ರಾತ್ರಿ ಕರ್ಫ್ಯೂ ವಿರುದ್ಧ ಬಿಜೆಪಿಯಲ್ಲೇ ವಿರೋಧ; ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತಡೆಯಲು ಲಾಕ್ ಡೌನ್ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಕ್ಕೆ ಬಿಜೆಪಿ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೊರೋನಾ ಸೋಂಕು ತಡೆಗೆ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ ಎಂದಿದ್ದಾರೆ. 

PrahladJoshi_CT_Ravi_and_HDKumaraswamy1

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ತಡೆಯಲು ಲಾಕ್ ಡೌನ್ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡುವುದಕ್ಕೆ ಬಿಜೆಪಿ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೊರೋನಾ ಸೋಂಕು ತಡೆಗೆ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ ಎಂದಿದ್ದಾರೆ. 

ವಾರಾಂತ್ಯ ಕರ್ಫ್ಯೂ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಸಡಿಲಿಕೆ ಅಗತ್ಯವಾಗಿದೆ. ಈ ಕುರಿತಂತೆ ತಾವು ಮುಖ್ಯಮಂತ್ರಿಗಳಿಗೆ ವೈಯಕ್ತಿಕ ಸಲಹೆ ನೀಡಿದ್ದು, ಚರ್ಚೆ, ಪರಾಮರ್ಶೆಗಳ ನಂತರ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಜೋಶಿ ಹೇಳಿದರು. ಪಣಜಿಯಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕೂಡಾ ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಈ ಬಾರಿ ಕೊರೋನಾ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಎರಡನೇ ಅಲೆಯಲ್ಲಿ ಇದಷ್ಟು ತೀವ್ರತೆ ಇಲ್ಲ. ನೈಟ್ ಕರ್ಫ್ಯೂನಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರಾತ್ರಿ ಕರ್ಫ್ಯೂವಿನಿಂದ ಕೊರೋನಾ ತಡೆಯಬಹುದೆಂದು ತಜ್ಞರು ವರದಿ ಕೊಟ್ಟಿದ್ದಾರೆ. ಆದರೆ, ಇದರಿಂದ ಕೂಲಿ ಕಾರ್ಮಿಕರಿಗೆ ತೊಂದರೆ, ಅವರ ಬದುಕಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದರು. (kpc)

ಟೆಲಿಪ್ರೊಂಪ್ಟರ್ (Teleprompter) ಎಂಬ ಯಂತ್ರ ಇತ್ತಿಚಿಗೆ ಇಂಡಿಯಾ ದೇಶದಲ್ಲಿ ದೊಡ್ದ ಸುದ್ದಿಯಲ್ಲಿದೆ. ಜನ ಸಾಮನ್ಯರಿಗೆ ಈ ಟೆಲಿಪ್ರೊಂಪ್ಟರ್ ಯಂತ್ರದ ಬಗ್ಗೆ ಜಾಸ್ತಿ ಮಾಹಿತಿ ಇರಲು ಸಾದ್ಯವಿಲ್ಲ.. ! ಯಾಕಾಂದ್ರೆ ಅವರು ಅದನ್ನು ಬಳಸುದಿಲ್ಲ. ಈ ಟೆಲಿಪ್ರೊಂಪ್ಟರ್ ಯಂತ್ರವನ್ನು 1950 ರಲ್ಲೇ ರೂಪಿಸಲಾಗಿತ್ತು. ಆ ಕಾಲದಲ್ಲಿ ಟಿವಿಯಲ್ಲಿ ವಾರ್ತೆ ಓದುತ್ತಿರುವ ವಾಚಕರು , ಕೈಯಲ್ಲಿ ಪೇಪರ್ ಇಟ್ಟು , ಬಗ್ಗಿ ಸುದ್ದಿಯನ್ನು ಓದಬೇಕಾಗಿತ್ತು. So ಈ ಪದ್ದತಿಯನ್ನು ಬದಲಾಯಿಸಲು ಒಂದು ನವೀನ ತಂತ್ರವನ್ನು ಆವಿಷ್ಕಾರ ಮಾಡಯಾಯಿತು. ವಾರ್ತಾ ವಾಚಾಕರ ಮುಂದೆ ಒಂದು ಕಂಪ್ಯೂಟರ್ ಪರದೆಯನ್ನು ಇಡಲಾಯಿತು. ಆ ಪರದೆಯಲ್ಲಿ ಸುದ್ದಿಗಳು ಮೂಡುತ್ತಿದ್ದವು. ವಾಚಕರು ಆ ಪರದೆಯನ್ನು ನೋಡಿ ಸುದ್ದಿ ಓದುತಿದ್ದರು. ಆ ಪರದೆಯ ಯಲ್ಲಿ ಬರುತಿದ್ದ ಬರಹಗಳನ್ನು ವಾಚಕರ ಅನೂಕೂಲಕ್ಕೆ ತಕ್ಕಂತೆ ಮೇಲೆ-ಕೆಳಗೆ ತರಲು ಹಿಂಬದಿಯಲ್ಲಿ ಟೆಕ್ನಿಶಿಯನ್ ಗಳಿದ್ದರು. So ಟಿವಿ ನೋಡುತ್ತಿರುವ ಜನರಿಗೆ ವಾರ್ತಾ ವಾಚಾಕ ನೆರವಾಗಿ ತಮ್ಮ ಮುಖ ನೋಡಿ ಮಾತಾಡುವ ಹಾಗೆ ಕಾಣ್ತಾ ಇತ್ತು.ಹೀಗೆ TV ವಾಚಾಕರಿಗೆ ಅಂತಾ ರೂಪಿಸಲ್ಪಟ್ಟ ಈ ಟೆಲಿಪ್ರೊಂಪ್ಟರ್ ಯಂತ್ರ ನಂತರ ಚತುರ ರಾಜಕಾರಣಿಗಳ ಕೈಗೆ ಸೇರಿ ಬಿಡ್ತು. ಅದರ ವಿನ್ಯಾಸ ಮತ್ತು ತಂತ್ರಜ್ನಾವೂ ಬದಲಾಯಿತು. ಯಾರ ಕಣ್ಣಿಗೂ ಕಾಣದ ತೆಳ್ಳಗೆಯ ಗಾಜಿನ ಪಾರದರ್ಷಕ ಹಾಳೆಯಲ್ಲಿ ವಿಷಯಗಳನ್ನು ಓದಿ ಬಾಷಣ ಮಾಡುವಾಗ ಮುಂದೆ ನಿಂತ ಜನರಿಗೆ ಇದು ತಿಳಿಯುತ್ತನೇ ಇರಲಿಲ್ಲ… !! ಜನರೆಲ್ಲಾ “ಏನ್ ಭಾಷಣ ಗುರು, ಪೇಪರ್ ನೋಡದೆ ಹೇಂಗೆಲ್ಲಾ ವಿಷಯ ಹೇಳ್ ಬಿಟ್ರು ನೋಡಿ… ಏನ್ ಮೆಮೊರಿ ಪವರ್ ಗುರು ಅವ್ರದ್ದು ..” ಅಂತಾ ನಿಬ್ಬೆರಗಾಗುತ್ತಿದ್ದರು. ಒಬಾಮ , ಟ್ರಂಪ್ ಮತ್ತು ಕೆಲವು ವಿದೇಶಿ ರಾಜಕಾರಣಿಗಳು ನಿಯಮಿತವಾಗಿ ಈ ಟೆಲಿಪ್ರೊಂಪ್ಟರ್ ಯಂತ್ರವನ್ನು ಉಪಯೋಗಿಸುತ್ತಿದ್ರೆ , ಭಾರತದಲ್ಲಿ ಟೆಲಿಪ್ರೊಂಪ್ಟರ್ ಅನ್ನು ವ್ಯಾಪಕವಾಗಿ ಬಳಸುವುದು ನಮ್ಮ ಪ್ರಧಾನ ಮಂತ್ರಿ ಮೋದಿಜಿ. ****************ನಮ್ಮ ಪ್ರಧಾನಿಗಳಿಗೆ ಉತ್ತಮ ವಾಗ್ಮಿ ಅಂತಾ ಬಿರುದು ಬೇರೆ ಇದೆ. ಯಾವ ಭಾಷೆಯಲ್ಲಾದರೂ ಸರಿ , ಅವ್ರು ಗಂಟೆಗಟ್ಟಲೆ ಚೀಟಿಯನ್ನು ನೋಡದೆ ಭಾಷಣ ಮಾಡ್ತಾರೆ ಅಂತಾ ಜನ ನಂಬಿದ್ದಾರೆ. ಪ್ರಧಾನಿ ಮೋದಿಯವರಿಗೆ ಹಿಂದಿ ಬಾಷೆ ಮೇಲೆ ಉತ್ತಮ ಹಿಡಿತ ಇದೆ. ಆದ್ರೆ ಇಂಗ್ಲಿಷ್ ಅವ್ರಿಗೆ ಕಬ್ಬಿಣದ ಕಡಲೆ. ಅದ್ರೂ ವಿದೇಶದಲ್ಲಿ ಅವರು ಇಂಗ್ಲಿಷ್ ನಲ್ಲಿ ಭಾಷಣ ಮಾಡುವಾಗ ಚೀಟಿ ಓದಿ ಭಾಷಣ ಮಾಡಲು ಅವ್ರಿಗೆ ಮುಜುಗರ. ಅದ್ಕೆ ಅವ್ರು ಚೀಟಿ ಬದಲು ಟೆಲಿಪ್ರೊಂಪ್ಟರ್ ನಲ್ಲಿ ಭಾಷಣ ಓದ್ತಾರೆ. ಮನಮೋಹನ್ ಸಿಂಗ್ ರಂತಹ ಆಕ್ಸ್ ಫರ್ಡ್ ಮೇಧಾವಿ , ಸುಲಲಿತವಾಗಿ ಇಂಗ್ಲಿಷ್ ನಲ್ಲಿ ಮಾತಾಡಲೂ ಬಂದರೂ ಅಮೆರಿಕಾದ ಸಂಸತ್ತಿನಲ್ಲಿ ಭಾಷಣ ವನ್ನು ಚೀಟಿಯಲ್ಲಿ ಬರೆದಿಟ್ಟು ಓದಲು ನಾಚಿಕೆ ಪಡುವುದಿಲ್ಲಾ…! ಆದ್ರೆ ಮೋದಿಯವರಿಗೆ ಅಮೆರಿಕಾದ ಸಂಸತ್ತಿನಲ್ಲಿ ಟೆಲಿಪ್ರೊಂಪ್ಟರ್ ಬೇಕು. ಇದು ಬರೇ ಚಪಲ ಮಾತ್ರವಲ್ಲಾ ಒಂದು ರೀತಿಯ PR ತಂತ್ರವೂ ಹೌದು. ಯಾಕಂದ್ರೆ ಮನೆಯ ಟಿವಿಯಲ್ಲಿ ನೋಡುತ್ತಿರುವ ಸಾಮನ್ಯ ಜನರಿಗೆ ಇವರು ಭಾಷಣ ಒದ್ತಾರೆ ಅಂತಾ ಖಂಡಿತಾ ತಿಳಿಯೊಲ್ಲಾ ..! ಅವ್ರೆಲ್ಲಾ “ಸಾಹೆಬ್ರೂ ಎಷ್ಟು ಚೆನ್ನಾಗಿ ಇಂಗ್ಲಿಷ್ ಮಾತಾಡ್ತಾರಲ್ಲಾ” ಅನ್ಕೊಂಡ್ತಾರೆ ..!! **************** ಇತ್ತಿಚಿಗೆ ಮೋದಿಯವರು ದಿನಕ್ಕೆ ನಾಲ್ಕಾರು ರ‍್ಯಾಲಿಗಳನ್ನು ಉದ್ದೇಶಿಸಿ ಮಾತಾಡ್ತಾರೆ. ಹಾಗಾಗೀ ಮೋದಿಯವರಿಗೆ ಅಂತಾ ಸಿದ್ದಪಡಿಸಿದ ವಿಷೇಷ ವೇದಿಕೆಯ ಭಾಷಣ ಮಾಡುವ ಸ್ಥಳದಲ್ಲಿ ಮೊದಲೇ ಟೆಲಿಪ್ರೊಂಪ್ಟರ್ ವ್ಯವಸ್ಥೆಯನ್ನು ಸಿದ್ದಪಡಿಸಬೇಕಾಗುತ್ತೆ. ಇದಕ್ಕಾಗಿ ದೊಡ್ಡ ಸಂಖ್ಯೆಯ ವಿಶೇಷ ಸಿಬ್ಬಂದಿಗಳು ಬೇಕು. ಅವರು ಮೋದಿಯವರು ಭಾಷಣ ಮಾಡುವ ಮೈಕ್ ಪಕ್ಕದ ಸ್ಥಳದಲ್ಲಿ ಎರಡು ತೆಳ್ಳಗೆಯ ಗಾಜಿನ ಪಾರದರ್ಷಕ ಹಾಳೆಗಳನ್ನು ಎಡ ಮತ್ತು ಬಲ ಭಾಗದಲ್ಲಿ ಇಡುತ್ತಾರೆ. ಅವು ಎಷ್ಟು ತೆಳ್ಳಾಗಾಗಿವೆ ಅಂದ್ರೆ , ಅವು ಜನರ ಬರೀ ಕಣ್ಣಿಗೆ ಕಾಣುವುದೇ ಇಲ್ಲಾ. ಆ ಗಾಜಿನ ಹಾಳೆಗಳ ಹಿಂಬದಿಗೆ ಕ್ಯಾಮೆರಾ ಇಡುತ್ತಾರೆ. ಹಾಗಾಗೀ ಮೋದಿಯವರು ಆ ತೆಳ್ಳಗೆಯ ಗಾಜಿನ ಪಾರದರ್ಷಕ ಹಾಳೆಗಳನ್ನು ನೋಡದೆ, ಕ್ಯಾಮೆರ ವನ್ನೇ ನೋಡಿದ ಹಾಗೆ ಗೋಚರವಾಗುತ್ತದೆ. ಆ ಗಾಜಿನ ಹಾಳೆಯ ಮುಂಭಾಗದಲ್ಲಿ ಭಾಷಣದ ಮೂಲಪಾಠ ಪ್ರದರ್ಶನ ಗೊಳ್ಳುತ್ತದೆ. ಮೋದಿಯವರು ಅದನ್ನು ಓದಬೇಕು. ಒಂದೇ ಕಡೆ ನೋಡಿ ಓದಿದರೆ ಜನರರಿಗೆ doubt ಬರುತ್ತೆ ಅಲ್ಲಾ.. ! ಅದ್ಕೆ ಎಡ , ಬಲ ಅಂತಾ ಏರಡು ಗಾಜಿನ ಹಾಳೆಯನ್ನು ಇಡುತ್ತಾರೆ. ಅದ್ಕೆ ಸ್ವಲ್ಪ ಸಮಯ ಎಡ ಭಾಗ , ಸ್ವಲ್ಪ ಸಮಯ ಬಲ ಭಾಗ ಅಂತಾ ಆಚೆ -ಈಚಿನ ಹಾಳೆಗಳನ್ನು ನೋಡಿ ಮೋದಿ ಯವರು ಭಾಷಣ ಮಾಡ್ತಾರೆ. ವೇದಿಕೆಯ ಹಿಂಬದಿಯ ವಿಷೇಶ ಕೊಠಡಿಯಲ್ಲಿ ಟೆಲಿಪ್ರೊಂಪ್ಟರ್ ಸಿಬ್ಬಂದಿ ಕುಳಿತಿರುತ್ತಾರೆ . ಕಂಪ್ಯೂಟರ್ ನಲ್ಲಿ ಲೋಡ್ ಮಾಡಿದ ಭಾಷಣವನ್ನು ಸಮರ್ಪಕವಾಗಿ ಮೋದಿ ಮುಂದೆ ಇರುವ ಗಾಜಿನ ಹಾಳೆಗಳಲ್ಲಿ ಭಾಷಣದ ಮೂಲಪಾಠ ಬರುವ ಹಾಗೆ adjust ಮಾಡುವುದು ಅವ್ರ ಕೆಲಸ. ಇದಕ್ಕಾಗಿ ಅವರು ವಿಶೇಷವಾದ ಸಾಪ್ಟ್ ವೇರ್ ಕೂಡ ಬಳಸುತ್ತಾರೆ… ! ಓಂದು ವೇಳೆ ಅರ್ಧದಲ್ಲಿ ಟೆಲಿಪ್ರೊಂಪ್ಟರ್ ಯಂತ್ರ ಕೈ ಕೊಟ್ಟರೆ ? ಅದಕ್ಕಾಗಿ Plan B ಅಂತಾ ಇರುತ್ತೆ. ಭಾಷಣದ ಪ್ರಿಂಟ್ ಮಾಡಿದ ಕಾಗದದ ಹಾಳೆಗಳನ್ನು ಸಿಬ್ಬಂದಿಗಳು ಮೊದಲೇ ಮೋದಿಯ ಭಾಷಣದ ಡೆಸ್ಕ್ ನಲ್ಲಿ ಇಡುತ್ತಾರೆ.. ! **************** ಹಿಂದಿಯಲ್ಲಿ ಸುಲಲಿತವಾಗಿ ಬಾಷಣ ಮಾಡುವ ಮೋದಿಯವರು ಇತ್ತಿಚೆಗೆ ಯಾಕೆ ಹಿಂದಿಯಲ್ಲಿ ಕೂಡಾ ವ್ಯಾಪಕವಾಗಿ ಟೆಲಿಪ್ರೊಂಪ್ಟರ್ ಬಳಸುತ್ತಾರೆ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಇತ್ತಿಚೆಗೆ ದಿನಾಲೂ ನಾಲ್ಕೈದು ಭಾಷಣ ಮಾಡಬೇಕಾದ ಆನಿವಾರ್ಯತೆ ಮೋದಿಯವರಿಗಿದೆ. ವಯ್ಯಸ್ಸು ಬೇರೆ ಅವ್ರಿಗೆ ಆದ ಪರಿಣಾಮ ಮುಂಚಿನ ಹಾಗೆ ನೆನಪಿನ ಶಕ್ತಿ ಇಲ್ಲಾ. ಕೆಲವು ಸಮಯಗಳಿಂದ ಅವ್ರು ಭಾಷಣ ಮಾಡುವಾಗ ತುಂಬಾ ಪ್ರಮಾದಗಳನ್ನು ಮಾಡಿದ್ದರು. ಮಹಾತ್ಮ ಗಾಂದಿಜಿಯವರಿಗೆ ಮೋಹನ್ ದಾಸ್ ಅನ್ನುವ ಬದಲು ಮೋಹನ್ ಲಾಲ್ ಗಾಂಧಿ ಅಂತಾ ಕರೆದಿದ್ದರು. ಹೀಗೆ ಇತಿಹಾಸ ಸಂಬಂದ್ದವಾಗಿ ಹತ್ತು ಹಲವು ತಪ್ಪು ಮಾಹಿತಿಗಳನ್ನು ಭಾಷಣ ಸಮಯದಲ್ಲಿ ಹೇಳಿದ್ರು. ಇದನ್ನು ತಡೆಯಲು ಅವ್ರ PR ತಂಡ ಹಿಂದಿಯಲ್ಲಿ ಭಾಷಣ ಮಾಡುವಾಗ ಕೂಡ ಟೆಲಿಪ್ರೊಂಪ್ಟರ್ ಇಡುತ್ತಾರೆ. ಅಂದ ಹಾಗೆ ಹಿಂದಿಯಲ್ಲಿ ಬಾಷಣ ಮಾಡುವಾಗ ಇಂಗ್ಲಿಷ್ ನಲ್ಲಿ ಮಾಡಿದ್ದಂತೆ ಸಂಪೂರ್ಣ ಭಾಷಣ ಓದಿ ಹೇಳುದಿಲ್ಲಾ. ಪ್ರಮುಖವಾದ points ಗಳು ಮಾತ್ರ ಅವರ ಸ್ಕ್ರೀನ್ ಮುಂದೆ ಬರುತ್ತೆ…! ಅದಕ್ಕೆ ಮಸಾಲೆ ಹಾಕಿ ಮೋದಿಯವರು ತಮ್ಮ ಶೈಲಿಯಲ್ಲಿ ವಿಸ್ತರಿಸಿ ಹೇಳ್ತಾರೆ. ಕೆಲವೊಮ್ಮೆ ಹೀಗೆ ಹಿಂದಿಯಲ್ಲಿ ಭಾಷಣ ಮಾಡುವಾಗ correct ಆದ slide ಟೆಲಿಪ್ರೊಂಪ್ಟರ್ ನಲ್ಲಿ ಬರುದಿಲ್ಲಾ .. !! ಅದನ್ನು ಹಿಂಬದಿಯ ಸಿಬ್ಬಂದಿಗೆ ಸರಿಪಡಿಸಲು ಹೇಳುವುದು ಹೇಗೆ ..? ಸಂಜ್ನೆ ಬೇಕಾಲ್ಲಾ ? ಮೋದಿ ಭಾಷಣ ನಿಲ್ಲಿಸಿ ಲೋಟದಿಂದ ಸ್ವಲ್ಪ ನೀರು ಕುಡಿಯುತ್ತಾರೆ… ಆಗ ವೇದಿಕೆಯ ಮುಂಬಾಗದಲ್ಲಿ ಕುಳಿತ ಜನರು “ಮೋದಿ ಮೋದಿ..” ಅಂತಾ ಕೂಗ್ತಾರೆ… ! ಅಷ್ಟೊತ್ತಿಗೆ ಟೆಲಿಪ್ರೊಂಪ್ಟರ್ ಸಿಬ್ಬಂದಿ ಸರಿಯಾದ slide ಸ್ಕ್ರೀನ್ ಮೇಲೆ ಬರುವಂತೆ ಮಾಡ್ತಾರೆ… !! ಮೋದಿ ಭಾಷಣ ಮುಂದುವರಿಸುತ್ತಾರೆ … !ಇದು ಮೋದಿ ಟೆಲಿಪ್ರೊಂಪ್ಟರ್ ಕಥೆ …!! ಟೆಲಿಪ್ರೊಂಪ್ಟರ್ ಹೇಗೆ ಕಾರ್ಯ ನಿರ್ವಹಿಸುತ್ತೆ ಅಂತಾ 2015 ರಲ್ಲಿ ಕೊಂಕಣಿಯ NBJ ಯಲ್ಲಿ ಪ್ರಮೋದ್ ಹೋಸ್ಪೇಟ್ ಎಂಬುವರು ಬರೆದಿದ್ದು ಅದರ ಅನುವಾದ ಇಲ್ಲಿ ಕಾಣಬಹುದು .ದುರ್ದೈವ ಎಂದರು ಇದನ್ನು ಮಾಡದೆ ಮನಮೋಹನ್ ಸಿಂಗ್ ರವರನ್ನು ಮೂಕ ಎಂಬಿತ್ಯಾದಿ ಜರಿದರು. (from-devaray naik,s wall)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *