

ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಅಥವಾ ಅಗ್ನಿಸರ್ಪಕ್ಕೆ ಗೋರಕೊಡು ಶೇಷನಾಯ್ಕರ ಗಿಡಮೂಲಿಕೆ ರಾಮಬಾಣ ಇದ್ದಂತೆ.
ಸುಮಾರು 55 ವರುಷದಿಂದ ಸಾವಿರಾರು ಜನರ ಕಾಯಿಲೆಯನ್ನ ವಾಸಿಮಾಡಿದ ಕೀರ್ತಿ ಗೋರಕೊಡು ಶೇಷನಾಯಕರದ್ದು.
ದುಡ್ಡು ಕಾಸಿಗೆ ಆಸೆ ಪಡದೆ ಸಾಮಾನ್ಯ ರೈತರ ಹಾಗೆ ಜೀವನಸಾಗಿಸುವ ಶೇಷನಾಯಕರದ್ದು ಮಹಾನ್ ವ್ಯಕ್ತಿ ತ್ವ,
ನಾಲಕ್ಕರು ಎಕ್ಕರೆ ಗದ್ದೆತೋಟದಲ್ಲಿ ಕೆಲಸಮಾಡಿ ಜೀವನ ನಡೆಸುವ ಶೇಷನಾಯಕರು ತಮ್ಮ ಚಿಕ್ಕ ವಯಸ್ಸಿನಲ್ಲಿ ಈ ಗಿಡಮೂಲಿಕೆ ಕಳಿತುಕೊಂಡಿದ್ದಾರೆ.
ಗ್ಯಾಂಗ್ರೀಗ್ ಆಗಿ ವ್ಯದ್ಯರು ನಿಮ್ಮ ಕಾಲನ್ನೇ ಕತ್ತರಿಸಬೇಕು ಎಂಬ ಅನೇಕರ ಕಾಲುಗಳನ್ನ ಉಳುಸಿದ್ದಾರೆ.
ಕೇವಲ ಒಂದು ಎರೆಡು ವಾರದಲ್ಲಿ ಅವರು ಹೇಳಿದ ರೀತಿಯಲ್ಲಿ ನಡೆದುಕೊಂಡರೆ ನಿಮ್ಮ ಕಾಯಿಲೆ ನೂರಕ್ಕೆ ನೂರು ವಾಸಿಯಾಗೋದು ಗ್ಯಾರಂಟಿ.
ಈ ನಡುವೆ ತುಂಬಾ ದೂರದ ಊರಿಗೆ ಹೋಗಿ ಗಿಡಮೂಲಿಕೆ ತರುವುದರಿಂದ ಅಲ್ಲಿ ಯಾರನ್ನೋ ಹಿಡಿದು ಮರ ಹತ್ತಿ ಮತ್ತು ಭೂಮಿಯ ಒಳಗಿರುವ ಬೇರು ಮತ್ತೊಂದನ್ನ ದಿನವಿಡಿ ಅಲೆದು ತರುವುದರಿಂದ ತುಂಬಾನೇ ಕಷ್ಟವಾಗುತ್ತಿದೆ.
ತಾವಾಗಿಯೇ ಬಲವಂತದಿಂದ ಹಣವನ್ನ ಕೊಟ್ಟರೆ ಅವರು ವಿನಯದಿಂದ ಪಡೆಯುತ್ತಾರೆ.
ನಿಮಗೆ ಆಸ್ಪತ್ರೆಯಲ್ಲಿ ಲಕ್ಷ ರೂಪಾಯಿ ಖರ್ಚು .ಮಾಡಿದರು ಇಷ್ಟು ಪರಿಹಾರ ಸಿಗುವುದಿಲ್ಲ.
ಮೊದಲು ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆಯಿಂದಲೇ ಪರಿಹರವನ್ನ ಕೊಡುತ್ತಿದ್ದ ಶೇಷನಾಯಕರು ಇಂದು ಎಲ್ಲಾ ಕಾಯಿಲೆಗಳಿಗೆ ಮದ್ದು ಕೊಡಲು ಇಲ್ಲಿ ಆ ಮರ ಗಿಡ ಬಳ್ಳಿ ಬೇರು ಸಿಗುವುದಿಲ್ಲ ಎಂಬಕಾರಣಕ್ಕೆ ಇತ್ತೀಚೆಗೆ ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಈ ಎರೆಡು ಕಾಯಿಲೆಗಳಿಗೆ ಮಾತ್ರ ಮೂಲಿಕೆಯನ್ನ ಕೊಡುತ್ತಾರೆ.
ಸರ್ಪ ಸುತ್ತಿಗೆ ಪಟ್ಟನದಲ್ಲಿನ ಜನರು ಅಗ್ನಿಸರ್ಪ ಎನ್ನುತ್ತಾರೆ.
ಶಿವಮೊಗ್ಗ ದಿಂದ ತೀರ್ಥಹಳ್ಳಿ ಗೇ ಹೊರಟರೆ ಮದ್ಯ ದಲ್ಲಿ ಬಿಜ್ಜವಳ್ಳಿ ಸಿಗುತ್ತದೆ
ಈ ಬಿಜ್ಜವಳ್ಳಿ ಯಿಂದ ಸಮಕಾನಿ ಮತ್ತು ದಾನಶಾಲೆ ಸಮೀಪ ಏಳುಮನೆ
ಈ ಏಳುಮನೆಯಿಂದ ಒಂದ್ ಅರ್ಧ ಕಿ ಮಿ ದೂರದಲ್ಲಿ ಈ ಗೋರಕೊಡು ಇದೆ .
ಇಲ್ಲಿ ಶೇಷನಾಯಕರದ್ದು ವಾಸ .
ನೀವು ಅವರ ಮನೆಗೆ ಹೋದರೆ ಅವರ ಶ್ರೀಮತಿ ಚಂದ್ರುಮತಿ ಅಥವಾ ಅವರ ಸೊಸೆ ಸುಪ್ರೀತ ನಿಮ್ಮನ್ನ ಮನೆಯಲ್ಲಿ ಕುರಿಸುತ್ತಾರೆ.
ನೀರು ಕಾಫಿ ಕೊಟ್ಟು ನಿಮ್ಮನ್ನ ಉಪಚರಿಸುತ್ತಾರೆ.
ಮಗ ಪ್ರದೀಪನೊಂದಿಗೆ ಶೇಷನಾಯಕರದ್ದು ಬೆಳಿಗ್ಗೆ 5 ರಿಂದ ಸಂಜೆ 6ರ ವರೆಗೆ ಗದ್ದೆಯಲ್ಲಿ ಕೆಲಸ ಮಾಡುವ ಅವರು ನಿಮ್ಮ ಕಷ್ಟ ಗಳಿಗೆ ಸ್ಪಂದಿಸುತ್ತಾರೆ.
ಪ್ರೀತಿಯಿಂದ ಗಿಡಮೂಲಿಕೆ ಕೊಟ್ಟು ಸಾವಿರಾರು ಕುಟುಂಬದ ಸದಸ್ಯರ ಕಣ್ಣೀರು ಒರೆಸಿದ ಶೇಷನಾಯಕರನ್ನು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳು ಅವರನ್ನ ಗುರುತಿಸಿ ಗೌರವಿಸಬೇಕಿತ್ತು .
ಇನ್ನು ಮುಂದಾದರು ಆ ಕೆಲಸವಾಗಲಿ.(
