

‘ರಾಣ’ದಲ್ಲಿ ಸಂಯುಕ್ತಾ ಹೆಗಡೆ ಹಾರ್ಟ್ ಬೀಟ್ ಹೆಚ್ಚಿಸೋ ಹಾಟ್ ಸ್ಟೆಪ್: ‘ಮಳ್ಳಿ ಮಳ್ಳಿ’ ಮ್ಯೂಸಿಕ್ ವಿಡಿಯೊ ಲಾಂಚ್
ನಾಯಕ ಶ್ರೇಯಸ್ ಮಂಜು ಜೊತೆ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಹೆಜ್ಜೆ ಹಾಕಿರುವ ‘ರಾಣ’ ಸಿನಿಮಾದ ‘ಮಳ್ಳಿ ಮಳ್ಳಿ’ ಹಾಡಿನ ಮ್ಯೂಸಿಕ್ ವಿಡಿಯೋ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.

ನಾಯಕ ಶ್ರೇಯಸ್ ಮಂಜು ಜೊತೆ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಹೆಜ್ಜೆ ಹಾಕಿರುವ ರಾಣ ಸಿನಿಮಾದ ‘ಮಳ್ಳಿ ಮಳ್ಳಿ’ ಹಾಡಿನ ಮ್ಯೂಸಿಕ್ ವಿಡಿಯೋ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.
ಕನ್ನಡ ರಾಪರ್ ಚಂದನ್ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ಉತ್ತರಕರ್ನಾಟಕ ಸೊಗಡಿನಲ್ಲಿ ಮೂಡಿ ಬಂದಿದೆ.
ಮಳ್ಳಿ ಮಳ್ಳಿ ಹಾಡಿಗೆ ಶ್ರೇಯಸ್ ಮಂಜು ಮತ್ತು ಸಂಯುಕ್ತಾ ಹೆಗಡೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ನಟಿ ಸಂಯುಕ್ತಾ ಹೆಗಡೆ ಹಾಕಿರುವ ಹಾಟ್ ಸ್ಟೆಪ್ಪುಗಳು ಪಡ್ಡೆ ಹುಡುಗರ ನಿದ್ದೆ ಕದಿಯುವುದು ಪಕ್ಕಾ.
ಈ ಹಾಡಿನ ಮೂಲಕ ಸಂಯುಕ್ತಾ ಹೆಗಡೆ ತಮ್ಮ ನೃತ್ಯ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.
ರಾಣ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶಿಸಿದ್ದು, ಶೇಖರ್ ಚಂದ್ರ ಸಿನಿಮೆಟೊಗ್ರಾಫರ್ ಹೊಣೆ ಹೊತ್ತಿದ್ದಾರೆ. ಗುಜ್ಜಾಲ್ ಪುರುಷೋತ್ತಮ್ ಅವರು ಸಿನಿಮಾಗೆ ಹಣ ಹೂಡಿದ್ದಾರೆ. (kpc)
