ಪ್ರೇಮಂ..ಪೂಜ್ಯಂ…ಭಾಗ-೦೨ -ಲವ್‌ ಕೆಮಿಸ್ಟ್ರಿಯ ನೂರು ನಿಗೂಢಗಳು

ಲವ್‌ ಕೆಮಿಸ್ಟ್ರಿಯ ಮೂರು ನಿಗೂಢಗಳು:

ಲವ್‌ ಅನ್ನೋದು ಅದೆಂಥ ಕಿಲಾಡಿ ತಲೆನೋವು ಗೊತ್ತಾ!ಹಣ್ಣಿನಂಗಡಿಯಲ್ಲಿ ಕಿತ್ತಳೆ, ಅನಾನಸ್‌, ಸೇಬು, ಪಪ್ಪಾಯಿ, ದ್ರಾಕ್ಷಿ ಎಲ್ಲ ಇವೆ. ಎಲ್ಲವೂ ನಮಗಿಷ್ಟ. ಒಂದೆರಡೊ ಮೂರೊ ಹಣ್ಣುಗಳು ತುಸು ಜಾಸ್ತಿ ಇಷ್ಟವಾಗಬಹುದು. ಆದರೆ ಒಂದೇ ಹಣ್ಣಿನ ಬಗ್ಗೆ ಹಗಲೂ ರಾತ್ರಿ ಚಿಂತೆ ಮಾಡ್ತಾ, ʼಅದೇ ಬೇಕು, ಬೇರೇನೂ ಬೇಡʼ ಅಂತೀವಾ? ಹಾಗೆಲ್ಲ ಹಠ ಮಾಡಿ ಕೂತರೆ ʼಹುಚ್ಚುʼ ಅಂತೀವಿ ತಾನೆ?ಸ್ವೀಟ್‌ ಕೂಡ ಹಾಗೇ. ಎಲ್ಲವೂ ಇಷ್ಟ. ಕೆಲವು ತುಸು ಕಮ್ಮಿ, ಕೆಲವು ಜಾಸ್ತಿ ಇಷ್ಟ ಹೌದು. ಆದರೆ ಒಂದಕ್ಕೇ ಅಂಟಿಕೊಂಡರೆ ಹಗಲೂ ರಾತ್ರಿ ಅದರದ್ದೇ ಭಜನೆ ಮಾಡುತ್ತಿದ್ದರೆ, ಕವನ ಬರೆಯುತ್ತಿದ್ದರೆ ಅದು ಗೀಳು ಹೌದೊ ಅಲ್ಲವೊ?ಬಟ್ಟೆಬರೆ, ಸಂಗೀತ, ಸಾಹಿತ್ಯ, ಕಾರು, ಸಿನೆಮಾ ಸ್ಟಾರು ಎಲ್ಲವುಗಳಲ್ಲೂ ನಮ್ಮ ಆಯ್ಕೆಗೆ ಶ್ರೇಣಿ ಇರುತ್ತದೆ. ಯಾವುದೂ ತೀರ ಅತಿರೇಕ ಆಗಲ್ಲ.ಆದರೆ ಈ ಲವ್‌ ಕತೆ ಬೇರೇನೇ.

ಆ ಹುಡುಗನಿಗಿಂತ ಈ ಹುಡುಗ ನೂರು ಪಟ್ಟು ಇಷ್ಟ ಆಗಿಬಿಡ್ತಾನೆ. ಚಂದದ ಆ ಹುಡುಗಿಗಿಂತ, ಸುಮಾರಾಗಿರೋ ಈ ಹುಡುಗಿ ಇವನಿಗೆ ಇಷ್ಟ ಆಗಿಬಿಡ್ತಾಳೆ. ಅವಳಿಗಾಗಿ ಇವನು ಪ್ರಾಣ ಕೊಡೋಕೂ ತಯಾರು. ಅವಳು ಇವನನ್ನು ತಿರಸ್ಕರಿಸಿದರೆ ಪ್ರಾಣ ತೆಗೆಯೋಕೂ ತಯಾರು. ಲವ್‌ ಜ್ವರದಿಂದಾಗಿಯೇ ಅದೆಷ್ಟೊಂದು ರೋಮಿಯೋ ಜೂಲಿಯೆಟ್‌ ಕತೆ, ಕಾದಂಬರಿ, ಕವಿತೆ, ನಾಟಕ, ಸಿನೆಮಾ, ಗಝಲ್, ತಾಜಮಹಲ್‌. ಜಗತಿನಾದ್ಯಂತ ವ್ಯಾಲಂಟಿನ್‌ ಡೇ.ಇದೆಂಥ ವಿಚಿತ್ರ? ಏನಾಗ್ತದೆ ನಮ್ಮ ಮಿದುಳಲ್ಲಿ?ಹೆಲೆನ್‌ ಫಿಶರ್‌ ಎಂಬ ಮಹಿಳೆ (77) ಈ ಲವ್‌ ಜ್ವರದ ತನಿಖೆಗೆಂದೇ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ. ಅವಳ ಸಂಶೋಧನೆ, ಪಿಎಚ್‌ಡಿ, ವೃತ್ತಿ, ಉಪನ್ಯಾಸ, ಓಡಾಟ, ಪ್ರಯೋಗ, ಗ್ರಂಥ ರಚನೆ ಎಲ್ಲವೂ ಪ್ರಣಯ ಕುರಿತಾದದ್ದು. ಪ್ರಣಯ ಪೀಡಿತರನ್ನು MRI ಮಶಿನ್ನೊಳಗೆ ತೂರಿಸಿ, ಅವರ ಮಿದುಳನ್ನು ಸ್ಕ್ಯಾನ್‌ ಕೂಡ ಮಾಡಿದ್ದಾಳೆ. Helen Fisher ಹೆಸರನ್ನು ಗೂಗಲ್‌ಗೆ ಹಾಕಿದರೆ (ಕನ್ನಡದಲ್ಲಿ ಹಾಕಿದರೂ) ಈಕೆಯ ಉಪನ್ಯಾಸಗಳನ್ನು ಕೇಳಬಹುದು.ನಮ್ಮ ಮಿದುಳಿನ ತೀರ ಆಳದಲ್ಲಿ (ಟೆಗ್ಮೆಂಟಲ್‌ ಏರಿಯಾ) ಅಂದರೆ, ನಮ್ಮ ಪೂರ್ವಜರು ಓತಿಕ್ಯಾತಗಳೇ ಆಗಿದ್ದಾಗ ರೂಪುಗೊಂಡ ಆದಿ ಮಿದುಳಲ್ಲಿ ಲವ್‌ ಕುರಿತು ನರ ಸಂವೇದನೆ ಹೊಮ್ಮುತ್ತದಂತೆ. ಗಂಡಿನ ಮಿದುಳಿನ ಆಳದ ಒಂದೇ ಒಂದು ಜೊಂಪೆ ಸೂಕ್ಷ್ಮ ನರಕೋಶಗಳಲ್ಲಿ ಪ್ರಣಯ ಸಂವೇದನೆ ಉಕ್ಕುತ್ತದೆ. ಆದರೆ ಹೆಣ್ಣಿನ ಮಿದುಳಿನಲ್ಲಿ ಎರಡು ಮೂರು ಕಡೆ ನರಕೋಶಗಳು ಮಿನುಗುತ್ತವೆ.ಈ ವ್ಯತ್ಯಾಸಕ್ಕೆ ಕಾರಣ ಏನೆಂದರೆ (ನನ್ನ ʼನರಮಂಡಲ ಬ್ರಹ್ಮಾಂಡʼ ಪುಸ್ತಕದಲ್ಲಿ ತುಸು ದೀರ್ಘ ವಿವರಣೆ ಇದೆ) ಹೆಣ್ಣಿನ ಮೇಲೆ ಒಮ್ಮೆ ಕಣ್ಣಾಡಿಸಿ ಅವಳ ದೇಹಭಾಷೆ ಗೊತ್ತಾದರೆ ಸಾಕು. ಅವನು ಮಿಲನಕ್ಕೆ ರೆಡಿ. ಆದರೆ ಹೆಣ್ಣಿಗೆ ಜಾಸ್ತಿ ಜವಾಬ್ದಾರಿ ಇದೆ. ಮಿಲನದ ಫಲವನ್ನು ಅವಳೇ ಅನುಭವಿಸಬೇಕು ತಾನೆ? ಹಾಗಾಗಿ ಸಾಧ್ಯವಾದಷ್ಟೂ ಜಾಸ್ತಿ ಮಾಹಿತಿಯನ್ನು ಅವನ ಬಗ್ಗೆ ಆಕೆ ಕಲೆ ಹಾಕುತ್ತಾಳೆ. ಲಾಭ-ನಷ್ಟಗಳನ್ನು ತೂಗಿ ನೋಡುತ್ತಾಳೆ. ಮೊದಲ ನೋಟದಲ್ಲೇ ಲವ್‌ ಆದರೂ ಅದು ನಿಕ್ಕೀ ಆಗಲಿಕ್ಕೆ ಅವಳಿಗೆ ಕೊಂಚ ಟೈಮ್‌ ಬೇಕು.

ಇದನ್ನೂ ಓದಿ….

ಗಂಡಿಗೆ ಯಾಕೆ ಲವ್‌ ಜ್ವರ ಬರುತ್ತದೆ? ಅವಳು ದಕ್ಕದಿದ್ದರೆ ಆತ ಹುಚ್ಚ ಯಾಕೆ ಆಗ್ತಾನೆ? ಇಂದು ಇವಳು, ನಾಳೆ ಅವಳು ಅಂತ ತನ್ನ ವಂಶವಾಹಿಯನ್ನು ದಾಟಿಸುತ್ತ ಹೋಗಬಹುದಲ್ಲ? ದುಂಬಿಯಂತೆ ಹತ್ತಾರು ಹೂಗಳಿಗೆ ಮುತ್ತಿಕ್ಕಬಹುದಲ್ಲ?ಇಲ್ಲ. ಅಲ್ಲಿದೆ ಜೀವ ವಿಕಾಸದ ತುಸು ಸೀಕ್ರೆಟ್‌. ಅಲ್ಲಿ ಕೆಮಿಸ್ಟ್ರಿ ಬರುತ್ತದೆ. ಅವನು (ಮಿಲನದ ನಂತರ) ವರ್ಗಾಯಿಸುವ ಜೀನ್‌ಗಳಿಗೆ ರಕ್ಷಣೆ ಬೇಕು. ಅವನೇ ಅವಳಿಗೆ ರಕ್ಷಣೆ ಕೊಡಬೇಕು. ತನ್ನ ಸಂತಾನದ ಪೋಷಣೆಗೆ ಬೇಕಾದ ಸಾಮಗ್ರಿಗಳನ್ನು ಅವನೂ ಜೋಡಿಸಿ ಕೊಡಬೇಕು. ಮಗು ಜನಿಸಿ, ಬೆಳೆಯುವವರೆಗೂ ಅವನು ಅವಳ ಜೊತೆಗಿರಬೇಕು. ಅವನನ್ನು ಹಾಗೆ ದಾಂಪತ್ಯದಲ್ಲಿ ಬಂಧಿಸಿ ಇಡಬಲ್ಲ ಹೆಣ್ಣೇ ಅವನನ್ನು ಸೆಳೆಯುತ್ತಾಳೆ. ಇವನ-ಅವಳ ಮಧ್ಯೆ ಅವರಿಬ್ಬರಿಗೂ ಗೊತ್ತಾಗದಂಥ ಅವ್ಯಕ್ತ ಸಿಗ್ನಲ್‌ಗಳು ವಿನಿಮಯ ಆಗುತ್ತವೆ. ಅದು ಫೆರೊಮೋನ್‌ ಇರಬಹುದು (ಜಾಸ್ತಿ ಕೃತಕ ಪರಿಮಳವನ್ನು ಪೂಸಿಕೊಳ್ಳಬೇಡಿ). ಇನ್ನೇನೋ ಇರಬಹುದು. ಅದು ಮೋಡಿ. ಅದುವೇ ಮೋಹ ಪಾಶ. ಜನುಮ ಜನುಮದ ಅನುಬಂಧ.

ಈ ರೊಮ್ಯಾಂಟಿಕ್‌ ಸಂಬಂಧದ ಚುಂಬಕ ಶಕ್ತಿಯ ಎರಡನೇ ವಿಶೇಷ ಏನು ಗೊತ್ತೆ? ಇತರೆಲ್ಲ ಮಾಮೂಲು ಮ್ಯಾಗ್ನೆಟ್‌ಗಿಂತ ಇದು ಭಿನ್ನ. ಪ್ರೇಮಿ ದೂರ ಇದ್ದಷ್ಟೂ ಇದರ ಶಕ್ತಿ ಬಲಯುತವಾಗಿರುತ್ತದೆ; ವಿರಹ ವೇದನೆ ಜಾಸ್ತಿ ಇರುತ್ತದೆ. ಕೆಲವರಲ್ಲಿ ಈ ಅನುಬಂಧ ಮದುವೆಯಾಗಿ ಹತ್ತಿಪ್ಪತ್ತು ಮೂವತ್ತು ವರ್ಷಗಳವರೆಗೂ ಗಾಢವಾಗಿರುತ್ತದೆ. ಹಾಗೆಂದು ಫಿಶರ್‌ MRI scan ನೋಡಿ ಹೇಳಿದ್ದಾಳೆ. ಪ್ರಾಯಶಃ ಅದು ಕ್ವಾಂಟಮ್‌ ಕೆಮಿಸ್ಟ್ರಿ. ಸದ್ಯಕ್ಕಂತೂ ಅದರ ಸೀಕ್ರೆಟ್‌ ನಮಗೆ ಗೊತ್ತಿಲ್ಲ.ನಮಗೆ ಅರ್ಥವಾಗದ್ದು ಇನ್ನೆಷ್ಟೋ ಇವೆ. ಜಾತಕ ನೋಡಿ ಮದುವೆ ಮಾಡಿಸುವ ನಮ್ಮ ಸಮಾಜದಲ್ಲಿ ಈ ಕೆಮಿಸ್ಟ್ರಿಗಳೆಲ್ಲ ಲೆಕ್ಕಕ್ಕಿಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ. ಅದಕ್ಕಿಂತ ವಿಭಿನ್ನ ಮೂರನೆಯ ವಿಶೇಷ ಇನ್ನೊಂದಿದೆ. ಅಪರೂಪಕ್ಕೆ ಅದು ತನ್ನದೇ ಧ್ರುವದತ್ತ ಆಕರ್ಷಿತವಾಗುವುದೂ ಇದೆ.ಮೂವತ್ತು ವರ್ಷಗಳ ಹೋರಾಟದ ನಂತರ ಇದೀಗ (ನಿನ್ನೆ, ಫೆಬ್ರುವರಿ 13) ಚಿಲಿ ದೇಶದಲ್ಲಿ ಎಲ್‌ಜಿಬಿಟಿಕ್ಯೂಗಳಿಗೆ ಜಯ ಸಿಕ್ಕಿದೆ. ಅಲ್ಲಿ ಮದುವೆಯ ಲಿಂಗ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಗಂಡು ಗಂಡನ್ನೂ ಹೆಣ್ಣು ಹೆಣ್ಣನ್ನೂ ಕೈಹಿಡಿಯಬಹುದು. ಅಲ್ಲಿ ಇಂದು ಹಬ್ಬ ಆಚರಿಸಲಾಗುತ್ತಿದೆ. ಎಂಥ ಕೆಮಿಸ್ಟ್ರಿಯೊ ಗೊತ್ತಿಲ್ಲ.ʼಲವ್‌ ಕೆಮಿಸ್ಟ್ರಿಯ ನೂರು ನಿಗೂಢಗಳುʼ ಎಂದು ಬೇಕಿದ್ದರೆ ಶಿರೋನಾಮೆಯನ್ನು ಬದಲಿಸಿಕೊಳ್ಳಿ. -ನಾಗೇಶ್‌ ಹೆಗಡೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *