

‘ಗುರು ಶಿಷ್ಯರು’ ಸಿನಿಮಾದಲ್ಲಿ 13 ಹುಡುಗರಿಗೆ ಶರಣ್ ಖೋ ಖೋ ಕೋಚ್
ಸಿನಿಮಾದಲ್ಲಿ ನಟಿಸುತ್ತಿರುವ 13 ಹುಡುಗರಲ್ಲಿ 6 ಮಕ್ಕಳು ಸ್ಟಾರ್ ಕಿಡ್ಸ್ ಆಗಿದ್ದಾರೆ.

ಜಡೇಶ ಕೆ. ಹಂಪಿ ನಿರ್ದೇಶಿಸುತ್ತಿರುವ ಗುರು ಶಿಷ್ಯರು ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಖೋ ಖೋ ಕ್ರೀಡೆಯ ಕುರಿತಾಗಿದೆ. ಸಿನಿಮಾದಲ್ಲಿ 13 ಹುಡುಗರ ಕೋಚ್ ಆಗಿ ನಾಯಕ ಪಾತ್ರದಲ್ಲಿ ಶರಣ್ ನಟಿಸುತ್ತಿದ್ದಾರೆ.
ಸಿನಿಮಾದಲ್ಲಿ ನಟಿಸುತ್ತಿರುವ 13 ಹುಡುಗರಲ್ಲಿ 6 ಮಕ್ಕಳು ಸ್ಟಾರ್ ಕಿಡ್ಸ್ ಆಗಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್ ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಶಾಸಕ ರಾಜು ಗೌಡ ಪುತ್ರ ಮಣಿಕಂಠ ನಾಯಕ್ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.
ಇನ್ನುಳಿದಂತೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಹುಡುಗರ ತಂಡದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾದಲ್ಲಿ ನಟಿಸುತ್ತಿರುವ ಮಕ್ಕಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಗುರು ಶಿಷ್ಯರು ಸಿನಿಮಾದ ಕ್ರಿಯೇಟಿವ್ ಹೆಡ್ ತರುಣ್ ಕಿಶೋರ್ ಸುಧೀರ್ ಹೇಳಿದ್ದಾರೆ. (kpc)
