ನಂಬಿಕೆ,ಸೌಹಾರ್ದತೆಯ ಬೀರಗುಂಡಿ ಭೂತೇಶ್ವರ ಜಾತ್ರೆ

ಜಾತ್ರೆ,ಹಬ್ಬಗಳಲ್ಲಿ ಜನರಿಗೆ ರಕ್ಷಣೆ ಭದ್ರತೆ ನೀಡುವ ಪೊಲೀಸರು ಜಾತ್ರೆ ನಡೆಸಿದರೆ ಹೇಗಿರುತ್ತೆ ಎನ್ನುವ ಕತೂಹಲವಿದ್ದವರು ಈ ಸ್ಟೋರಿಯನ್ನು ಕಡ್ಡಾಯವಾಗಿ ಓದಲೇಬೇಕು. ಹೌದು ಇದು  ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬೀರಗುಂಡಿ ಭೂತೇಶ್ವರ ಜಾತ್ರೆ, ಈ ಜಾತ್ರೆಯ ವಿಶೇಶವೆಂದರೆ ಇಲ್ಲಿ ಜಾತ್ರೆ ಸಂಘಟಕರು ಪೊಲೀಸರು.

ಈ ದಿನ ಇಲ್ಲಿ ಪೊಲೀಸರು ಸಮವಸ್ತ್ರ ತೊಡದೆ ಜಾತ್ರೆಯ ಭಜಕರಾಗಿ ಕೆಲಸಮಾಡುತ್ತಾರೆ. ಈ ಜಾತ್ರೆಯನ್ನು ಪೊಲೀಸರೇ ಯಾಕೆ ನಡೆಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ, ಅದಕ್ಕೂ ಒಂದು ಚರಿತ್ರೆಯಿದೆ. ಹಲವು ವರ್ಷಗಳ ಹಿಂದೆ ಈಗ ಪೊಲೀಸ್‌ ಠಾಣೆ ಇರುವ ಪ್ರದೇಶದಲ್ಲಿ ಈ ಭೂತೇಶ್ವರ ದೇವರಿದ್ದಿತ್ತಂತೆ ನಂತರ ಈ ಪ್ರದೇಶದಲ್ಲಿ ಪೊಲೀಸ್‌ ಠಾಣೆ ನಿರ್ಮಾಣವಾದ ಮೇಲೆ ಸ್ಥಳಾಂತರವಾದ ಭೂತೇಶ್ವರ ದೇವರಿಗೆ  ಪೂಜಿಸಿ ಹರಕೆ ಹೊತ್ತುಕೊಂಡರೆ ಕಳ್ಳರನ್ನು ಹಿಡಿಯುವುದು ಸೇರಿದಂತೆ ಪೊಲೀಸರ ಕೆಲಸಗಳೆಲ್ಲಾ ಸರಾಗವಾಗಿ ಆಗುತಿದ್ದವಂತೆ.
ಇಂಥ ನಂಬಿಕೆ ಕಾರಣಕ್ಕೆ ಪೊಲೀಸರು ಸಂಘಟಿಸಲು ಪ್ರಾರಂಭಿಸಿದ ಈ ಜಾತ್ರೆಗೆ ಈಗ ೩೦ ವರ್ಷ ಕಳೆದಿದೆ.

ಪ್ರತಿವರ್ಷ ಹೊಸವರ್ಷದ ಒಂದು ದಿನ ನಡೆಯುವ ಈ ಜಾತ್ರೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೂಡಾ ಮಾಡುತ್ತಾರೆ. ಇಂದು ನಡೆದ ಈ ಜಾತ್ರೆಯಲ್ಲಿ ಪಾಲ್ಗೊಂಡ ಪೊಲೀಸ್‌ ಅಧಿಕಾರಿಗಳು ಜಾತ್ರೆಗೆ ಬಂದವರಿಗೆ ಅಡಿಗೆ ಬಡಿಸಿ,ಜನರೊಂದಿಗೆ ತಾವೂ ಬೆರೆತು ಊಟ ಮಾಡಿದರು.
ಹೀಗೆ ದೇವರಿಗೆ ಪೂಜಿಸಿ, ಅನ್ನಸಂತರ್ಪಣೆ ಮಾಡಿ ಸಾರ್ವಜನಿಕರೊಂದಿಗೆ ಬೆರೆತರೆ ಜನಸ್ನೇಹಿ ಪೊಲೀಸ್‌ ಉದ್ದೇಶವೂ ಈಡೇರಿದಂತಾಗುತ್ತದೆ ಎನ್ನುವುದು ಇಲಾಖೆಯ ಅಭಿಮತ.ಪೊಲೀಸರೇ ನಡೆಸುವ ಈ ಜಾತ್ರೆಗೆ ಎಲ್ಲಾ ಸಹಕಾರ ನೀಡುವ ಸ್ಥಳಿಯರು ಪೊಲೀಸರು,ಅವರ ಕುಟುಂಬದೊಂದಿಗೆ ಬೆರೆತು ಸಂಬ್ರಮಿಸುತ್ತಾರೆ. ದಿನಂಪ್ರತಿ ಜಾತ್ರೆ, ಹಬ್ಬ,ಕಾರ್ಯಕ್ರಮಗಳಿಗೆ ರಕ್ಷಣೆ ನೀಡುವ ಪೊಲೀಸರು ಈ  ಜಾತ್ರೆಯಲ್ಲಿ ಸಮವಸ್ತ್ರ,ಇಲಾಖೆಯ ರೀತಿ ರಿವಾಜುಗಳನ್ನು ಬಿಟ್ಟು ಜನಸಾಮಾನ್ಯರಂತೆ ಪಾಲ್ಗೊಳ್ಳುವುದರಿಂದ ಸ್ಥಳೀಯರಿಗೂ ಪೊಲೀಸರ ಬಗ್ಗೆ ಭಿನ್ನ ಭಾವ ಉಂಟಾಗುತ್ತದೆ. ನಂಬಿಕೆ,ಸಾಹಾರ್ದತೆ,ಸಮಾಧಾನಗಳ ಹಿನ್ನೆಲೆಯಲ್ಲಿ ಪೊಲೀಸರ ಸಂಘಟನೆಯಲ್ಲಿ ನಡೆಯುವ ಈ ಜಾತ್ರೆ ರಾಜ್ಯದ ಅಪರೂಪದ ಪೊಲೀಸ್‌ ಜಾತ್ರೆಗಳಲ್ಲಿ ಒಂದು ಎನ್ನಲಾಗಿದೆ. ಈ ಜಾತ್ರೆಯಲ್ಲಿ ಪೊಲೀಸರೊಂದಿಗೆ ಇತರ ಇಲಾಖೆಯ ಸಿಬ್ಬಂದಿಗಳೂ ಸಾರ್ವಜನಿಕರಂತೆ ಬೆರೆತು ಜಾತ್ರೆ ಆಚರಿಸುವುದು ಬೀರಗುಂಡಿ ಭೂತೇಶ್ವರ ಜಾತ್ರೆಯ ವಿಶೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *