

ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ
Snake bites an youth in Sirsi: ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಉರಗಗಳನ್ನು ಕೂಡ ರಕ್ಷಿಸಿದ್ದಾನೆ. ಆದ್ರೆ ಈಗ ಭಂಡ ಧೈರ್ಯದಿಂದ ಎಡವಟ್ಟು ಮಾಡಿಕೊಂಡಿದ್ದಾನೆ.

ಶಿರಸಿ: ನಮ್ಮ ಮುಂದೆ ಒಂದು ಸಣ್ಣ ಹಾವಿನ ಮರಿ ಕಂಡರೆ ಸಾಕು ಕಿರುಚಾಡಿಕೊಂಡು ಸ್ಥಳದಿಂದ ಕಾಲ್ಕಿಳುವವರ ಮಧ್ಯೆ ಈ ಯುವಕ ಭಿನ್ನ. ಕಾರಣ ಮೂರು ಹಾವುಗಳೊಂದಿಗೆ ಆಟ ಆಡುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ. ಈ ಆಟದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ ಕೂಡ ಮಾಡಿದ್ದಾನೆ. ಆದ್ರೆ ಈ ಬಾರಿ ಭಂಡ ಧೈರ್ಯ ತೋರಿ ಎಡವಟ್ಟು ಮಾಡಿಕೊಂಡಿದ್ದಾನೆ.
ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ
ಶಿರಸಿಯ ಮುಸ್ಲಿಂ ಗಲ್ಲಿಯ ಸೈಯದ್ (20) ಎಂಬ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಯುವಕ. ದೇವಿದ ಕೆರೆ ಕಾಡಿನಲ್ಲಿ ಈ ಘಟನೆ ಜರುಗಿದೆ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 3 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾನೆ.

ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಯುವಕ ಈಗ ಆಸ್ಪತ್ರೆಯಲ್ಲಿ
ವಿಡಿಯೋದಲ್ಲಿ ಕಾಣುವಂತೆ 3 ಹಾವುಗಳೊಂದಿಗೆ ಆಟ ಆಡುವಾಗ ಒಂದು ಹಾವು ಈತನ ಕಾಲಿಗೆ ಕಚ್ಚಿದೆ. ಘಟನೆ ಸಂಬಂಧ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿ ಈ ರೀತಿಯಾಗಿ ಯುವಕ ಮಾಡಿದ್ದನ್ನು ವಿರೋಧಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲೆಯ ಪರಿಸರ ಹೋರಾಟಗಾರ ಜೋಸೆಫ್ ಅವರು, ಅರಣ್ಯ ಇಲಾಖೆ ಇಂತಹವರ ಬಗ್ಗೆ ನಿಗಾ ಇಡಬೇಕು. ವನ್ಯ ಜೀವಿಗಳನ್ನು ಮುಟ್ಟುವ ಹಾಗಿಲ್ಲ ಎಂಬ ಆದೇಶ ಹೊರಡಿಸಬೇಕು. ಕೆಲವರು ಪಬ್ಲಿಷಿಟಿಗೆ ಏನೇನೋ ಸ್ಟಂಟ್ ಮಾಡಲು ಹೋಗಿ ಈ ರೀತಿಯ ಅಚಾತುರ್ಯಗಳು ನಡೆಯುತ್ತವೆ ಎಂದಿದ್ದಾರೆ. https://59837408381f38a60271467c36d8d45e.safeframe.googlesyndication.com/safeframe/1-0-38/html/container.htmlhttps://prod.suv.etvbharat.com/v2/smart_urls/623358d771d60097bf975951/embedplayer1?
ಪರಿಸರ ಹೋರಾಟಗಾರರ ಅಭಿಪ್ರಾಯ
ಇನ್ನು ಉರುಗ ಪ್ರೇಮಿ ಮಹೇಶ್ ಮಾತನಾಡಿ, ವಿಡಿಯೋಗಳನ್ನು ನೋಡಿ ಹಾವುಗಳ ಜೊತೆ ಆಟವಾಡುವುದು ಮತ್ತು ತರಬೇತಿ ಇಲ್ಲದೇ ಹಾವುಗಳ ಸಂರಕ್ಷಣೆ ಮಾಡುವುದು ಅಪಾಯಕರ. ಈ ರೀತಿ ಯಾರೂ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ. (ಈಟಿಬಿಕೆ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
