
ಇಂದು ಮುಂಜಾನೆ ವೇಳೆ ಸಿದ್ಧಾಪುರ ನಿಡಗೋಡ ಬಳಿ ಮುಸುಕಿದ ಮಂಜಿನಲ್ಲಿ ಬೈಕ್ ತಪ್ಪಿಸುವ ಪ್ರಯತ್ನದಲ್ಲಿ ಪ್ರಮಾದವಶಾತ್ ಆದ ಅಪಘಾತದಲ್ಲಿ ಸಿದ್ಧಾಪುರ ಠಾಣೆಯ ಪೊಲೀಸ್ ಜೀಪ್ ಪಲ್ಟಿಯಾಗಿದ್ದು ಜೀಪ್ ನಲ್ಲಿದ್ದ ಪಿ.ಎಸ್.ಆಯ್. ಮಹಾಂತೇಶ್ ಕಂಬಾರ್ ಮತ್ತು ಹವಾಲ್ಧಾರ್ ಕಾಗವಾಡ್ ರಿಗೆ ಗಾಯಗಳಾಗಿವೆ.
ಶಿರಸಿಗೆ ಪೊಲೀಸ್ ನೇಮಕಾತಿ ಕಾರ್ಯಕ್ಕೆ ತೆರಳುತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು ಗಾಯಾಳುಗಳನ್ನು ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಪಿ.ಎಸ್.ಆಯ್. ಕಂಬಾರ್ ರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಹವಾಲ್ಧಾರ್ ಕಾಗವಾಡ ಕೂಡಾ ಅಪಾಯದಿಂದ ಪಾರಾಗಿದ್ದು ನಾರಾಯಣ ಹೃದಯಾಲಯದಿಂದ ಎರಡ್ಮೂರು ದಿನಗಳಲ್ಲಿ ಚಿಕಿತ್ಸೆ ಪಡೆದು ಮರಳಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
