

ಮೀನು ಸಾಕುವ ಗುತ್ತಿಗೆ ಪಡೆದಿರುವ ವ್ಯಕ್ತಿಗಳು ಕೋಳಿ ತ್ಯಾಜ್ಯಗಳನ್ನು ಕೆರೆಗೆ ಹಾಕಿ ಕೆರೆ ಕಲುಶಿತ ಮಾಡಿರುವ ಬಗ್ಗೆ ಅವರಗುಪ್ಪಾ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ಧಾಪುರ ಅವರಗುಪ್ಪಾದ ಸಣ್ಣ ನೀರಾವರಿ ಇಲಾಖೆಯ ಕೆರೆ ಅವರಗುಪ್ಪ,ಹೊಸೂರು,ಕಡಕೇರಿಯ ರೈತರಿಗೆ ಜೀವಜಲ ಒದಿಸುವ ಜೊತೆಗೆ ಅವರಗುಪ್ಪಾದ ಆರ್ಥಿಕತೆಗೂ ನೆರವಾಗಿದೆ.
ತಾಲೂಕಿನ ೨ ನೇ ಅತಿದೊಡ್ಡ ಕೆರೆ ಎನ್ನುವ ಹೆಗ್ಗಳಿಕೆ ಇರುವ ಅವರಗುಪ್ಪಾದ ಈ ಕೆರೆಯಲ್ಲಿ ಸ್ಥಳಿಯರು ಬಟ್ಟೆ ತೊಳೆಯುವುದು, ಜಾನುವಾರುಗಳಿಗೆ ಶುಚಿ ಮಾಡುವುದನ್ನು ಮಾಡುತ್ತಾರೆ. ಈಗ ಈ ಕೆರೆಗೆ ಮೀನು ಸಾಕುವವರು ಹಾಕುತ್ತಿರುವ ಕೋಳಿ ತ್ಯಾಜ್ಯಗಳಿಂದಾಗಿ ಕೆರೆ ಕಲುಶಿತವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಗ್ರಾಮಪಂಚಾಯತ್ ಗೆ ದೂರು ನೀಡಿರುವ ಸ್ಥಳಿಯರು ಮೀನು ಸಾಕುವವರು ಹಾಕಿರುವ ತ್ಯಾಜ್ಯದಿಂದಾಗಿ ಕೆಲೆ ಕಲುಶಿತವಾಗಿದೆ. ಸಾರ್ವಜನಿಕರ ಬಳಕೆಗೆ ಮುಕ್ತವಾಗಿದ್ದ ಈ ಕೆರೆ ಬಳಿ ಸುಳೀಯಲು ಸಾಧ್ಯವಿಲ್ಲದ ರೀತಿ ಕೆಟ್ಟ ವಾಸನೆ ಬರುತಿದ್ದು ನರಿ-ಹದ್ದುಗಳು ಹಗಲಲ್ಲಿ ಕೆರೆ ಬಳಿ ಸುತ್ತುತ್ತಿವೆ. ಎಂದು ಆತಂಕ ವ್ಯಕ್ತಪಡಿಸಿ ಈ ಅವ್ಯವಸ್ಥೆ ಸರಿಪಡಿಸಲು ಸ್ಥಳೀಯ ಆಡಳಿತಕ್ಕೆ ದೂರಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಮೀನುಸಾಗಾಣಿಕೆಯ ಗುತ್ತಿಗೆ ಪಡೆದಿರುವ ವ್ಯಕ್ತಿಗಳು ಮೀನು ಬೆಳೆಸಲು ಮಾಡಿರುವ ಈ ತಂತ್ರದಿಂದಾಗಿ ಗ್ರಾಮದ ಜನರಿಗೆ ಬೇಸರವಾಗಿದ್ದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.




