

ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ
17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ.

- ಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆ
- ಇವರು ‘ಪತಿ-ಪತಿ’ ಎಂದು ಹೇಳಿಕೊಂಡು ಮದುವೆಯಾದರು: ತೆಲಂಗಾಣದಲ್ಲೊಂದು ಮೊದಲ ಸಲಿಂಗಕಾಮಿ ಮದುವೆ!
- ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!
- ಒಣ ತ್ಯಾಜ್ಯ ರೀಸೈಕಲ್, ದ್ರವ ತ್ಯಾಜ್ಯದಿಂದ ಸಾವಯವ ಗೊಬ್ಬರ: ರೂರ್ಕೆಲ ಮಹಾನಗರ ಪಾಲಿಕೆಯ ಮಾದರಿ
ಒಂದು ಅಡಿಕೆಯ ಕಥೆಗೆ ಪ್ರಶಸ್ತಿ, ಪ್ರಶಂಸೆ- ಸಿದ್ಧಾಪುರದ ಯುವಕರ ತಂಡ ತಯಾರಿಸಿದ ಸಾಕ್ಷಚಿತ್ರ ಒಂದು ಅಡಿಕೆಯ ಕತೆ ಹಲವು ಪ್ರಶಸ್ತಿಗಳಿಗೆ ಭಾಜನವಾಗಿ ಹೆಸರು ಮಾಡಿದೆ.ಬೆಂಗಳೂರಿನ ಟಿ.ಬಿ.ಎಫ್. ಸಂಸ್ಥೆ ಏರ್ಪಡಿಸಿದ್ದ ಸ್ಫರ್ಧೆಯಲ್ಲಿ ಈ ಚಿತ್ರದ ನಿರ್ಧೇಶಕ ಸಂಪತ್ ನಾಯ್ಕ ಉತ್ತಮ ಯುವ ನಿರ್ಧೇಶಕ ಪ್ರಶಸ್ತಿ ಪಡೆದಿದ್ದಾರೆ.ಭಾಗವಹಿಸಿದ್ದ ಒಟ್ಟೂ ೫೫೦ ಸಾಕ್ಷ್ಯಚಿತ್ರಗಳಲ್ಲಿ ೧೦೧ ಚಿತ್ರಗಳ ಮೊದಲ ಆಯ್ಕೆಯಲ್ಲಿ ಸ್ಥಾನ ಪಡೆದ ಒಂದು ಅಡಿಕೆಯ ಕತೆ ಉತ್ತಮ ಯುವ ನಿರ್ದೇಶಕ ಪ್ರಶಸ್ತಿ ಬಾಚಿಕೊಂಡಿದೆ.
ಮುಂಬೈನ ಜಸ್ಮಿ ಸಂಸ್ಥೆ ನಡೆಸಿದ ಆನ್ ಲೈನ್ ಸ್ಫರ್ಧೆಯಲ್ಲೂ ಈ ಚಿತ್ರದ ಛಾಯಾಗ್ರಹಣಕ್ಕೆ ಪ್ರಶಸ್ತಿ ದೊರೆತಿದೆ. ಈ ಚಿತ್ರದ ಇತರ ಕೆಲಸಗಳಲ್ಲಿ ತೊಡಗಿಕೊಂಡ ಮಂಜು ಕಬಸೆ ತೀರ್ಥಹಳ್ಳಿಯವರು ಉಳಿದ ಒಟ್ಟೂ ತಂಡದ ಸದಸ್ಯರು ಸಿದ್ಧಾಪುರದವರು ಎನ್ನುವುದು ವಿಶೇಶ. ಛಾಯಾಗ್ರಾಹಕ ನವೀನ್ ನಾಯ್ಕ, ಸಚಿನ್ ಶೇಟ್ ಮತ್ತು ವಿನಾಯಕ ಕಾನಗೋಡು ಸೇರಿದಂತೆ ಕೆಲವರು ಇತರ ತಾಂತ್ರಿಕ ವಿಭಾಗದಲ್ಲಿದ್ದರು.
ಪ್ರದೀಪ್ ಕಟ್ರಮ್,ಅನಿಲ್ ಹೆಗಡೆ,ಅಮಿತ್ ಹೆಗಡೆ ಮತ್ತು ಮಾಸಟರ್ ನೀರಜ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.
ಚೆನ್ನೈ : 17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ.



ತಮಿಳುನಾಡಿನ ಈರೋಡ್ ಜಿಲ್ಲೆಯವರಾದ ಸ್ವೇಗಾ, ರೈತನ ಮಗಳು ಎನ್ನುವುದು ವಿಶೇಷ. ಅವರು ಶಿಕಾಗೊ ವಿವಿಯಲ್ಲಿ ಬ್ಯಾಚೆಲರ್ ಡಿಗ್ರಿ ವ್ಯಾಸಂಗ ಮಾಡಲು ಈ ಸ್ಕಾಲರ್ ಶಿಪ್ ಅವಕಾಶ ಒದಗಿಸಿದೆ.
ಸ್ವೇಗಾ ಅವರನ್ನು ಡೆಕ್ಸ್ಟೆರಿಟಿ ಗ್ಲೋಬಲ್ ಎನ್ನುವ ಸಂಸ್ಥೆ ಗುರುತಿಸಿ ಅವರಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿತ್ತು. ತಮ್ಮ ಸಾಧನೆಯನ್ನು ಸ್ವೇಗಾ ಡೆಕ್ಸ್ಟೆರಿಟಿ ಸಂಸ್ಥೆಯ ಸ್ಥಾಪಕರಾದ ಶರದ್ ಸಾಗರ್ ಅವರಿಗೆ ಅರ್ಪಿಸಿದ್ದಾರೆ.
