

ಸಿದ್ಧಾಪುರ ಕಡಕೇರಿಯ ವಕೀಲ ಜಿ.ಆಯ್. ನಾಯ್ಕ ಇಂದು ನಿಧನರಾಗಿದ್ದಾರೆ. ಕೃಷಿಕರು,ವಕೀಲರಾಗಿ ಶಿರಸಿ,ಹಳಿಯಾಳ,ಸಿದ್ಧಾಪುರ ಗಳಲ್ಲಿ ಕಾರ್ಯನಿರ್ವಹಿಸುತಿದ್ದ ಜಿ.ಆಯ್.ನಾಯ್ಕ ಇಂದು ಬಿದ್ರಕಾನ ಬಳಿಯ ಕೊಡ್ಗಿಬೈಲ್ಗೆ ಖಾಸಗಿ ಕೆಲಸದ ನಿಮಿತ್ತ ಬಂದಿದ್ದಾಗ ಹಠಾತ್ ಕುಸಿದು ಬಿದ್ದರು. ದಿಢೀರನೇ ಕುಸಿದು ಬಿದ್ದವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಸಿದ್ಧಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರುತಿದ್ದಂತೆ ವಕೀಲರು ಮೃತರಾಗಿರುವುದನ್ನು ವೈದ್ಯರು ಖಚಿತಪಡಿಸಿದರು.
ಹೃದಯಾಘಾತವಾಗಿ ನಿಧನರಾದ ಇವರ ಮೃತದೇಹವನ್ನು ಅವರಗುಪ್ಪಾದ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಮೃತ ಜಿ.ಆಯ್. ನಾಯ್ಕರ ಪತ್ನಿ ನ್ಯಾಯಾಲಯದ ಉದ್ಯೋಗಿಯಾಗಿದ್ದು ಇಬ್ಬರು ಹೆಣ್ಣುಮಕ್ಕಳೊಂದಿಗೆ ಅವರು ಹಳಿಯಾಳದಲ್ಲಿ ನೆಲೆಸಿದ್ದರು. ಜನಾನುರಾಗಿ ವಕೀಲರಾಗಿದ್ದ ಜಿ.ಆಯ್.ನಾಯ್ಕರ ಸಾವಿಗೆ ಹಿರಿಯ ವಕೀಲರು, ವಕೀಲರ ಸಂಘದ ಸದಸ್ಯರು,ಎ.ಪಿ.ಪಿ. ನ್ಯಾಯಾಧೀಶರು ಸೇರಿದಂತೆ ಅನೇಕರು ಮರುಗಿದ್ದಾರೆ.
ಹಿರಿಯ ವಕೀಲರಾಗಿದ್ದ ಜಿ.ಆಯ್. ನಾಯ್ಕ ಜಾತ್ಯಾತೀತ ಜನತಾದಳದಲ್ಲಿ ಗುರುತಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಹಳಿಯಾಳದಿಂದ ಹುಟ್ಟೂರು ಸಿದ್ಧಾಪುರಕ್ಕೆ ಬಂದಿದ್ದ ಅವರು ಖಾಸಗಿ ಕೆಲಸದ ಕಾರಣಕ್ಕೆ ತಮ್ಮ ಸಹೋದರನ ಮನೆಗೆ ತೆರಳಿದ್ದರು ಸಾಯಂಕಾಲ ೪ರ ಸುಮಾರಿಗೆ ಈ ಹೃದಯಸ್ತಂಬನದ ಸಾವು ಸಂಬಂಧಿಸಿದ್ದು ಅಂತಿಮ ವಿಧಿ ವಿಧಾನಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

