

ನಿಮ್ಮ ಪ್ರಾದೇಶಿಕ ಅಸ್ಮಿತೆಯ ಅರ್ಥ ಏನು? ತಮ್ಮ”ಪಿತಾಶ್ರೀ” ಅವರ ಜೊತೆಯೇ ಚರ್ಚಿಸಿ ಉತ್ತರ ಕಂಡುಕೊಳ್ಳುವುದು ಸೂಕ್ತ!
ಕುಮಾರಸ್ವಾಮಿಯವರೇ, ಗಣರಾಜ್ಯೋತ್ಸವದ ಪರೇಡ್‌ಗೆ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆಯಾಗಿದೆ ಎಂಬುದಕ್ಕೆ ನೀವೇಕೆ ಹೆಮ್ಮೆ ಪಟ್ಟಿಲ್ಲ?

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ಸ್ತಬ್ದ ಚಿತ್ರಗಳ ಆಯ್ಕೆಯಲ್ಲಿ ಶ್ರೀ ನಾರಾಯಣಗುರುಗಳ ಚಿತ್ರವುಳ್ಳ ಕೇರಳ ರಾಜ್ಯದ ಸ್ತಬ್ದ ಚಿತ್ರವನ್ನು ತಿರಸ್ಕಾರ ಮಾಡಿದ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕುಮಾರಸ್ವಾಮಿಯವರೇ, ಗಣರಾಜ್ಯೋತ್ಸವದ ಪರೇಡ್‌ಗೆ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆಯಾಗಿದೆ ಎಂಬುದಕ್ಕೆ ನೀವೇಕೆ ಹೆಮ್ಮೆ ಪಟ್ಟಿಲ್ಲ? ಸತತ ಹದಿಮೂರನೇ ಬಾರಿಗೆ ಕರ್ನಾಟಕದ ಸ್ಥಬ್ದಚಿತ್ರ ಆಯ್ಕೆ ಆಗಿರುವ ಬಗ್ಗೆ ನಿಮಗೆ ಸಂತಸ ಮೂಡಿಲ್ಲವೇ? ನಿಮ್ಮ ಪ್ರಾದೇಶಿಕ ಅಸ್ಮಿತೆಯ ಅರ್ಥ ಏನು? ಎಂದು ಪ್ರಶ್ನಿಸಿದೆ.
ಕುಮಾರಸ್ವಾಮಿ ಅವರೇ, ಶ್ರೀ ಎಚ್.ಡಿ. ದೇವೇಗೌಡ ಅವರು ಈ ರಾಷ್ಟ್ರದ ಪ್ರಧಾನಿ ಹುದ್ದೆ ಅಲಂಕರಿಸಿದವರು. ಗಣರಾಜ್ಯೋತ್ಸವದ ಸ್ಥಬ್ದ ಚಿತ್ರದ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಲು ಸಾಧ್ಯವೇ ಎಂದು ಅವರಲ್ಲಿಯೇ ಕೇಳಿ. ರಕ್ಷಣಾ ಇಲಾಖೆಯಲ್ಲಿ ಇರುವ ಅಧಿಕಾರಿಗಳು ನಿಮ್ಮ ಹಾಗೆ ಎಲ್ಲದರಲ್ಲೂ ರಾಜಕೀಯ ಹುಡುಕುವುದಿಲ್ಲ ಎಂದು ತಿವಿದಿದೆ.
ಕೆಲವೊಂದು ವಿಚಾರಗಳ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಅವರು ತಿಳಿದು ತಿಳಿದೂ ರಾಜಕೀಯ ಮಾಡಲು ಯತ್ನಿಸುತ್ತಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ”ಪಿತಾಶ್ರೀ” ಅವರ ಜೊತೆಯೇ ಚರ್ಚಿಸಿ ಉತ್ತರ ಕಂಡುಕೊಳ್ಳುವುದು ಸೂಕ್ತ ಎಂದು ಕುಮಾರಸ್ವಾಮಿ ಅವರಿಗೆ ಬಿಜೆಪಿ ಸಲಹೆ ನೀಡಿದೆ. (kpc)
