

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಸೇವಾ ಸಹಾಕಾರಿ ಸಂಘದ ಸದಸ್ಯರಾಗಿ, ಗ್ರಾಮ ಕಮಿಟಿಯ ಸದಸ್ಯ ರಾಗಿ ಸೇವೆ ಸಲ್ಲಿಸಿದ್ದ ತಾಲೂಕಿನ ಕಡಕೇರಿಯ ರಾಮ ಮಾದ ನಾಯ್ಕ (79) ಇತ್ತೀಚೆಗೆ ನಿಧನರಾದರು. ಅವರು ಪತ್ನಿ, ಎರಡು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಕಾನಸೂರು ಕ್ಲಸ್ಟರ್ ಹಂತದ ಎಸ್ ಡಿ ಎಂ ಸಿ ತರಬೇತಿ ಕಾರ್ಯಾಗಾರ ಯಶಸ್ವಿ
ಒಂದು ಊರಿನ ಸರಕಾರಿ ಶಾಲೆ ಅಭಿವೃದ್ಧಿ ಹೊಂದಿದರೆ ದೇಶದ ಅಭಿವೃದ್ಧಿ ಸಾಧ್ಯ. ಮಕ್ಕಳ ಶಿಕ್ಷಣಕ್ಕೆ ಸಮುದಾಯದ ಪ್ರೋತ್ಸಾಹ ಅತ್ಯಂತ ಪ್ರೇರಕ. ಶಾಲೆಯ ಅಭಿವೃದ್ಧಿಯಲ್ಲಿ ಸರಕಾರದ ಜೊತೆಗೆ ಎಸ್ ಡಿಎಂಸಿ ಮತ್ತು ಸಮುದಾಯದವರು ಸದಾ ಸ್ಪಂದಿಸಬೇಕು, ಆಗಮಾತ್ರ ಸರಕಾರಿ ಶಾಲೆಗಳು ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದು ಶಿಕ್ಷಣ ಪ್ರೇಮಿ ಉಪೇಂದ್ರ ಪೈ ಹೇಳಿದರು. ಇವರು ಕಾನಸೂರಿನಲ್ಲಿ ನಡೆದ ಎಸ್ ಡಿ ಎಂ ಸಿ ತರಬೇತಿ ಕಾರ್ಯಾಗಾರದಲ್ಲಿ ಕಾನಸೂರು ಶಾಲೆಯನ್ನು ದತ್ತು ತೆಗೆದುಕೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾನಸೂರು ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದ ಸುಭಾಸ್ ನಾಯ್ಕ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ತರಬೇತಿ ಪಡೆದಿರುವ ಶಿಕ್ಷಕರು ಇರುತ್ತಾರೆ. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುವ ಮೂಲಕ ಸರಕಾರಿ ಶಾಲೆಯ ಸಬಲೀಕರಣದಲ್ಲಿ ಸಮುದಾಯದವರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾಲೆಗೆ ನೀಡಲಾದ ಡೆಸ್ಕ್ ಮತ್ತು ಬೆಂಚ್ ಗಳನ್ನು ಸ್ವೀಕರಿಸಲಾಯಿತು. ವೇದಿಕೆಯಲ್ಲಿ, ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ ಕಾನಡೆ ಅನಿತಾ ನಾಯ್ಕ ಯೋಜನಾಧಿಕಾರಿ ಪ್ರಭಾಕರ ನಾಯ್ಕ, ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುರಾಜ ನಾಯ್ಕ, ಸಿ. ಆರ್. ಪಿ ಹೊಳೆ ಲಿಂಗ ಬಿ ಎಚ್, ಮೇಲ್ವಿಚಾರಕಿ ರೂಪ ನಾಯ್ಕ, ವಿವಿಧ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರು, ಮುಖ್ಯಾಧ್ಯಾಪಕರು ಹಾಜರಿದ್ದರು. ಎಂಎಂ ದುಂಡಸಿ ಸ್ವಾಗತಿಸಿದರು. ಚಂದ್ರಶೇಖರ್ ಚಿಕ್ಕಮಠ ವಂದಿಸಿದರು. 40ಕ್ಕೂ ಹೆಚ್ಚಿನ ಎಸ್. ಡಿ. ಎಂ ಸಿ ಪದಾಧಿಕಾರಿಗಳು ತರಬೇತಿಯ ಪ್ರಯೋಜನ ಪಡೆದುಕೊಂಡರು.

