ಹಿಜಾಬ್‌ ಪರ ನಿಂತ ಬ್ರಹ್ಮಾನಂದ ಸ್ವಾಮೀಜಿ.. ಮತೀಯ ರಾಜಕಾರಣಕ್ಕೆ ವಿರೋಧ

Thumbnail image

ಬಟ್ಟೆಗಳೇ ಧರ್ಮವಲ್ಲ, ಧರ್ಮದ ಅಂತರಾಳಕ್ಕೆ ಇಳಿಯಬೇಕು: ಬ್ರಹ್ಮಾನಂದ ಸರಸ್ವತಿ ಶ್ರೀ

ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಶ್ರೀ ಹೇಳಿದರು.

ಕಾರವಾರ: ಬಟ್ಟೆಗಳನ್ನೇ ಧರ್ಮವೆಂದು ತಿಳಿದು ತಮಗೆ ಅನುಕೂಲವಾಗುವಂತಹ ಸಿದ್ಧಾಂತಗಳ ಮೇಲೆ ವಾದಗಳನ್ನು ಮಂಡಿಸಲಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ದೇಶಪ್ರೇಮ ಏನಾಗಲಿದೆ ಎಂಬ ಬಗ್ಗೆ ಭಯವಾಗುತ್ತಿದೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಹೊನ್ನಾವರದಲ್ಲಿ ಮಾತನಾಡಿದ ಅವರು, ಧರ್ಮದ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಕೇಸರಿ ಶಾಲು, ಟೋಪಿ, ಹಿಜಾಬ್‌ಗಳನ್ನು ಹಾಕಿಕೊಂಡು ಬಂದು ವಿವಾದ ಸೃಷ್ಟಿಯಾಗಿದೆ. ಹಾಗಿದ್ದರೆ ಧರ್ಮವೆಂದರೇನು? ಟೋಪಿ, ಮುಖವಾಡ, ಕೇಸರಿ ಶಾಲು ಇವು ಧರ್ಮವಲ್ಲ. ಧರ್ಮವೆಂದರೆ ಬದುಕಿನ ನಿಯಮ. ಸನ್ಯಾಸವೆಂದರೆ ಕೇಸರಿ ಬಟ್ಟೆಯೊಂದೇ ಅಲ್ಲ. ನಮಗೆ ನಾವೇ ಹಾಕಿಕೊಳ್ಳುವ ಕಟ್ಟುಪಾಡು ಎಂದು ಹೇಳಿದರು. ಕೇಸರಿ ಹಾಕಿದ ಮೇಲೆ ಯಾರ ಮನೆಗೂ ಹೋಗುವಂತಿಲ್ಲ, ಮಾರ್ಗದಲ್ಲಿ ನಿಂತು ತಿನ್ನುವಂತಿಲ್ಲ. ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನೂ ಮಾಡುವಂತಿಲ್ಲ ಇಂತಹ ನೈತಿಕತೆಯ ಮಟ್ಟ ಹೆಚ್ಚಿಸುವುದೇ ಧರ್ಮ ಎಂದು ಹೇಳಿದರು.

ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದರು.

ನಮ್ಮ ನಾಯಕರುಗಳಿಗೆ ದೇಶೀಯತೆ ಬೇಕಿದೆಯೇ?, ಬೇಕಿದ್ದರೆ ಇಂಥ ಸ್ಥಿತಿ ನಿರ್ಮಾಣವಾಗುತ್ತಿತ್ತಾ? ರಾಷ್ಟ್ರೀಯತೆ, ದೇಶೀಯತೆ, ರಾಷ್ಟ್ರ- ಸಹೋದರತೆ ಕಟ್ಟಬೇಕು ಎಂಬ ಮನಸ್ಥಿತಿ ನಮ್ಮ ರಾಜಕೀಯ ನಾಯಕರುಗಳಿಗೆ ಇಲ್ಲ. ಯಾವುದೇ ದೇಶದಲ್ಲಿ ಜನಾಂಗೀಯ ಸಂಘರ್ಷಗಳು ಉಂಟಾದರೆ ಆ ದೇಶ ಉಳಿಯುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮತೀಯ ಸಂಘರ್ಷಗಳು ಉಂಟಾದ ಯಾವ ದೇಶಗಳು ಉದ್ಧಾರವಾಗಿಲ್ಲ. ಉದ್ಧಾರವಾಗದಿದ್ದರೂ ಚಿಂತೆಯಿಲ್ಲ, ನನ್ನ ಪಕ್ಷ ಬರಬೇಕು ಎಂಬ ಮಾನಸಿಕತೆಯ ಜನರಿಂದಾಗಿ ಇಂತಹ ಘಟನೆ ಉಂಟಾಗುತ್ತಿರುವುದಾಗಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. (ಈಟಿ.ಬಿ.ಕೆ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *