

ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ: ರಾಘವೇಂದ್ರ ರಾಜ್ ಕುಮಾರ್
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಪ್ಪು (ಪುನೀತ್ ರಾಜ್ ಕುಮಾರ್)ನ ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಪ್ಪುನ ಕನಸಿನ ಯೋಜನೆಗಳನ್ನು ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.
.
Taking ahead the vision and dream of Appu. We bring you 3 stories full of love, life and joy.@ashwinipuneet @PrimeVideoIN @PRK_Productions @PRKAudio pic.twitter.com/jo2HCBla9V — Raghavendra Rajkuma al_) January 21, 2022
ಅಲ್ಲದೆ ಪುನೀತ್ ರ ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸಿದ್ದವಾದ ಚಿತ್ರಗಳ ಪೋಸ್ಟರ್ ಅನ್ನು ರಾಘವೇಂದ್ರ ರಾಜ್ ಕುಮಾರ್ ಅಪ್ಲೋಡ್ ಮಾಡಿದ್ದಾರೆ. ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿರುವ ಮೂರು ಚಿತ್ರಗಳ ಮಾಹಿತಿಯನ್ನು ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದು, ಈ ಪೈಕಿ ನಟ ಡ್ಯಾನಿಷ್ ಸೇಠ್ ಅಭಿನಯದ, ಒನ್ ಕಟ್, ಟೂ ಕಟ್, ರಂಗಾಯಣ ರಘು ಅಭಿನಯದ ಫ್ಯಾಮಿಲಿ ಪ್ಯಾಕ್, ರಾಮ ರಾಮ ರೇ ಖ್ಯಾತಿಯ ನಟರಾದ ನಟರಾಜ್, ಧರ್ಮಣ್ಣ..ಶ್ರೀಧರ್ ಅಭಿನಯದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. (kpc)
