


ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ ಎಫೆಕ್ಟ್ : ಮಧ್ಯಾಹ್ನದಿಂದಲೇ ಯಕ್ಷಗಾನ ಆರಂಭ
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಒಮಿಕ್ರಾನ್ ಸೋಂಕು ಹರಡದಂತೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಇಂದಿನಿಂದ ಜ.7ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ..

ಮಂಗಳೂರು : ಯಕ್ಷಗಾನವೆಂದರೆ ರಾತ್ರಿ ಪೂರ್ತಿ ನಡೆಯುವ ಜನಪದ ಕಲಾಪ್ರಕಾರ. ಯಕ್ಷಗಾನದ ರಾಕ್ಷಸ, ದೇವತೆ, ಇನ್ನಿತರ ವೇಷಗಳನ್ನು ರಾತ್ರಿಯ ಕಾಲದಲ್ಲಿಯೇ ನೋಡಲು ಚಂದ. ಆದರೆ, ಕೊರೊನಾ ಸೋಂಕಿನ ಪ್ರಭಾವ ಈ ಯಕ್ಷಗಾನದ ಮೇಲೆಯೂ ಬಿದ್ದಿದೆ. 10 ದಿನಗಳ ನೈಟ್ ಕರ್ಫ್ಯೂವಿನಿಂದಾಗಿ ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ಸಮಯದಲ್ಲಿ ಬದಲಾವಣೆ ಮಾಡಿವೆ.
ಮಾಮೂಲಿ ಯಕ್ಷಗಾನ ಪ್ರದರ್ಶನವಿದ್ದಲ್ಲಿ ರಾತ್ರಿ 9.30ಕ್ಕೆ ಆರಂಭವಾಗಿ ಬೆಳಗ್ಗೆ 6ರವರೆಗೆ ಇರುತ್ತದೆ. ಕಾಲಮಿತಿಯಾದಲ್ಲಿ ಸಂಜೆ 7 ಗಂಟೆಯಿಂದ ನಡುರಾತ್ರಿ 1ರವರೆಗೆ ಪ್ರದರ್ಶನವಾಗುತ್ತದೆ. ಆದರೆ, ಇದೀಗ ಒಮಿಕ್ರಾನ್ ಭೀತಿಯಿಂದ ರಾಜ್ಯ ಸರಕಾರ ಇಂದಿನಿಂದ ಜ.7ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ.
ಪರಿಣಾಮ ಯಕ್ಷಗಾನ ಪ್ರದರ್ಶನವನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಕ್ಷಗಾನವನ್ನು ರದ್ದು ಮಾಡದೆ ಮಧ್ಯಾಹ್ನ 3.30ರಿಂದ ರಾತ್ರಿ 9.30ರವರೆಗೆ ಸಮಯ ಬದಲಾವಣೆ ಮಾಡಿ ಪ್ರದರ್ಶನ ಮಾಡಲಾಗುತ್ತಿದೆ.
ಯಕ್ಷಗಾನಕ್ಕೂ ತಟ್ಟಿದ ನೈಟ್ ಕರ್ಫ್ಯೂ ಎಫೆಕ್ಟ್..
ಸದ್ಯ ಕರಾವಳಿಯಲ್ಲಿ ತೆಂಕು-ಬಡಗು-ಬಡಾಬಡಗು ಸೇರಿ ಸುಮಾರು 45ಕ್ಕಿಂತಲೂ ಅಧಿಕ ಮೇಳಗಳಿವೆ. ಎಲ್ಲಾ ಮೇಳಗಳು ಸರಕಾರದ ಮುಂದಿನ ಆದೇಶದವರೆಗೆ ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಮಾಡಲು ನಿರ್ಧರಿಸಿವೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಒಮಿಕ್ರಾನ್ ಸೋಂಕು ಹರಡದಂತೆ ಹೊಸ ವರ್ಷಾಚರಣೆ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಾದ್ಯಂತ ಇಂದಿನಿಂದ ಜ.7ರವರೆಗೆ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಈ ವೇಳೆ ತುರ್ತು ಅವಶ್ಯಕತೆಗಳನ್ನು ಹೊರತುಪಡಿಸಿ ಅನವಶ್ಯಕ ಓಡಾಟಕ್ಕೆ ಅವಕಾಶವಿಲ್ಲ. ಮಂಗಳೂರು ಹಾಗೂ ದ.ಕ ಜಿಲ್ಲೆಯಾದ್ಯಂತ 36 ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು. (etbk)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
