ಸಿದ್ದಾಪುರ: ತಾಲೂಕು ಟೇಲರ್ ಅಸೋಸಿಯೇಷನ್ ವತಿಯಿಂದ ಕಾರ್ಮಿಕ ಇಲಾಖೆಯಿಂದ ಕೊಡಮಾಡಲ್ಪಟ್ಟ ಕೊರೋನಾ ಮುಂಜಾಗ್ರತಾ ಕಿಟ್ ಗಳನ್ನು ಸಂಘದ ಸದಸ್ಯರಿಗೆ ವಿತರಿಸಲಾಯಿತು.
ಕಾರ್ಯಕ್ರಮ ದಲ್ಲಿ ಕಿಟ್ ವಿತರಿಸಿ ಮಾತನಾಡಿದ ಪತ್ರಕರ್ತ ಸುರೇಶ ಮಡಿವಾಳ ಜೀವನಕ್ಕಿಂತ ಜೀವ ಮುಖ್ಯ. ನಿಮ್ಮಲ್ಲಿಗೆ ದಿನ ನಿತ್ಯ ನೂರಾರು ಜನರು ಭೇಟಿಯಾಗುತ್ತಾರೆ. ನೀವು ಎಚ್ಚರಿಕೆಯಿಂದ ಇರಬೇಕು. ಕಾಲಕಾಲಕ್ಕೆ ಸರ್ಕಾರವು ನೀಡುವ ಮಾರ್ಗಸೂಚಿ ಗಳನ್ನು ಪಾಲಿಸಬೇಕು. ನಿಮ್ಮಿಂದ ಹೆಚ್ಚು ಹೆಚ್ಚು ಕೊರೋನಾ ಜಾಗೃತಿ ಯಾಗಲಿ. ಮುನ್ನೆಚ್ಚರಿಕೆ ಕ್ರಮಕ್ಕಾಗಿ ಕೊರೋನಾ ಕಿಟ್ ನೀಡುತ್ತಿದ್ದಾರೆ. ಎಲ್ಲರೂ ಎರಡು ಡೋಸ್ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಿ. ಜೊತೆಗೆ ನಿಮ್ಮ ಅಕ್ಕಪಕ್ಕದ ವರಿಗೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವಂತೆ ಜಾಗೃತಿ ಮಾಡಿ ಎಂದರು.
https://samajamukhi.net/2021/12/18/madhu-rahul-against-hindutva/
ಇನ್ನೊರ್ವ ಪತ್ರಕರ್ತ ಕನ್ನೇಶ ನಾಯ್ಕ ಮಾತನಾಡಿ ಶರಣರು ಕಾಯಕದ ಮಹತ್ವ ವನ್ನು ತಿಳಿಸಿದ್ದಾರೆ. ಅವರವರ ಕಾಯಕಕ್ಕೆ ಅದರದ್ದೇ ಆದ ಮಹತ್ವ ಇದೆ. ಅಂತೆಯೇ ಟೈಲರ್ ಗಳಿಂದ ಕೊರೋನಾ ಜಾಗೃತಿ ಆಗಲಿ ಎಂದರು.
ಪತ್ರಕರ್ತ ದಿವಾಕರ ನಾಯ್ಕ, ಟೈಲರ್ ಅಸೋಸಿಯೇಷನ್ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ, ಮಾಜಿ ಅಧ್ಯಕ್ಷ ರಮೇಶ ಜಿ ಕಲ್ಮೆಟ್ಲ, ಉಪಾಧ್ಯಕ್ಷ ವಿಜಯಕುಮಾರ ಕೆ ಧಾವಸ್ಕರ್ ವೇದಿಕೆ ಯಲ್ಲಿದ್ದರು.
ಕಾರ್ಯದರ್ಶಿ ಎಚ್ ಟಿ ವಾಸು ನಿರೂಪಿಸಿ ವಂದಿಸಿದರು.
ರಾಮನಗರ: ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್, ಸಚಿವ ಅಶ್ವತ್ಥ ನಾರಾಯಣ ಕಿತ್ತಾಟ!
ರಾಮನಗರದಲ್ಲಿಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಬೇಕಿದ್ದ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿಯೇ ಸಂಸದ ಡಿ. ಕೆ. ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಪರಸ್ಪರ ವಾಗ್ವಾದಕ್ಕಿಳಿದ ಪ್ರಸಂಗ ನಡೆದಿದೆ.
ರಾಮನಗರ: ರಾಮನಗರದಲ್ಲಿಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಬೇಕಿದ್ದ ವೇದಿಕೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿಯೇ ಸಂಸದ ಡಿ.ಕೆ. ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ಪರಸ್ಪರ ವಾಗ್ವಾದಕ್ಕಿಳಿದ ಪ್ರಸಂಗ ನಡೆದಿದೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ನಾಡಪ್ರಭು ಕೆಂಪೇಗೌಡ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿತವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ನೀರಾವರಿ ಯೋಜನೆಗಳ ಅನುಷ್ಠಾನ ಬಿಜೆಪಿ ಸರ್ಕಾರದಿಂದಲೇ ಸಾಧ್ಯ. ತಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ನೆರವೇರಿಸಿದೆ. ಇಲ್ಲಿ ಬಿಜೆಪಿ ಪ್ರತಿನಿಧಿ ಇಲ್ಲದಿದ್ದರೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ತಮ್ಮ ಸರ್ಕಾರದಲ್ಲೇ ಯೋಜನೆಗಳನ್ನು ರೂಪಿಸಿ ತಮ್ಮ ಅವಧಿಯಲ್ಲಿಯೇ ಸಂಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.
ಈ ಹಂತದಲ್ಲಿ ಸಿಟ್ಟಾದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ ನಾರಾಯಣ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವೇದಿಕೆಯಲ್ಲಿಯೇ ಧರಣಿ ಕುಳಿತಿದ್ದಾರೆ. ಇದರಿಂದ ಆಕ್ರೋಶಗೊಂಡ ಅಶ್ವತ್ಥ ನಾರಾಯಣ, ಸಿಎಂ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದಿದ್ದು, ವಿಧಾನಪರಿಷತ್ ಸದಸ್ಯ ಸಿ. ರವಿ, ಅಶ್ವತ್ಥ ನಾರಾಯಣ ಅವರು ಮಾತನಾಡುತ್ತಿದ್ದ ಮೈಕ್ ಕಿತ್ತುಕೊಂಡ ಘಟನೆಯೂ ನಡೆದಿದೆ. ಸಂಸದ ಹಾಗೂ ಸಚಿವರ ವಾಗ್ವಾದದಿಂದಾಗಿ ತುಸುಹೊತ್ತು ಕಾರ್ಯಕ್ರಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. (ಕಪ್ರಡಾ)