


ಶಿರಸಿಯಲ್ಲಿ ಮಾರ್ಚ್ 15-23ರವರೆಗೆ ನಡೆಯಲಿದೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ
ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ಇಲ್ಲಿನ ಪ್ರಮುಖರಾದ ಅಜಯ್ ನಾಡಿಗ್ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು..
ಶಿರಸಿ : ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಮಾ.15ರಿಂದ 23ರವರೆಗೆ ಜರುಗಲಿದೆ. ನಗರದ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿಂದು ನಡೆದ ಜಾತ್ರಾ ಮುಹೂರ್ತ ಘೋಷಣಾ ಸಭೆಯಲ್ಲಿ ಅರ್ಚಕ ರಾಮಕೃಷ್ಣ ಭಟ್ಟ ಕೆರೇಕೈ ಮುಹೂರ್ತ ಘೋಷಿಸಿದರು.
ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ಇಲ್ಲಿನ ಪ್ರಮುಖರಾದ ಅಜಯ್ ನಾಡಿಗ್ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.
ಈ ವೇಳೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್ ಜಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ, ಡಿಎಸ್ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್. ಕುಲಕರ್ಣಿ, ಬಾಬುದಾರ, ಪ್ರಮುಖರಾದ ಅಜಯ ನಾಡಿಗ್, ರಮೇಶ ದಬ್ಬೆ, ಮಂಜು ಕುರುಬರ, ಬಸವರಾಜ ಚಕ್ರಸಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. (etbk)

ಸಿದ್ದಾಪುರ: ಧಾರ್ಮಿಕ ತೆಯನ್ನು ಹೊರತುಪಡಿಸಿ ಯಕ್ಷಗಾನ ಬರಬೇಕು. ಯಕ್ಷಗಾನದ ಸಾಧ್ಯತೆಗಳು ವಿಸ್ತರಿಸಬೇಕು
ನಮ್ಮ ಸಂಸ್ಕೃತಿ ಯನ್ನು ಉಳಿಸುವ ಕೆಲಸವಾಗಬೇಕು, ನಮ್ಮನ್ನು ನಾವು ಗುರುತಿಸುವ ಕಾರ್ಯ ವಾಗಬೇಕೆಂದು ಸಮಾಜಮುಖಿ ಪತ್ರಿಕೆಯ ಸಂಪಾದಕ ಕನ್ನೇಶ ಕೋಲಸಿರ್ಸಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಕೋಲಸಿರ್ಸಿ ಗುಡ್ಡೇಕೆರಿಯ ಕಟ್ರನ್ ಕುಟುಂಬದ ವರು ಆಯೋಜಿಸಿರುವ ನಾಗರ ಪ್ರತಿಷ್ಠೆ ಪ್ರಯುಕ್ತ ಹರಕೆ ಯಕ್ಷಗಾನದಲ್ಲಿ ಬಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಇವರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ನಮ್ಮತನ ಉಳಿಸಿ ನಮ್ಮವರನ್ನು ಗುರುತಿಸುವ ಕಾರ್ಯ ವಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಗವತರಾದ ಹೆಮ್ಮನಬೈಲ್ ರಾಮಚಂದ್ರ ನಾಯ್ಕ ನನಗೆ ನಮ್ಮವರ ಮಧ್ಯೆ ಸನ್ಮಾನ ಸ್ವೀಕರಿಸುವುದು ಖುಷಿ ತಂದಿದೆ. ನಾವುಗಳು ಸವಾಲುಗಳನ್ನು ಮೆಟ್ಟಿ ನಿಂತಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ಹೆಚ್ಚು ನಮ್ಮಲ್ಲೂ ಆ ರೀತಿಯ ಬೆಲೆ ಕಲೆ, ಕಲಾವಿದರಿಗೆ ಸಿಗುವಂತಾಗಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಹನುಮಂತ ನಾಯ್ಕ ಮೂರತೂರ, ಬೇಡ್ಕಣಿ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಲಕ್ಷ್ಮಣ ನಾಯ್ಕ ಮಾತನಾಡಿದರು.
ಭಾಗವತ ರಾದ ಹೆಮ್ಮನಬೈಲ್ ರಾಮಚಂದ್ರ ನಾಯ್ಕ ರನ್ನು ಶಾಲು ಹೊಂದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು.
ಶಿವಶಂಕರ ಭಾಗ್ಯಶ್ರೀ ದಂಪತಿಗಳು ಉಪಸ್ಥಿತರಿದ್ದರು.
ಕುಮಾರ್ ನಾಯ್ಕ ಮೆಣಸಿ ನಿರೂಪಿಸಿದರು, ಶಿವಶಂಕರ ಕೋಲಸಿರ್ಸಿ ಸ್ವಾಗತಿಸಿದರು. ಸೋಮಶೇಖರ್ ಕೆ ನಾಯ್ಕ ವಂದಿಸಿದರು.
https://samajamukhi.net/2022/01/07/multi-crop-farmming/
