

ರಾಜ್ಯದಲ್ಲಿ ೨೦೨೧-೨೨ ರಲ್ಲಿ ಪದವಿ,ಸ್ನಾತಕೋತ್ತರ ಪದವಿ.ಬಿ.ಇ.ಡಿ. ಓದುತ್ತಿರುವ ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬೆಂಗಳೂರಿನ ಜೆ.ಪಿ.ಎನ್. ಪ್ರತಿಷ್ಠಾನ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಹಿಂದಿನ ಪರೀಕ್ಷೆಗಳಲ್ಲಿ ಕನಿಷ್ಟ ೬೦% ಗಳಿಸಿದ ಕಲಿಕಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಹರು jpnp.org.in ಈ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಿ ಅದರ ಭೌತಿಕ ಪ್ರತಿಗಳನ್ನು ಆಯಾ ತಾಲೂಕಿನ ಸಂಚಾಲಕರಿಗೆ ಜ.೧೦ ರ ಒಳಗೆ ತಲುಪಿಸಬೇಕು.
ಸಿದ್ಧಾಪುರದಲ್ಲಿ ತಾಲೂಕಾ ಸಂಚಾಲಕ ಸುಭಾಶ್ಚಂದ್ರ ನಾಯ್ಕ(೯೪೮೨೭೫೮೨೪೯) ರನ್ನು ಸಂಪರ್ಕಿಸಲು ತಿಳಿಸಿದ್ದು,ಅರ್ಜಿ ದಾಖಲಾತಿಗಳನ್ನು ಸಿದ್ಧಾಪುರ ಸಮಾಜಮುಖಿ ಕಛೇರಿಗೆ ತಲುಪಿಸಲು ಸುಭಾಶ್ಚಂದ್ರ ನಾಯ್ಕ ಕೋರಿದ್ದಾರೆ. ಆಸಕ್ತರು ಈ ಬಗ್ಗೆ ಮಾಹಿತಿ ಪಡೆದು ಕೊನೆಯ ದಿವಸದ ಮೊದಲು ಸೂಕ್ತ ವ್ಯವಸ್ಥೆ ಮಾಡಲು ಕೋರಲಾಗಿದೆ.


