

Valentine’s Day: ಬಸ್, ರೈಲ್, ಫ್ಲೈಟ್‌ನಲ್ಲಿ ಅರಳಿದ ಪ್ರೇಮ! ರಾಜಕೀಯ ನಾಯಕರ ಲವ್ ಸ್ಟೋರಿ!





ಇಂದು ಪ್ರೇಮಿಗಳ ದಿನ. ಈ ದಿನದಂದು ಪ್ರೀತಿಯ ಬಗ್ಗೆ ಮಾತನಾಡುವುದು ಅವಶ್ಯಕ. ಇಂದು ನಾವು ರಾಜಕೀಯ ಮನೆಗಳ ಮನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ನಾಯಕರ ಪ್ರೇಮಕಥೆಯು ಸಿನಿಮಾ ಕಥೆಗಿಂತ ಕಡಿಮೆ ಏನಿಲ್ಲ. ಇವರ ಪ್ರೀತಿ ಬಸ್ಸು, ರೈಲು ಪ್ರಯಾಣದಿಂದ ಶುರುವಾಗಿ ಹಮ್‌ಸಫರ್ ನಂತೆ ವಿಮಾನದಲ್ಲೂ ಅರಳಿವೆ.
ಸ್ಮೃತಿ ಇರಾನಿ-ಜುಬಿನ್ ಇರಾನಿ: ಮೋದಿ ಸರ್ಕಾರದ ಕ್ಯಾಬಿನೆಟ್ ಸಚಿವೆ ಮತ್ತು ಅಮೇಥಿಯ ಸಂಸದೆ ಸ್ಮೃತಿ ಇರಾನಿ ಒಂದು ಕಾಲದಲ್ಲಿ ಜನಪ್ರಿಯ ಟಿವಿ ನಟಿಯಾಗಿದ್ದರು. ಸ್ಮೃತಿ, ಜುಬಿನ್ ಇರಾನಿ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಜುಬಿನ್ ಅವರ ಬಗ್ಗೆ ಹೇಳೋದಾದ್ರೆ ಅವರೊಬ್ಬ ಉದ್ಯಮಿ. ಸ್ಮೃತಿ ಮತ್ತು ಜುಬಿನ್ ಬೇರೆ ಬೇರೆ ಜಾತಿಯವರಾದ್ರೂ ಮದ್ವೆ ಮಾಡಿಕೊಂಡಿದ್ದಾರೆ.
ಅಖಿಲೇಶ್ ಯಾದವ್-ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಅವರ ಪ್ರೇಮಕಥೆ ಫಿಲಂ ರೀತಿಯಲ್ಲಿದೆ. ಇಬ್ಬರೂ ಪ್ರೇಮ ವಿವಾಹದೊಂದಿಗೆ ಬೆರತಿದ್ದಾರೆ. ಆರಂಭದಲ್ಲಿ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ರೂ ನಂತರ ಒಪ್ಪಿಕೊಂಡರು. ಡಿಂಪಲ್ ಯಾದವ್ ಎರಡು ವರ್ಷಗಳಿಂದ ಲೋಕಸಭಾ ಸಂಸದರಾಗಿದ್ದಾರೆ.
ತೇಜಸ್ವಿ ಯಾದವ್-ರಾಚೆಲ್: ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಸ್ನೇಹಿತೆ ರಿಚೆಲ್ ಗೊಡಿನ್ಹೋ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಿಚಯಸ್ತರು. ಇತ್ತೀಚೆಗಷ್ಟೇ ನಡೆದ ಈ ಮದುವೆ ಭಾರೀ ಸುದ್ದಿ ಪಡೆದುಕೊಂಡಿತ್ತು. ರಾಚೆಲ್ ಕ್ರಿಶ್ಚಿಯನ್ ಸಮುದಾಯರಾಗಿದ್ದರಿಂದ ಇವರ ಸಂಬಂಧಿಕ ಸಾಧು ಯಾದವ್ ಕೋಪಗೊಂಡಿದ್ದರು. ತಂದೆ ಲಾಲು ಯಾದವ್ ಅವರನ್ನು ಒಪ್ಪಿಸಲು ತೇಜಸ್ವಿ ಸಾಕಷ್ಟು ಹರಸಾಹಸ ಪಡಬೇಕಾಯಿತು ಎನ್ನಲಾಗಿದೆ.
ಅನುಪಮ್ ಖೇರ್-ಕಿರಣ್ ಖೇರ್: ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಇಬ್ಬರೂ ಚಿತ್ರರಂಗದ ಪ್ರಸಿದ್ಧ ನಟರು. ಅನೇಕ ಸೂಪರ್‌ಹಿಟ್ ಚಿತ್ರಗಳು ಬಾಲಿವುಡ್ ಗೆ ನೀಡಿದ್ದಾರೆ. ಆದರೆ, ಕಿರಣ್ ಖೇರ್ ಈಗ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಚಂಡೀಗಢದಿಂದ ಸತತ ಎರಡು ಅವಧಿಗೆ ಸಂಸದರಾಗಿದ್ದಾರೆ.

(ಕಪ್ರಡಾ)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






