
ದಂಡಕಾರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಲ್ಲಿಯ ಪ್ರಕೃತಿ ಸೊಬಗಿಗೆ ಪ್ರಸಿದ್ಧ. ಪ್ರವಾಸಿಗರ ಸ್ವರ್ಗದಂತಿದ್ದ ದಾಂಡೇಲಿಯನ್ನು ಕುಪ್ರಸಿದ್ಧಮಾಡಿದ್ದು ಅಲ್ಲಿಯ ಪೇಪರ್ ಮಿಲ್ ಮತ್ತು ಮೊಸಳೆಗಳು. ಕಳೆದ ಒಂದು ವರ್ಷದೀಚೆಗೆ ದಾಂಡೇಲಿಯಲ್ಲಿ ಮೊಸಳೆಗಳಿಗೆ ಆಹುತಿಯಾದ ಮನುಷ್ಯ, ಪ್ರಾಣಿಗಳ ಸಂಖ್ಯೆ ಅರ್ಧಡಜನ್ ದಾಟಿದೆ. ಹೀಗೆ ದಿಢೀರನೇ ದಾಂಡೇಲಿಯನ್ನು ಪ್ರಸಿದ್ಧ ಮಾಡಿದ ಮೊಸಳೆಗಳ ಬಗ್ಗೆ ಸ್ಥಳಿಯರು,ಹೊರ ಊರಿನವರು ಹೆದರುವಂತಾಗಿರುವ ಹಿಂದೆ ಮೊಸಳೆಗಳ ಆಟಾಟೋಪದ ಕಾರಣಗಳಿವೆ.
ಈ ಭಯದ ನಡುವೆ ಇಂದು ಹಳೆ ದಾಂಡೇಲಿಯ ಕಾಳಿನದಿ ದಡದ ಮೇಲೆ ಬಂದ ಮೊಸಳೆ ಸ್ಥಳಿಯರ ಭಯಕ್ಕೆ ಕಾರಣವಾಯಿತು. ಕಾಳಿನದಿಗೆ ತಾಕಿಕೊಂಡಿರುವ ಗಟಾರದ ಮೂಲಕ ಮೇಲೆ ಬಂದ ಮೊಸಳೆ ಗಮನಿಸಿದ ಸ್ಥಳಿಯರು ಹೆದರಿದರು. ನೋಡನೋಡುತ್ತಲೇ ಅರಣ್ಯ ಇಲಾಖೆ, ಸ್ಥಳಿಯಾಡಳಿತಕ್ಕೆ ಮಾಹಿತಿ ರವಾನಿಸಿದ ಸ್ಥಳಿಯರು ಅಧಿಕಾರಿಗಳೊಂದಿಗೆ ತಾವೂ ಸೇರಿ ಮೊಸಳೆ ಹಿಡಿಯುವ ಕಾರ್ಯಾಚರಣೆಗೆ ಕೈ ಜೋಡಿಸಿದರು.
ಬೇಲಿ ಅಂಚಿನ ಮೆಸ್ ಬಳಿ ತಿಣಕಾಡಿದ ಮೊಸಳೆ ಕೊನೆಗೂ ಮಾನವನ ಸಾಹಸದೆದುರು ಸೋತು ಸೆರೆಯಾಯಿತು. ಮೊಸಳೆ ಎಂದರೆ ಬೆಚ್ಚಿಬೀಳುವ ಜನರ ನಡುವೆ ಬಂದು ಭಯ ಹುಟ್ಟಿಸಿದ ಮೊಸಳೆಯನ್ನು ಹಿಡಿದು ರವಾನಿಸಲಾಯಿತು. ಕಳೆದ ಹಲವು ವರ್ಷಗಳಿಂದ ತಮ್ಮ ವಾಸಸ್ಥಾನ ಮಾಡಿಕೊಂಡಿರುವ ದಾಂಡೇಲಿಯ ಕಾಳಿ ನದಿಯ ಮೊಸಳೆಗಳು ಇತ್ತೀಚಿನ ವರ್ಷಗಳ ವರೆಗೆ ಮನುಷ್ಯರಿಗೆ ಮಾರಣಾಂತಿಕವಾದ ದೃಷ್ಟಾಂತಗಳಿರಲಿಲ್ಲ. ಈಗ ಕೆಲವೇ ವರ್ಷಗಳ ಈಚೆ ಸ್ಥಳಿಯರು, ಪ್ರವಾಸಿಗರಿಗೆ ಹೆದರಿಸುತ್ತಿರುವ ಮೊಸಳೆಗಳ ಸಂರಕ್ಷಣೆ, ವಾಸಕ್ಕೆ ದಾಂಡೇಲಿಯಲ್ಲಿ ಕ್ರೊಕೊಡೈಲ್ ಪಾರ್ಕ್ ಕೂಡಾ ಮಾಡಲಾಗಿದೆ.
ಕ್ರೊಕೊ ಡೈಲ್ ಪಾರ್ಕ್ ಇರುವ ಹಳಿಯಾಳ ರಸ್ತೆಗೆ ವಿರುದ್ಧ ದಿಕ್ಕಿನ ಹಳೆದಾಂಡೇಲಿಯಲ್ಲಿ ಇಂದು ಕಂಡ ಮೊಸಳೆ ಅರಣ್ಯ ಇಲಾಖೆಯಿಂದ ಪಾರ್ಕ್ ಸೇರಿದೆ. ಈ ಪಾರ್ಕ್ ಪ್ರದೇಶದಿಂದ ಹೊರಗಡೆ ಮೊಸಳೆಗಳು ಸಂಚರಿಸದಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬುದು ಸ್ಥಳಿಯರ ಬೇಡಿಕೆಯಾಗಿದೆ.
ನದಿ ಬಿಟ್ಟು ದಾಂಡೇಲಿಯ ಜನವಸತಿ ಪ್ರದೇಶಕ್ಕೆ ಬಂತು ಬೃಹತ್ ಗಾತ್ರದ ಮೊಸಳೆ
ದಾಂಡೇಲಿಯ ಜನವಸತಿ ಪ್ರದೇಶದಲ್ಲಿ ಮತ್ತೆ ಮೊಸಳೆ ಕಂಡುಬಂದಿದ್ದು, ಜನರು ಆತಂಕಗೊಂಡಿದ್ದಾರೆ.
ಕಾರವಾರ: ಕಾಳಿ ನದಿಯಿಂದ ಇಲ್ಲಿನ ದೇಶಪಾಂಡೆ ನಗರದ ಕೆಎಸ್ಆರ್ಟಿಸಿ ಡಿಪೋ ಬಳಿ ಬಂದಿದ್ದ ಮೊಸಳೆಯನ್ನು ರಕ್ಷಿಸಿ, ಮರಳಿ ನದಿಗೆ ಬಿಡಲಾಗಿದೆ. ಗುರುವಾರ ಬೆಳಂಬೆಳಗ್ಗೆ ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದರು. ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.
ಬಳಿಕ ಸ್ಥಳೀಯ ಯುವಕರು ಸೇರಿ ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ ಬಿಟ್ಟಿದ್ದಾರೆ.https://prod.suv.etvbharat.com/v2/smart_urls/6229ab2b71d60097bf97405f/embedplayer1?
ದಾಂಡೇಲಿಗೆ ಬಂದ ಬೃಹತ್ ಗಾತ್ರದ ಮೊಸಳೆ
ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮೊಸಳೆಗಳು ನದಿಯಿಂದ ನಗರದೊಳಗೆ ಬರುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. (etbk)
