ಹಂದಿ ಮುಳ್ಳು ಮತ್ತು ಕಪ್ಪು ಚಿರತೆ!

ಒಂದು_ಮುಳ್ಳಿನ_ಕತೆ-

ಹಗಲು ರಾತ್ರಿಯ ಬೇಧವಿಲ್ಲದೆ ಓಡಾಡುವ, ಹಲವು ಸಲ ರಾತ್ರಿ ರಸ್ತೆ ಪಕ್ಕದಲ್ಲಿ ಕಾಡೆಮ್ಮೆ, ಕಡ, ಹಂದಿ,ಚಿಗರೆ, ಮೊಲ, ಚಿರತೆ….. ಮೊದಲಾದವುಗಳನ್ನು ನೋಡಿರುವ ನನಗೆ ಹಿಂದೆಂದೂ ಹೀಗಾಗಿರಲಿಲ್ಲ.ನಿನ್ನೆ ಹೀಗಾಯಿತು,

ರಾತ್ರಿ ಏಳೂವರೆಯ ಸಮಯ. ತನ್ನ ಕ್ಲಾಸ್ಮೇಟ್ ಮನೆಗೆ ಹೋಗಿದ್ದ ಮಗನನ್ನು ಹಿಂದೆ ಕೂಡ್ರಿಸಿಕೊಂಡು ಗಾಡಿಯ ಮೇಲೆ ಬರುತ್ತಿದ್ದೆ. ಸಾವಿರಾರು ಸಲ ಹಗಲು ಇರುಳೆನ್ನದೆ ಓಡಾಡಿದ, ಸದಾ ಜನ-ವಾಹನಗಳು ಓಡಾಡುವ ಶಿರಸಿ-ಹೆಗ್ಗರಣಿ ರಸ್ತೆ, ರೇವಣಕಟ್ಟಾ ಬ್ರಿಡ್ಜ್ ಸಮೀಪ. ನಮ್ಮ ಸುತ್ತಲಿನ ರಸ್ತೆಗಳೆಲ್ಲ ಬಹುತೇಕ ಹೊಂಡಗಳಿಂದಲೇ ತುಂಬಿವೆ, ಹಾಗಾಗಿ ರಾತ್ರಿ ಹೊತ್ತು ನಿಧಾನವಾಗಿ ಗಾಡಿ ಚಲಾಯಿಸುವುದು ಅನಿವಾರ್ಯ. ಅದರಲ್ಲೂ ಎದುರಲ್ಲಿ ಇನ್ನೊಂದು ಗಾಡಿ ಬಂದರಂತೂ ಇನ್ನಷ್ಟು ನಿಧಾನವಾಗಲೇಬೇಕು. ಹಾಗೆ ಎದುರಿನಿಂದ ಗಾಡಿಯೊಂದು ಬಂದಿದ್ದರಿಂದ ರಸ್ತೆಯ ಕಡೆ, ಎದುರಿನ ಗಾಡಿಯ ಕಡೆ ಹೆಚ್ಚು ಲಕ್ಷ್ಯವಿತ್ತು. ಆ ನಡುವೆಯೇ ರಸ್ತೆಗೆ ಅಡ್ಡಲಾಗಿ ಗರಿಬಿಚ್ಚಿದ ನವಿಲೊಂದು ನನ್ನ ಗಾಡಿಯ ಕಡೆ ಬರುತ್ತಿರುವಂತೆ ಅನಿಸಿತು.

ಹಾಗೆ ಅನಿಸಿದ ಮರುಕ್ಷಣವೇ ಅದು ಮುಳ್ಳಕ್ಕಿ ಅಲಿಯಾಸ್ ಮುಳ್ಳುಹಂದಿ ಎಂದು ಗೊತ್ತಾಗುವುದಕ್ಕೂ ಅದು ನೇರವಾಗಿ ಬಂದು ಬ್ರೇಕಿನ ಮೇಲಿದ್ದ ನನ್ನ ಕಾಲಿಗೆ ಬಡಿಯುವುದಕ್ಕೂ ಹಿಂದೆ ಕುಳಿತಿದ್ದ ಮಗ “ಅಪ್ಪಯ್ಯ ಮುಳ್ಹಂದಿ….” ಎನ್ನುವುದಕ್ಕೂ ಕಾಲಿಗೆ ಬಡಿದ ಹಂದಿ ತಟ್ಟನೇ ಎಲ್ಲೋ ಓಡಿ ಮಾಯವಾಗುವುದಕ್ಕೂ ಸರಿಹೋಯಿತು. ಕಾಲಿಗೆ ಮೂರ್ನಾಲ್ಕು ಮೊಳೆ ಹೊಡಿಸಿಕೊಂಡ ಅನುಭವವಾಯಿತು. ಹೇಗೋ ಗಾಡಿಯನ್ನು ನಿಯಂತ್ರಿಸಿ ನಿಧಾನವಾಗಿ ಮುಂದೆ ತಂದು ನಿಲ್ಲಿಸಿದೆ.

ಮೊಬೈಲ್ ಬೆಳಕಿನಲ್ಲಿ ನೋಡಿದೆ. ನನ್ನ ಕಾಲು ಮತ್ತು ಚಪ್ಪಲಿ ಶರಶಯ್ಯೆಯಲ್ಲಿರುವ ಭೀಷ್ಮನಂತಾಗಿತ್ತು. ಚಪ್ಪಲಿಗೆ ನಾಲ್ಕು ಕಾಲಿಗೆ ಮೂರು ಮುಳ್ಳುಗಳು ಚುಚ್ಚಿಕೊಂಡಿದ್ದವು. ಚಪ್ಪಲಿಗೆ ಚುಚ್ಚಿದ್ದನ್ನು ಸುಲಭವಾಗಿ ತೆಗೆದು ಎಸೆದಾಯಿತು. ಕಾಲಿಗೆ ಚುಚ್ಚಿದ್ದ ಎರಡು ಮುಳ್ಳುಗಳೂ ಸಹಾ ತೀರಾ ಆಳಕ್ಕಿಳಿಯದೇ ಸುಲಭವಾಗಿ ಮೇಲೆದ್ದು ಬಂದವು. ತುಸು ರಕ್ತ ಚೆಲ್ಲಿದವು. ಒಂದು ಮುಳ್ಳು ಮಾತ್ರ ಭಾರಿ ಗಂಭೀರವಾಗಿತ್ತು. ಹೆಬ್ಬೆರಳ ಪಕ್ಕದ ಬೆರಳಿನ ಉಗುರಿನ ಅಡಿಯಿಂದ ಆಳವಾಗಿ ಇಳಿದಿತ್ತು. ಮಗನ ಬಳಿ ಎಳೆದು ತೆಗೆಯಲು ಹೇಳಿದೆ. ಪ್ರಯತ್ನಿಸಿದ. “ಬರ್ತಿಲ್ಲೆ ಅಪ್ಪಾ..ಕೈ ಜಾರ್ತು” ಎಂದ.

ನಾನೇ ಎಳೆದುಕೊಳ್ಳೋಣವೆಂದು ಕೈ ಹಾಕಿದೆ. ಊಹೂಂ, ಆಳವಾಗಿ ಬೇರೂರಿದ ಮರದಂತಾಗಿಬಿಟ್ಟಿತ್ತು.ಕ್ಷಣ ಆಲೋಚಿಸಿ ಗಾಡಿಯ ಬಾಕ್ಸ್ನೊಳಗಿದ್ದ ಪಕ್ಕಡ್ ತೆಗೆದೆ. “ಯಂತಾ ಆದ್ರೂ ಆಗ್ಲಿ, ನಾ ಕಣ್ ಮುಚ್ಚ್ಕಂಡ್ ನಿತ್ಗತ್ತೆ. ನೀ ಪಕ್ಕಡ್ ನಲ್ಲಿ ಗಟ್ಟಿ ಹಿಡಿದು ಎಳಿ…”ಎಂದು ಪಕ್ಕಡನ್ನು ಮಗನ ಕೈಯಲ್ಲಿ ಹಿಡಿಸಿಕೊಟ್ಟು ಕಣ್ಣು ಮುಚ್ಚಿದೆ. ಎಳೆದ, ನಿಧಾನವಾಗಿ ಹೊರಬಂತು. “ಬಂತು ಅಪಾ… ” ಎಂದಾಗ ಕಣ್ಬಿಟ್ಟು ನೋಡಿದರೆ ಮುಳ್ಳು ಸುಮಾರು ಮೂರು ಇಂಚು ಇಳಿದಿತ್ತು. ನನ್ನ ಬೆರಳಿನೊಳಗೆ ಅಷ್ಟೊಂದು ಜಾಗವಿರುವುದು ನನಗೇ ಆಶ್ಚರ್ಯವಾಯಿತು.

ಒಂದಿಷ್ಟು ರಕ್ತ ಸರಾಗವಾಗಿ ಸುರಿಯಿತು. ನಂತರ ಮಗ ಹೇಳಿದ್ಧೇನೆಂದರೆ “ಮುಳ್ಳ್ ಎಳೆಯಲೆ ನಂಗೂ ಹೆದ್ರಕೆಯಾಗಿತ್ತು ಅಪ್ಪಯ್ಯ, ನಾನೂ ಕಣ್ಮುಚ್ಗಂಡೇ ಎಳ್ದೆ….” ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೂ ಹೆಚ್ಚೇನೆನಿಸಲಿಲ್ಲ. ನಂತರ ನೋವು ನಿಧಾನವಾಗಿ ಜೋರಾಗತೊಡಗಿತ್ತು. ಬೆಳಿಗ್ಗೆ ಓಡಾಡುವುದು ಕಷ್ಟವಾಯಿತು. ಯಾರೋ ವಾಟ್ಸಪ್ ಗೆ ಚಂಪಾ ಅವರ ‘ಕುಂಟಾ ಕುಂಟಾ ಕುರುವತ್ತಿ ‘ ನಾಟಕದ ಬಗ್ಗೆ ಕಳಿಸಿದ್ದು ಅದರ ನೋಟಿಫಿಕೇಶನ್ ‘ಕುಂಟಾ ಕುಂಟಾ’ ಎಂಬುದಷ್ಟೇ ನನಗೆ ಕಾಣಿಸಿ ‘ಜನ ಎಷ್ಟು ಬೇಗ ನನ್ನನ್ನು ಆಡಿಕೊಳ್ಳಲು ಪ್ರಾರಂಭಿಸಿ ಬಿಟ್ಟರಲ್ಲ’ ಅನಿಸಿತು!

ಅಂತೂ ಕುಂಟುತ್ತಲೇ ಎದ್ದು ನಿಧಾನ ಓಡಾಡುತ್ತ ದಿನಚರಿ ಮುಗಿಸಿ ನಿಧಾನ ಗಾಡಿ ಹತ್ತಿ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಗುಳಿಗೆ ಎಲ್ಲ ಆಗಿ, ಇಂಜೆಕ್ಷನ್ ಚುಚ್ಚಿದ ಮತ್ತು ಕುಂಟುತ್ತ ಓಡಾಡಿದ ಮೈಕೈ ನೋವು ಸಹಾ ಜತೆಯಾಗಿ.. ಈಗ ಈ ಬೆರಳು ಮುಳ್ಳಿನ ಪ್ರಕರಣ ಹೆಚ್ಚು ದಿನ ಸತಾಯಿಸದೆ ಸುಖಾಂತ್ಯಗೊಳ್ಳಲೆಂಬ ಹಾರೈಕೆ. ಹಂದಿ ಚುಚ್ಚಿದ ಈ ಮುಳ್ಳು ಒಂದು ಲಸಿಕೆಯಾಗಿ ಕಾರ್ಯನಿರ್ವಹಿಸಲಿ ಎಂಬ ದೂರದ ಆಶಯ.ಕೊನೆಯದಾಗಿನನ್ನ ಕಾಲಿಗೆ ಹಾಗೆ ಬಡಿದು ಗಾಬರಿಯಿಂದ ಓಡಿಹೋಗಿ ಯಾರಿಗೂ ಕಾಣಿಸದಂತೆ ಎಲ್ಲೋ ಕಕ್ಕಾಬಿಕ್ಕಿಯಾಗಿ ಕುಳಿತುಬಿಟ್ಟಿರಬಹುದಾದ ಆ ಪ್ರಾಣಿಗೆ ಬದುಕುವ ಧೈರ್ಯ ಹೆಚ್ಚಲೆಂದು, ಮುಂದೆ ಅದು ಯಾರಿಗೂ ಡಿಕ್ಕಿ ಹೊಡೆಯುವ ಸಂದರ್ಭ ಬಾರದಿರಲೆಂದು ನೀವೆಲ್ಲರೂ ಪ್ರಾರ್ಥಿಸಿರಿ! (-ಗಣೇಶ್‌ ಹೊಸ್ಮನೆ.)

ನಾಲ್ಕು ದಿನದ ಹಿಂದೆ ಕಾಲಿಗೆ ಬಡಿದ ಮುಳ್ಳಕ್ಕಿಯ ಮುಳ್ಳಿನ ನೋವು ನಿನ್ನೆ ಬಹುತೇಕ ಕಡಿಮೆಯಾಗಿತ್ತು. ಇವತ್ತು ಕುಂಟದೇ ನಡೆಯುವಷ್ಟು…. ಹಾಗಾಗಿ ಆ ಮಳ್ಳಕ್ಕಿ ಆರಾಮಿದೆಯೋ ಇಲ್ಲವೋ ಹುಡುಕಿ ನೋಡಿಕೊಂಡು ಬರುವುದು ಎಂದುಕೊಂಡು ಹೊರಟಾಯಿತು 😜😜.
ಸಹಾಯ ಮಾಡಲು Shashidhar Hegde Bharghav Hegde ಜತೆಗಿದ್ದರು.
ಹುಡುಕುತ್ತ ಹುಡುಕುತ್ತ ಮರಾಠಿಕೊಪ್ಪ ಸಮೀಪದ ಘಟ್ಟದಂಚನ್ನು ತಲುಪಿದೆವು😁😁. ಅಲ್ಲಿನ ಸ್ಥಳೀಯರಾದ ಚನ್ನಸರ-ಹಳ್ಳಿಬೈಲಿನ ಹಳೆಯ ಪರಿಚಿತ-ಅಪರಿಚಿತ ಸ್ನೇಹಿತರೂ ಸಿಕ್ಕರು.
ಅಲ್ಲಿಗೆ ನನ್ನ ಕಾಲಿಗೆ ಗುದ್ದಿದ್ದ ಆ ಮುಳ್ಹಂದಿ ನನ್ನನ್ನು ಹೆದರಿಸಲು ಈ ಕರಿಚಿರತೆಯನ್ನು ಕಳಿಸಿತ್ತು😂.
ಇಲ್ಲದಿದ್ದರೆ, ಎಂದಾದರೂ ರಾತ್ರಿ ಹೊತ್ತು ಮಾತ್ರ ಕಾಣಿಸುತ್ತಿದ್ದ ಚಿರತೆ ಹಾಡಹಗಲಿನಲ್ಲಿ ಕಾಣಿಸುವುದಾದರೂ ಹೇಗೆ ಸಾಧ್ಯ?!

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *