

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ-೨೦೨೧
ಅಂತಿಮ ಸುತ್ತಿನಲ್ಲಿದ್ದ ಅಂತಃಕರಣ
ರಾಷ್ಟ್ರಮಟ್ಟದ ಪುರಸ್ಕಾರವಾದ ಕೇಂದ್ರ ಸಾಹಿತ್ಯ ಅಕಾಡೆಮಿಯು ೩೫ ವರ್ಷದೊಳ ಗಿನ ಯುವಸಾಹಿತಿಗಳ ಅತ್ಯುತ್ತಮ ಕೃತಿಗೆ ನೀಡುವ ಯುವ ಪುರಸ್ಕಾರ ಪ್ರಶಸ್ತಿ ಪ್ರಕಟಿಸಿದ್ದು ಯುವಕವಿ ಎಚ್.ಲಕ್ಷ್ಮೀನಾರಾಯಣ ಆಯ್ಕೆಯಾಗಿದ್ದಾರೆ. ಯುವ ಪುರಸ್ಕಾರ-೨೦೨೧ರ ಅಂತಿಮ ಆಯ್ಕೆಪಟ್ಟಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು ಇದರಲ್ಲಿ ಶಿವಮೊಗ್ಗದ ಯುವಲೇಖಕ ಅಂತಃಕರಣ ಅವರು ಎಂಟನೇ ತರಗತಿಯಲ್ಲಿ ಬರೆದ “ನಾವೂ ನೀವೂ ಫ್ರೆಂಡ್ಸ್ ಅಲ್ವಾ?!” ನಾಟಕ ಸ್ಥಾನ ಪಡೆದಿತ್ತು.
ಈ ನಾಟಕವು ಧಾರವಾಡ ವಿಭಾಗ ಮಟ್ಟದ ನಾಟಕೋತ್ಸವದಲ್ಲಿ ಹತ್ತು ಪ್ರರಸ್ಕಾರ ಗಳನ್ನು ಕಂಡಿದ್ದಲ್ಲದೆ ರೇಣುಕಪ್ಪಗೌಡ ಸ್ಮಾರಕ ಟ್ರಸ್ಟ್ ನಾಟಕ ಕೃತಿ ಸ್ಫರ್ಧೆ ಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿತ್ತು. ಅಂತಃಕರಣ ಏಳನೆಯ ತರಗತಿಯಲ್ಲಿ ಬರೆದ “ಗ್ವಾಲಿಮರ್ ರಹಸ್ಯ” ಕಾದಂಬರಿಯೂ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಇದೇ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿತ್ತು.
ಈ ಲೇಖಕ ಇದುವರೆಗೆ ಸಾಹಿತ್ಯದ ಕಥೆ, ಕವಿತೆ, ಕಾದಂಬರಿ, ಅಂಕಣಪ್ರಬಂಧ, ಕ್ರೀಡಾಂಕಣ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ೩೩ ಕೃತಿಗಳನ್ನು ಪ್ರಕಟಿಸಿದ್ದು ಇವುಗಳಿಗೆ ಈವರೆಗೆ ೧೭ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅಂತಃಕರಣ ಪ್ರಸ್ತುತ ಶಿವಮೊಗ್ಗದ ಡಿ.ವಿ.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ.
