


ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ಆಟ ನಡೆಯಲ್ಲ: ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ

ಬಿಜೆಪಿ ಖಾಲಿ ಡಬ್ಬ ಆಗಿದೆ, ಇನ್ನು ಮುಂದೆ ಹಿಂದುತ್ವ ಅನ್ನೋದು ವರ್ಕೌಟ್ ಆಗಲ್ಲ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಬಾಗಲಕೋಟೆ: ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಆಟ ನಡೆಯಲ್ಲ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಬಾದಾಮಿ ತಾಲೂಕಿನ ನರಸಾಪುರ ಗ್ರಾಮದಲ್ಲಿ ಅವರ ಆಪ್ತ ಮಂಜುನಾಥ ಗುಬ್ಬಿ ಅವರ ಹುಟ್ಟುಹಬ್ಬದ ಅಂಗವಾಗಿ ಆಗಮಿಸಿದ ಸಮಯದಲ್ಲಿ ಮಾತನಾಡುತ್ತಾ, ಬಿಜೆಪಿ ಖಾಲಿ ಡಬ್ಬ ಆಗಿದೆ, ಇನ್ಮುಂದೆ ಹಿಂದುತ್ವ ಅನ್ನೋದು ವರ್ಕೌಟ್ ಆಗಲ್ಲ ಎಂದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ವಾಗ್ದಾಳಿ
ನಾವು ಹಿಂದುಗಳೇ ಅಲ್ವಾ ಎಂದು ಪ್ರಶ್ನೆ ಮಾಡಿದ ಮಧು ಬಂಗಾರಪ್ಪ, ಎಲ್ಲಾ ಜಾತಿ-ಧರ್ಮವನ್ನು ಪ್ರೀತಿಸುವವನು ಒರಿಜಿನಲ್ ಹಿಂದೂ. ಹೊಟ್ಟೆಗೆ ನಾವು ಅನ್ನ ತಿಂತೀವಿ. ಹೊಟ್ಟೆಗೆ ಅನ್ನ ತಿನ್ನುವವರೆಲ್ಲ ಹಿಂದೂಗಳೇ. ಬಿಜೆಪಿ ಅವರೆಲ್ಲ ಬ್ರಿಟಿಷ್ ಜನತಾ ಪಾರ್ಟಿ ಇದ್ದಂತೆ. ಡಿವಿಜನ್ ಮಾಡುವುದೇ ಇವರ ಕೆಲಸ. ರಾಜರನ್ನು ಒಡೆದು ಆಳಿ ಒಳ ಬಂದವರು ಬ್ರಿಟಿಷರು. ಅವರಂತೆ ಬಿಜೆಪಿಯವರು ಆಳುತ್ತಿದ್ದಾರೆ. ಜನರಿಗೆ ಇವರ ಆಟ ಗೊತ್ತಾಗಿದೆ ಎಂದು ಕಿಡಿಕಾರಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಮೊದಲು ನೈತಿಕ ಪೊಲೀಸ್ ಗಿರಿ, ತಡೆಯುವ ಕಾನೂನು ಜಾರಿ ಮಾಡಲಿ. ಯಾರು ಎಲ್ಲಿಯೂ ಹೋಗಲ್ಲ. ಸ್ವಾತಂತ್ರ್ಯ ಇರಬೇಕು ಅಷ್ಟೇ. ಅದನ್ನು ಕಟ್ ಮಾಡಬಾರದು. ಏನು ಮಾತನಾಡ್ತಾರೋ ಅದನ್ನೇ ಕಾನೂನು ಮಾಡುತ್ತಾ ಹೋದರೆ ಹೇಗೆ?. ಅದು ತಪ್ಪಾಗುತ್ತದೆ ಎಂದರು.
ಚುನಾವಣೆ ಹತ್ತಿರ ಬಂದರೆ ಬಿಜೆಪಿಯವರು ಇಂತಹದನ್ನು ಶುರು ಮಾಡುತ್ತಾರೆ. ಜನಪರ ಕೆಲಸಗಳನ್ನು ಮಾಡಿದರೆ, ಇದನ್ನು ಮಾಡುತ್ತಿರಲಿಲ್ಲ. ಸರ್ಕಾರ ಇರುವುದು ಕೆಲಸ ಮಾಡುವುದಕ್ಕೆ, ಜಾತಿ ಜಾತಿಗಳನ್ನು ಒಡೆಯಲಿಕ್ಕೆ ಅಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದ ಜನರೇನು ಅಷ್ಟು ಮೂರ್ಖರಲ್ಲ. ಬಿಜೆಪಿಯವರ ಸರ್ಕಾರ ಇರಬಹುದು. ಒತ್ತಡ ತಂದು ಕಾನೂನು ಮಾಡಬಹುದು. ಬೇರೆ ಬೇರೆ ಧರ್ಮದ ಜನರೆಲ್ಲಾ ಧೈರ್ಯದಿಂದ ಬಾಳಲಿ. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದಾರೆ. ಬೆಂಕಿ ಹಿಡಿದು ಕೆಲಸ ಮಾಡುವಂತ ಅವಶ್ಯಕತೆ ನನಗಿಲ್ಲ. ಎಲ್ಲರೂ ಧೈರ್ಯದಿಂದ ಬಾಳೋಣ ಎಂದು ಮಧು ಬಂಗಾರಪ್ಪ ಹೇಳಿದರು. (kpc)
ದೇಶ ಇಂದು ಅನುಭವಿಸುತ್ತಿರುವ ನೋವು, ದುಃಖಕ್ಕೆ ಹಿಂದುತ್ವವಾದಿಗಳೇ ಕಾರಣ: ರಾಹುಲ್ ಗಾಂಧಿ
‘ಹಿಂದುತ್ವ’ವಾದಿಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪ್ರಸ್ತುತ ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ‘ಹಿಂದುತ್ವವಾದಿಗಳೇ ನೇರ ಹೊಣೆ’ ಎಂದು…

ಲಖನೌ: ‘ಹಿಂದುತ್ವ’ವಾದಿಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಪ್ರಸ್ತುತ ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ‘ಹಿಂದುತ್ವವಾದಿಗಳೇ ನೇರ ಹೊಣೆ’ ಎಂದು ಶನಿವಾರ ಆರೋಪಿಸಿದ್ದಾರೆ.
ತಮ್ಮ ಹಿಂದಿನ ಲೋಕಸಭಾ ಕ್ಷೇತ್ರವಾದ ಅಮೇಥಿಯಲ್ಲಿ 6-ಕಿಮೀ ಉದ್ದದ ಪಾದಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನೋವು ಮತ್ತು ದುಃಖಕ್ಕೆ ಹಿಂದುತ್ವವಾದಿಗಳು ಕಾರಣ ಎಂದು ಹೇಳಿದರು.
ಇಂದು ನಮ್ಮ ದೇಶದಲ್ಲಿ ಹಣದುಬ್ಬರ, ನೋವು, ದುಃಖ ಇದ್ದರೆ ಅದು ಹಿಂದುತ್ವವಾದಿಗಳ ಕೈವಾಡದಿಂದ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಗಂಗಾಸ್ನಾನ ಮಾಡುತ್ತಾರೆಯೇ ಹೊರತು ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‍ಟಿಯ ಕಳಪೆ ಅನುಷ್ಠಾನ ಮತ್ತು ಕೋವಿಡ್ -19 ಬಿಕ್ಕಟ್ಟಿನಂತಹ ತಪ್ಪು ನಿರ್ಧಾರದಿಂದಾಗಿ ಇಂದು ಬಡವರು ದುಃಖ ಅನುಭವಿಸುವಂತಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ನಿಮಗೆ ಇಂದಿನ ಪರಿಸ್ಥಿತಿಯ ಅರಿವಿದೆಯೇ? ನಿರುದ್ಯೋಗ ಮತ್ತು ಹಣದುಬ್ಬರ ದೊಡ್ಡ ಪ್ರಶ್ನೆಗಳಾಗಿದ್ದು, ಸಿಎಂ ಆಗಲಿ ಅಥವಾ ಪ್ರಧಾನಿಯಾಗಲಿ ಈ ಬಗ್ಗೆ ಉತ್ತರಿಸುವುದಿಲ್ಲ. ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಮಧ್ಯಮ ವರ್ಗದ ಜನರು ಮತ್ತು ಬಡವರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ನೋಟು ಅಮಾನ್ಯೀಕರಣ, ತಪ್ಪಾಗಿ ಜಾರಿಗೊಳಿಸಲಾದ ಜಿಎಸ್‍ಟಿ, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಸಹಾಯ ಮಾಡದಿರುವುದು ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿವೆ ಎಂದರು.
ನಾನು ರಾಜಕೀಯ ಜಗತ್ತಿಗೆ ಮೊದಲ ಹೆಜ್ಜೆ ಇಡುವಂತೆ ಮಾಡಿದ್ದು ಅಮೇಥಿ ಕ್ಷೇತ್ರ. 2004ರಲ್ಲಿ ರಾಜಕೀಯಕ್ಕೆ ಬಂದೆ. ನನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ನಗರ ಅಮೇಥಿ. ಅಮೇಥಿಯ ಜನರು ನನಗೆ ರಾಜಕೀಯದ ಬಗ್ಗೆ ಸಾಕಷ್ಟು ಕಲಿಸಿದ್ದಾರೆ. ನೀವು ನನಗೆ ರಾಜಕೀಯಕ್ಕೆ ದಾರಿ ತೋರಿಸಿದ್ದೀರಿ. ಹಾಗಾಗಿ ನಾನು ಅಮೇಥಿ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆ ಅಮೇಥಿಯನ್ನು ಕಳೆದುಕೊಂಡ ನಂತರ ಸುಮಾರು ಎರಡೂವರೆ ವರ್ಷಗಳ ನಂತರ ಮೊದಲ ಬಾರಿಗೆ ಅಮೇಥಿಗೆ ಆಗಮಿಸಿದ್ದಾರೆ. (etbk)
