

ಇಂದು ಸಿದ್ಧಾಪುರದಲ್ಲಿ ನಡೆದ ವಿವಿಧ ಇಲಾಖೆಗಳ ತಂಡಗಳ ಕ್ರಿಕೆಟ್ ಟೂರ್ನ್ಮೆಂಟ್ ನಲ್ಲಿ ಪೊಲೀಸ್ ತಂಡ ಚಾಂಪಿಯನ್ ಆಗಿದೆ. ಶಿಕ್ಷಕರ ತಂಡ ದ್ವಿತಿಯ ಸ್ಥಾನ ಗಳಿಸಿ ನಗು ಚೆಲ್ಲಿದೆ. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನೇಕ ತಂಡಗಳು ಪಾಲ್ಗೊಂಡಿದ್ದವು. ಕಳೆದ ವರ್ಷದ ಇಂಥದ್ದೇ ಟೂರ್ನ್ಮೆಂಟ್ ನಲ್ಲಿ ಪೊಲೀಸ್ ತಂಡವೇ ಚಾಂಪಿಯನ್ ಆಗಿತ್ತು
ಸಿದ್ದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ದ ನೇತೃತ್ವದಲ್ಲಿ ಸರಕಾರಿ ನೌಕರರ ವಿವಿಧ ಇಲಾಖೆಗಳೊಂದಿಗೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನನೆ ಸಿದ್ದಾಪುರ ನೆಹರು ಮೈದಾನದಲ್ಲಿ ನಡೆಯಿತು.

ಉದ್ಘಾಟಿಸಿದ ತಸೀಲ್ದಾರ್ ಸಂತೋಷ್ ಭಂಡಾರಿ ಮಾತನಾಡಿ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸದ್ರಡತೆಗೆ ಸಹಕಾರಿ, ಸೋಲು ಗೆಲುವು ಮುಖ್ಯವಲ್ಲ. ಯಾವಾಗಲೂ ಕರ್ತವ್ಯ ದಲ್ಲಿ ರುವ ಇಲಾಖೆಯ ಸಿಬ್ಬಂದಿ ಗಳಿಗೆ ಒತ್ತಡ ದಿಂದ ಮುಕ್ತವಾಗಲು ಸಹಕಾರಿ ಯಾಗುತ್ತದೆ. ಆ ದಿಶೆಯಲ್ಲಿ ತಾಲೂಕು ಪತ್ರಕರ್ತ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.
. ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸಿಪಿಐ ಕುಮಾರ್ ಕೆ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುಮಾರ್ ನಾಯ್ಕ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಾಜೇಶ್ ನಾಯ್ಕ ಉಪಸ್ಥಿತರಿದ್ದರು.
ನಾಗರಾಜ ಭಟ್ಟ ಸ್ವಾಗತಿಸಿದರು. ರಮೇಶ ಹಾರ್ಸಿಮನೆ ನಿರೂಪಣೆ ಮಾಡಿದರು. ಶಿವಶಂಕರ ಕೋಲಶಿರ್ಸಿ ವಂದಿಸಿದರು. .


