ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಿಂದ ವಿವಿಧ ಬೇಡಿಕೆ ಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದ್ದು ಮುಷ್ಕರಕ್ಕೆ ಎನ್. ಎಸ್. ಯು.ಐ ಬೆಂಬಲ ನೀಡುತ್ತಿದೆ ಸರಕಾರ ಅವರ ಬೇಡಿಕೆ ಯನ್ನು ಶೀಘ್ರದಲ್ಲಿ ಈಡೇರಿಸಬೇಕೆಂದು
ಏನ್ ಎಸ್ ಯು ಐ ಘಟಕದ ( ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಒಫ್ ಇಂಡಿಯಾ ) ಜಿಲ್ಲಾ ಅಧ್ಯಕ್ಷರಾದ ವಿಶ್ವ ಇಟಗಿ ತಿಳಿಸಿದ್ದಾರೆ
ಅತಿಥಿ ಉಪನ್ಯಾಸಕರು ಕಡಿಮೆ ಸಂಬಳದಲ್ಲಿ ಕರ್ತವ್ಯ ವನ್ನು ನಿರ್ವಹಿಸುತ್ತಿದ್ದು ಅವರಿಗೆ ಸರಿಯಾಗಿ ಸಂಬಳವೂ ಸಿಗುತ್ತಿಲ್ಲ ಹಾಗೂ ಕೋವಿಡ್ ಮತ್ತು , ಬೆಲೆ ಏರಿಕೆ ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುವುದು ಕಷ್ಟ ವಾಗಿದೆ ಆದಷ್ಟು ಶೀಘ್ರದಲ್ಲಿ ಅವರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಉಪನ್ಯಾಸಕರು ಮುಷ್ಕರವನ್ನು ನಡೆಸುತ್ತಿರುವ ಕಾರಣದಿಂದಾಗಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದ್ದು ವಿದ್ಯಾರ್ಥಿ ಗಳ ಭವಿಷ್ಯ ದ ಬಗ್ಗೆ ಗಂಭೀರ ವಾಗಿ ಚಿಂತಿಸಿ ಅವರ ವಿದ್ಯಾಭ್ಯಾಸ ಕ್ಕೆ ಅನುಕೂಲ ಮಾಡಿಕೊಡಬೇಕು
ಅತಿಥಿ ಉಪನ್ಯಾಸಕರ ಮುಷ್ಕರ ದ ವಿಷಯವನ್ನು ಎನ್ಎಸ ಯು ಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ರವರು ವಿಪಕ್ಷದ ನಾಯಕರ ಜೊತೆ ಮಾತನಾಡಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ತರುವಂತೆ ವಿನಂತಿಸಿದ್ದಾರೆ
ಸರ್ಕಾರ ಕೂಡಲೇ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ