

ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜ
ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಬುಧವಾರ ಉಡುಪಿ ಹತ್ತಿರದ ಮಜಲಬೆಟ್ಟು ಬೀಡುವಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಉಡುಪಿ: ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜ ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಅವರೊಂದಿಗೆ ಬುಧವಾರ ಉಡುಪಿ ಹತ್ತಿರದ ಮಜಲಬೆಟ್ಟು ಬೀಡುವಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಈ ವಿಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡ ಶುಭಾ ಪೂಂಜ, ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು ಎಂದು ತಿಳಿಸಿದ್ದಾರೆ.
ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಹೇಳುವ ಮೂಲಕ ಶುಭಾ ಪುಂಜ ತಮ್ಮ ವಿವಾಹ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಇವರ ವಿವಾಹಕ್ಕೆ ಬಿಗ್‍ಬಾಸ್ ಎಂಟರ ವಿಜೇತ ಮಂಜು ಪಾವಗಡ ಸಾಕ್ಷಿಯಾಗಿದ್ದು, ನಿಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಶುಭಾಪೂಂಜ ಬಿಗ್‍ಬಾಸ್ ನಂತರ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. (kpc)
ಸಿದ್ದಾಪುರ: ತಾಲೂಕಿನ ಜಿಡ್ಡಿಯ ಶ್ರೀ ಮಾಡಿವಾಳ ಮಾಚೇಶ್ವರ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಜೀರ್ಣೋಸ್ತಾನ ಟ್ರಸ್ಟ್ ವತಿಯಿಂದ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆ ಯವರು 2 ಲಕ್ಷ ರೂಪಾಯಿ ಗಳನ್ನು ನೀಡಿದ್ದಾರೆ.
ತಾಲ್ಲೂಕು ಯೋಜನಾಧಿಕಾರಿ ಪ್ರಭಾಕರ್ ನಾಯ್ಕ ದೇವಾಲಯ ಕಮೀಟಿ ಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಕಮಿಟಿಯ ಅಧ್ಯಕ್ಷರಾದ ತಿಮ್ಮಪ್ಪ ಜಿಡ್ಡಿ, ಉಪಾಧ್ಯಕ್ಷ ಈಶ್ವರ್, ಕಾರ್ಯದರ್ಶಿ ಸದಾಶಿವ, ಖಜಾಂಜಿ ಗಣಪತಿ, ಸದಸ್ಯರಾದ ನಾಗರಾಜ್, ಬಸವರಾಜ್, ಮಹಾಬಲೇಶ್ವರ, ಗ್ರಾಮಸ್ಥರಾದ ಕನ್ನಪ್ಪ, ಸಂಸ್ಥೆಯ ಮೇಲ್ವಿಚಾರಕರಾದ ಕೃಷ್ಣ, ಸೇವಾ ಪ್ರತಿನಿಧಿ ಅಣ್ಣಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.


