ಸಿದ್ಧಾಪುರ ಚನಮಾಂವ ಗ್ರಾಮದ ಸಮೀಪ ಇರುವ ತಮ್ಮ ಜಮೀನಿನ ಕೃಷಿ ಕೆಲಸಕ್ಕೆ ತೆರಳಿದ್ದ ಇಲ್ಲಿಯ ಕೋಲಶಿರ್ಸಿಯ ಯುವಕ ಸೋಮೇಶ್ವರ ರಾಮಾ ನಾಯ್ಕ ಸಂಬಂಧಿಕರ ಹೊಸ ಮನೆ ಬಳಿ ಆಕಸ್ಮಿಕವಾಗಿ ಬಿದ್ದು ತೀವೃವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಶಿವಮೊಗ್ಗದಲ್ಲಿ ಮೃತರಾದ ದುರ್ಘಟನೆ ನಡೆದಿದೆ.
ಈ ಬಗ್ಗೆ ಮೃತರ ಪತ್ನಿ ಸರಸ್ವತಿ ಸೋಮೇಶ್ವರ ನಾಯ್ಕ ಸ್ಥಳಿಯ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು ತಮ್ಮ ಪತಿ ಸೋಮೇಶ್ವರ ನಾಯ್ಕ ಇಂದು ಮುಂಜಾನೆ ೬.೩೦ ಕ್ಕೆ ಮನೆಯಿಂದ ಹೊರಟವರು ಚನಮಾಂವನ ಸಂಬಂಧಿಕರ ಹೊಸಮನೆ ಸಮೀಪ ಆಕಸ್ಮಿಕವಾಗಿ ಬಿದ್ದು ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ಸೋಮೇಶ್ವರ ನಾಯ್ಕ ತಾಯಿ,ಪತ್ನಿ ಇಬ್ಬರು ಮಕ್ಕಳೊಂದಿಗೆ ಅಪಾರ ಬಂಧಿಬಳಗವನ್ನು ಅಗಲಿದ್ದಾರೆ.
ಕೃಷಿಕರಾಗಿದ್ದ ಸೋಮೇಶ್ವರ ನಾಯ್ಕ ತಮ್ಮ ಸಂಬಂಧಿಕರ ಮನೆಯಲ್ಲಿ ಆಕಸ್ಮಿಕವಾಗಿ ಕೆಳಗೆಬಿದ್ದು ತೀವೃವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಸ್ಥಳಿಯ ಆಸ್ಫತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ಗಾಯದ ಸ್ವರೂಪ ತಿಳಿಯಲು ಸ್ಕ್ಯಾನಿಂಗ್ ಮಾಡುತಿದ್ದ ವೇಳೆ ಬೆಳಿಗ್ಗೆ ೧೧-೩೦ ರ ಸುಮಾರಿಗೆ ಶಿವಮೊಗ್ಗ ಆಸ್ಫತ್ರೆಯಲ್ಲೇ ಕೊನೆ ಉಸಿರೆಳೆದಿದ್ದಾರೆ. ಈ ಆಕಸ್ಮಿಕ ಸಾವಿನ ಸುದ್ದಿ ಸಿದ್ಧಾಪುರದಾದ್ಯಂತ ಆಘಾತದ ವರ್ತಮಾನವಾಗಿದ್ದು ಅಂತ್ಯಕ್ರೀಯೆ ಮಧ್ಯರಾತ್ರಿಯ ಮೊದಲು ನಡೆಯುವ ಬಗ್ಗೆ ಗ್ರಾಮಸ್ಥರು ಬಾತ್ಮಿ ನೀಡಿದ್ದಾರೆ.