

ದಿ.ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಪ್ರಥ್ವಿ ಸಿನೇಮಾದಿಂದ ಪ್ರೇರಣೆ ಪಡೆದು ಆಯ್.ಎ.ಎಸ್. ಮಾಡಬೇಕೆಂದು ಪ್ರಯತ್ನಿಸಿ ನಂತರ ಕೆ.ಎ.ಎಸ್. ನಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಸಹಾಯಕ ಕಮೀಷನರ್ ಆಗಿ ಆಯ್ಕೆಯಾಗಿದ್ದ ದೇವರಾಜ್ ಈಗ ಶಿರಸಿ ಉಪವಿಭಾಗದ ಸಹಾಯಕ ಕಮೀಷನರ್ ಆಗಿದ್ದಾರೆ.
ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೃಷಿ ಸಹಾಯಕ ನಿರ್ಧೇಶಕರಾಗಿ ಆಯ್ಕೆಯಾಗಿದ್ದ ದೇವರಾಜ್ ಶಿವಮೊಗ್ಗ ಜಿಲ್ಲೆ ಸೊರಬಾದ ಚಿಮನೂರು ಹಾಲಗಳಲೆ ಯವರು. ಸಿದ್ದಾಪುರದಲ್ಲಿ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆ ಸಲ್ಲಿಸುತಿದ್ದಾಗ ಕೆ.ಎ.ಎಸ್. ಪಾಸು ಮಾಡಿ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದರು. ಪ್ರಭೇಷನರಿಯಾಗಿ ಬೆಂಗಳೂರು ಮತ್ತು ಹಾಸನಗಳಲ್ಲಿ ಸೇವೆ ಸಲ್ಲಿಸಿದ್ದ ದೇವರಾಜ್ ಈಗ ಶಿರಸಿ ಉಪವಿಭಾಗದ ಎ.ಸಿ. ಯಾಗಿ ವರ್ಗಾವಣೆ ಹೊಂದಿದ್ದಾರೆ. ಈ ಹಿಂದೆ ಶಿರಸಿ ಎ.ಸಿ. ಯಾಗಿ ಕಾರ್ಯನಿರ್ವಹಿಸುತಿದ್ದ ಆಕೃತಿ ಬನ್ಸಾಲ್ ದೆಹಲಿ ಕರ್ನಾಟಕ ಭವನದ ಅಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.
ಪ್ರತಿಭಾವಂತರೂ, ಮಹತ್ವಾಕಾಂಕ್ಷಿಗಳೂ ಆದ ದೇವರಾಜ್ ಪುನೀತ್ ಅಭಿನಯದ ಜೇಕಬ್ ವರ್ಗೀಸರ ನಿರ್ಧೇಶನದ ಪ್ರಥ್ವಿ ಸಿನೆಮಾದ ಪ್ರೇರಣೆ ಮತ್ತು ತಮ್ಮ ತಂದೆಯ ಡಿ.ಸಿ.ಎನ್ನುವ ಇನಿಷಿಯಲ್ ಕಾರಣಕ್ಕೆ ಜಿಲ್ಲಾಧಿಕಾರಿಯಾಗಬೇಕೆಂಬ ಆಸೆ ಹುಟ್ಟಿತು ನಂತರ ಆ ದಿಸೆಯಲ್ಲಿ ಪ್ರಯತ್ನ ಮಾಡಿ ಉಪವಿಭಾಗೀಯ ಅಧಿಕಾರಿಯಾದೆ ಎಂದು ಅವರೇ ಹಿಂದೊಮ್ಮೆ ಸಮಾಜಮುಖಿ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ವಿವರಿಸಿದ್ದರು.

