

ನಾವು ಆಳಿದ ರಾಜರನ್ನ ಮರೆಯಬಹುದು ಆದರೆ ಕವಿಗಳನ್ನು ಮರೆಯಲು ಸಾಧ್ಯವಿಲ್ಲ ಯಾಕೆಂದರೆ ಕವಿಗಳ ಸಾಹಿತ್ಯ, ಕಾವ್ಯಗಳು ಯಾವತ್ತು ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕ ಅಧ್ಯಕ್ಷ ಗೋಪಾಲ್ ಭಾಶಿಯವರು ಹೇಳಿದರು
ಅವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತ್ಯ ಅಭಿಮಾನಿಗಳು ಸಿದ್ದಾಪುರ ಪಟ್ಟಣದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಕವಿ ಚನ್ನ ವೀರ ಕಣವಿ ಅವರ ಆತ್ಮಕ್ಕೆ ಶಾಂತಿ ಕೋರಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಹೇಳಿದರು
ಕಣವಿ ಅವರನ್ನು ಸಾಹಿತ್ಯದ ಬಣವೆ ಎಂದು ಕರೆಯಲಾಗುತ್ತದೆ ಅಷ್ಟು ಅಗಾಧವಾದ ಸಾಹಿತ್ಯವನ್ನು ಅವರು ಹೊಂದಿದ್ದರು ಸರಳ ಸಜ್ಜನಿಕೆ ವ್ಯಕ್ತಿತ್ವ ದವರಾದ ಅವರು ಸಾಹಿತ್ಯ, ಕಾವ್ಯ ದ ಮೂಲಕ ಯಾವತ್ತೂ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದರು.
ಗಣ್ಯರು ಕಣವಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷದ ಮೌನಾಚರಿಸಿ ನುಡಿ ನಮನ ಸಲ್ಲಿಸಿದರು
ಈ ಸಂದರ್ಭದಲ್ಲಿ ಎಂ ಕೆ ನಾಯ್ಕ್ ಹೊಸಳ್ಳಿ, ತಮ್ಮಣ್ಣ ಬೀಗಾರ್,ಏನ್ ಟಿ ನಾಯ್ಕ್ ದ್ಯಾವಾಸ, ನಿವೃತ್ತ ಶಿಕ್ಷಕ ಕುಮಟಾಕರ್, ಜಿ ಜಿ ಹೆಗಡೆ ಬಾಳಗೋಡ್,ಶಿಕ್ಷಕ ಪ್ರಕಾಶ್ ಮೌರ್ಯ, ಅಜಾದ್, ಶಂಕರ್ ಮೂರ್ತಿ, ಸುಧಾರಾಣಿ ನಾಯ್ಕ್ ರಾಘವೇಂದ್ರ ಕವಂಚೂರ್ ಮುಂತಾದವರು ನುಡಿ ನಮನ ಸಲ್ಲಿಸಿದರು.

