

ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ.

ಹೈದರಾಬಾದ್: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ. ಗೆ ಮಾಲ್ ಫ್ಲೂ (ಮೊಲ್ನುಪಿರವಿರ್) ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ.
ಮಾಲ್ ಪ್ಲೂ ಮಾತ್ರೆಗಳ ಬೆಲೆ ಕೇವಲ 35 ರೂ. ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಸ್ಟ್ರೀಪ್ ನಲ್ಲಿ 10 ಮಾತ್ರೆಗಳು ಇರಲಿದ್ದು, ಐದು ದಿನಗಳವರೆಗೂ 40 ಮಾತ್ರೆಗಳಿಗೆ ರೂ. 1,400 ವೆಚ್ಚ ತಗುಲಲಿದೆ. ಕೋವಿಡ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಈ ಮಾತ್ರೆಗಳಲ್ಲಿ ತಯಾರಿಸಲಾಗಿದೆ. ಮುಂದಿನ ವಾರ ದೇಶಾದ್ಯಂತ ಔಷಧ ಮಾರುಕಟ್ಟೆಗಳಲ್ಲಿ ಈ ಮಾತ್ರೆಗಳು ದೊರೆಯಲಿವೆ ಎಂದು ಅವರು ಹೇಳಿದ್ದಾರೆ.
ಭಾರತ ಹಾಗೂ 100 ಕಡಿಮೆ, ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಿಗೆ ಮೊಲ್ನಪಿರವಿರ್ ಮಾತ್ರೆ ಪೂರೈಸಲು ಎಂಎಸ್ ಡಿ ಕಂಪನಿಯೊಂದಿಗೆ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು. ಈ ಮಾತ್ರೆಗಳ ಮೂರನೇ ಹಂತದ ಪ್ರಯೋಗವನ್ನು ತಜ್ಞರ ಸಮಿತಿ ಮುಂದೆ ಇಡಲಾಗಿತ್ತು.
ಆಸ್ಪತ್ರೆಯಲ್ಲಿರುವ ಅಥವಾ ಹೆಚ್ಚಿನ ಅಪಾಯವಿರುವ ವಯಸ್ಕ ರೋಗಿಗಳಿಗೆ 200 ಎಂಜಿ ಮೊಲ್ನಪಿರವಿರ್ ಮಾತ್ರೆಗಳ ತಯಾರಿಕೆ ಹಾಗೂ ಮಾರುಕಟ್ಟೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಳೆದ ವಾರ ಅನುಮೋದನೆ ನೀಡಿತ್ತು. (kpc)

ಈ ವೇಳೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಮಾತನಾಡಿ, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹಾಗೂ ಅವರ ಸಹಚರರಾದ ರವಿ ಎಂಬುವರು ವೇದಿಕೆಯಲ್ಲಿ ತೋರಿಸಿದ ವರ್ತನೆಯನ್ನು ಬಿಜೆಪಿ ಸಿದ್ದಾಪುರ ಮಂಡಲ ತೀವ್ರವಾಗಿ ಖಂಡಿಸುತ್ತದೆ. ಈ ಗೂಂಡಾಗಳ ಮೇಲೆ ಸರ್ಕಾರ ತಕ್ಷಣ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಅವರನ್ನು ಬಂಧಿಸಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಲ್ಲದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಬಹುದೊಡ್ಡ ಅಪಮಾನ ಎಂದು ಹೇಳಿದರು.
ಮನವಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ ಸಂದರ್ಭದಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪುಗೊಂಡಿತ್ತು. ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ 2 ಪ್ರತಿಮೆಗಳ ಲೋಕಾರ್ಪಣೆ ಕಾರ್ಯಕ್ರಮ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ಅವರು ಏಕಾಏಕಿ ತಮ್ಮ ಗೂಂಡಾ ಕಾರ್ಯಕರ್ತರೊಂದಿಗೆ ವೇದಿಕೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಡಾ. ಬಿ. ಅಂಬೇಡ್ಕರ್ ಅವರ ಪ್ರತಿಮೆ ಲೋಕಾರ್ಪಣೆ ಸಂದರ್ಭದಲ್ಲಿ ಅವರಿಗೆ ಮಾಡಿರುವ ಅಪಮಾನವಾಗಿರುತ್ತದೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಮೇಸ್ತ, ಪ.ಪಂ. ಸದಸ್ಯ ಸುಧೀರ ನಾಯ್ಕ್ ಕೊಂಡ್ಲಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಪ್ಪ ನಾಯ್ಕ ಪ್ರಮುಖರಾದ ಪ್ರಶಾಂತ್ ರೋಖಡೆ, ಸುರೇಶ್ ನಾಯ್ಕ, ರವೀಂದ್ರ ಮಡಿವಾಳ, ಯುವಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ರಾಯ್ಕರ್, ಯುವಮೋರ್ಚಾ ಕಾರ್ಯದರ್ಶಿಗಳಾದ ಸುರೇಶ್ ಶೇಟ್ ಹಾಗೂ ಶಿವಕುಮಾರ್ ನಾಯ್ಕ ಕೊಂಡ್ಲಿ, ಮಂಜುನಾಥ ನಾಯ್ಕ, ಕೃಷ್ಣಮೂರ್ತಿ ನಾಯ್ಕ ನಿಡಗೋಡ, ಕೇಶವ ನಾಯ್ಕ ದೊಡ್ಮನೆ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು
