ಸಮಾಜಸೇವೆ,ಸಾಮಾಜಿಕ ಕಾಳಜಿಗೆ ಹೆಸರಾಗಿದ್ದ ಸಿದ್ಧಾಪುರದ ಮೀರಾ ಸಾಬ್ ಇಂದು ನಿಧನರಾದರು. ೯೦ ವರ್ಷದ ಸುಧೀರ್ಘ ಬದುಕು ಬಾಳಿದ್ದ ಮೀರಾಸಾಬ್ ಪ್ರಾರಂಭದಲ್ಲಿ ಇಲ್ಲಿಯ ಸರ್ಕಾರಿ ನೌಕರರಾಗಿ ಹೊನ್ನಾವರದಿಂದ ವಲಸೆ ಬಂದಿದ್ದರು. ಸಿದ್ಧಾಪುರದಲ್ಲಿ ಅಂದಿನ ಗ್ರಾಮ ಪಂಚಾಯತ್ ನಲ್ಲಿ ಸೇವೆ ಸಲ್ಲಿಸಿ ನಂತರ ಪಟ್ಟಣ ಪಂಚಾಯತ್ ಸದಸ್ಯರಾಗಿ ಕೆಲಸಮಾಡಿದ್ದರು.
ಪಟ್ಟಣ ಪಂಚಾಯತ್ ಕೆಳಹಂತದ ನೌಕರರ ಪರವಾಗಿ ಹರಿಜನ ಸಂಘ ಸ್ಥಾಪಿಸಿ ಅವರ ಪರವಾಗಿ ಕೆಲಸಮಾಡಿದ್ದರು. ಸಿದ್ದಾಪುರ ಬದ್ರಿಯಾ ಜಾಮಿಯಾ ಮಸೀದಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಮೀರಾಸಾಬ್ ಅಪ್ಪಟ ಧಾರ್ಮಿಕರಾಗಿ ಎಲ್ಲಾ ಸಮಾಜದವರೊಂದಿಗೆ ಬಾಂದವ್ಯ ಹೊಂದಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು. ಕೆಲಕಾಲದ ಅನಾರೋಗ್ಯದಿಂದ ಬಳಲಿದ ಮೀರಾಸಾಬ್ ಇಂದು ಮುಂಜಾನೆ ಕೊನೆಯ ಉಸಿರೆಳೆದಿದ್ದು ಇಬ್ಬರು ಮಕ್ಕಳು,ಸಮಾಜಬಾಂಧವರೊಂದಿಗೆಅಪಾರ ಹಿತೈಶಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಮುನಾವರ್ ಗುರ್ಕಾರ್, ಟಿ.ಕೆ.ಎಂ. ಅಜಾದ್,ಇಲಿಯಾಸ್ ಶೇಖ್,ಮೆಹಬೂಬ್ ಅಲಿ,ನಾಶಿರ್ ಖಾನ್,ಕೆ.ಜಿ.ನಾಯ್ಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.