

ಭಾರತದಲ್ಲಿ ಎಲ್ಲಾ ಧರ್ಮಗಳ ದ್ವೇಷದ ಮಾತೃ ಸಂಸ್ಥೆ ಯಾವುದು? ಆರ್ ಎಸ್ ಎಸ್ ದ್ವೇಷಕ್ಕೆ ಸಿಲುಕಿ ಯುವಕರ ಒದ್ದಾಟ!
ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮತ್ತು ಬಿಜೆಪಿ ದ್ವೇಷದ ವಾತಾವಾರಣ ಸೃಷ್ಟಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರು: ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮತ್ತು ಬಿಜೆಪಿ ದ್ವೇಷದ ವಾತಾವಾರಣ ಸೃಷ್ಟಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಮತ್ತು ಆರ್ ಎಸ್ ಎಸ್ ತೀವ್ರಗಾಮಿ ಸಿದ್ದಾಂತದಿಂದ 18 ರಿಂದ 21 ವರ್ಷದೊಳಗಿನ ಯುವಕರು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಳ್ಳುತ್ತಿರುವುದನ್ನು ನೋಡುವುದು ದುರಾದೃಷ್ಟಕರ ಎಂದಿದ್ದಾರೆ, ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಪ್ರತಿಭೆ ತೋರಬೇಕಾದವರು ಆರ್ ಎಸ್ಎ ಸ್ ಮತ್ತು ಬಿಜೆಪಿ ಕೈಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಭಾರತೀಯರು ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಭಾರತದಲ್ಲಿ ಎಲ್ಲಾ ಧರ್ಮಗಳ ದ್ವೇಷದ ಮಾತೃ ಸಂಸ್ಥೆ ಯಾವುದು? ಬುಲ್ಲಿ ಬಾಯ್ ಮತ್ತು ಸುಲ್ಲಿ ಡೀಲ್‌ಗಳ ಹಿಂದೆ ಯಾರಿದ್ದಾರೆ, ಈ ಬಗ್ಗೆ ಕೂಲಂಕಷವಾಗಿ ತನಿಖೆಯಾಗಬೇಕು. ಯುವಕರು ದ್ವೇಷದ ಪ್ರಚಾರಗಳಿಗೆ ಬಲಿಯಾಗಬಾರದು ಎಂದು ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿ ಪ್ರಸಾದ್ ಆರ್ ಎಸ್ ಎಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸಮಾಜವನ್ನು ಧ್ರುವೀಕರಿಸಲು ಮತ್ತು ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ನೀವು ಯುವಕರಿಗೆ ದ್ವೇಷಿಸಲು ಕಲಿಸುತ್ತಿದ್ದರೆ ಅದು ಕೆಲಸ ಮಾಡುವುದಿಲ್ಲ, 18 ಮತ್ತು 21 ವರ್ಷ ವಯಸ್ಸಿನವರು ಈ ದ್ವೇಷ ತುಂಬಿದ ಹರಾಜನ್ನು ಆಯೋಜಿಸಲು ಸಾಧ್ಯವಿಲ್ಲ, ಬಿಜೆಪಿ ಮತ್ತು ಆರ್ ಎಸ್ ಎಸ್ ಈ ಧ್ವೇಷ ಪ್ರಚಾರವನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕ ಕೆ.ಎಚ್ ಮುನಿಯಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ, ಗಣೇಶ್ ಕಾರ್ಣಿಕ್ ಆರ್ ಎಸ್ ಎಸ್ ದ್ವೇಷಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿಯಲಿದೆ ಎಂದು ಹೇಳಿದ್ದಾರೆ. (kpc)
