೆ” ಎಂದು ಮ್ಯಾಟೊ ತಿಳಿಸಿದ್ದಾರೆ. (