

ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.
ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು ಕಟ್ಟಿ ಅವುಗಳೊಂದಿಗೆ ಸಾಗುತ್ತಾ ನಲಿಯುತಿದ್ದ ಕೃಷಿ ಸಂಸ್ಕೃತಿಯ ಒಂದು ಭಾಗವಾಗಿದ್ದ ಆಲೆಮನೆ ಈಗಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ಆಗಿನಷ್ಟು ಅದ್ಭುತವಾಗಿಲ್ಲ ಆದರೆ ಈಗಲೂ ಆಲೇಮನೆ ಸೊಬಗು ಮುಂದುವರಿದಿರುವುದು ಮಲೆನಾಡಿನ ವಿಶೇಶ.
ಆಲೆಮನೆ, ಕೋಣಗಳು, ಆಲೆಮಾವ ಎನ್ನುವ ಚಿತ್ರಣ ಈಗ ತುಸು ಬದಲಾಗಿ ಗಾಣ,ಯಂತ್ರ,ವಿದ್ಯುತ್ ಬಳಕೆ ಗಳ ಹೊಸ ರೂಪದ ಆಲೆಮನೆಯಲ್ಲಿ ಅದೇ ಚಿಣ್ಣರಿದ್ದಾರೆ. ಆಲೆಮನೆಯ ಹಾಲು ಕಾಯಿಸುವ ಕೊಪ್ಪರಿಗೆ ಇದೆ. ಜೊತೆಗೆ ಬೆಂಕಿ- ಈ ದಿವ್ಯಾನುಭವದ ಆಲೆಮನೆ ಸೊಬಗನ್ನು ಒಂದಷ್ಟು ಭಾಗ ವ್ಯಾಪಾರೀಕರಣ,ಯಾಂತ್ರೀಕರಣ ಕಳೆದರೆ ಮಲೆನಾಡಿನಲ್ಲಿ ವಿಪರೀತವಾಗಿರುವ ಕಾಡು ಪ್ರಾಣಿಗಳ ಹಾವಳಿ ಕಬ್ಬು ಬೆಳೆಯುವ ರೈತರ ಆಸಕ್ತಿ ಕುಂದಿಸಿದೆ. ಎಲ್ಲಾ ಸವಾಲು, ತೊಂದರೆಗಳ ನಡುವೆ ಈಗಲೂ ಆಲೆಮನೆಯ ಸೊಬಗನ್ನು ಸವಿಯಲು ಖಾತರಾಗಿರುವ ಜನರಿಗೆ ಮಲೆನಾಡಿನ ಅಲ್ಲಲ್ಲಿ ಆಲೆಮನೆಯ ಸೊಬಗು ಉಣಿಸುವ ಉದಾರಿಗಳೂ ಇದ್ದಾರೆ. ಪ್ರತಿವರ್ಷ ನಡೆಯುವ ಹಬ್ಬದಂಥ ಆಲೆಮನೆಯಲ್ಲಿ ಕಬ್ಬಿನ ರಸ ಕುಡಿದು ಆತ್ಮೀಯರೊಂದಿಗೆ ಹರಟುವ ಮಲೆನಾಡಿನ ಆಲೇಮನೆ ಈಗಲೂ ವಿಶೇಶವೇ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತೆಂಗಿನಮನೆಯಲ್ಲಿ ನಡೆದ ಆಲೆಮನೆ ಇಂಥಹ ಸಬ್ರಮಕ್ಕೆ ಸಾಕ್ಷಿಯಾಯಿತು. ಕಬ್ಬಿನ ಸಿಹಿ,ರಸದ ಸ್ವಾದ ಸವಿದ ಅನೇಕರು ಆಲೆಮನೆ ಮಾಡಿ ಸ್ಥಳಿಯರನ್ನು ಖುಷಿಪಡಿಸುವ ಬಗ್ಗೆ ಸಂಬ್ರಮಿಸಿದರೆ ಸ್ವಯಂ ಆಲೆಮನೆ ನಡೆಸಿದ ರೈತರು ತಮ್ಮ ನೋವು-ನಲಿವು ಹೇಳಿಕೊಂಡರು. ಎಲ್ಲಾ ಸವಾಲುಗಳ ನಡುವೆ ಯಾಂತ್ರೀಕರಣದ ಆಲೆಮನೆ ಹಬ್ಬ ಜನರನ್ನು ಖುಷಿ ಪಡಿಸಿದ್ದು ವಿಶೇಶ.
ಮೊದಲಿನ ಆಲೆಮನೆಯ ವಿಶೇಶವೇ ಬೇರೆ ಆದರೆ ಈಗಲೂ ನಾವು ಹಂಚಿ ತಿನ್ನುವ ಹಳೆ ಪದ್ಧತಿ ಉಳಿಸಿಕೊಂಡು ಊರುಕೇರಿಯ ಜನರಿಗೆ ಕಬ್ಬು-ಕಬ್ಬಿನ ಹಾಲು ಕೊಟ್ಟು ಖುಷಿ ಪಡುತಿದ್ದೇವೆ. ಕಾಡು ಪ್ರಾಣಿಗಳ ಹಾವಳಿ ರೈತನ ಆಸಕ್ತಿ-ಅಭಿರುಚಿ ಕುಂದಿಸಿದರೆ,ಯಾಂತ್ರೀಕರಣ ಮೊದಲಿನ ವ್ಯವಸ್ಥೆ ಬದಲಿಸಿದೆ ಆದರೂ ಆಲೆಮನೆ ವಿಶೇಶವೇ-ಡಿ.ಕೆ.ನಾಯ್ಕ, ತೆಂಗಿನಮನೆ
