


ಶಿರಸಿಯ ಮಾರಿಕಾಂಬಾ ಜಾತ್ರೆಗೆ ವರುಣನ ಅಡ್ಡಿ: ವ್ಯಾಪಾರಿಗಳಿಗೆ ನಷ್ಟ
ಜಾತ್ರೆಯ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ತಂದಿದ್ದ ಬಗೆಬಗೆಯ ಬಟ್ಟೆಗಳು, ಆಟಿಕೆ ಸಾಮಾನುಗಳು ಹಾಗೂ ಇತರ ವಸ್ತುಗಳೆಲ್ಲಾ ಸಂಪೂರ್ಣ ಮಳೆ ನೀರಿನಲ್ಲಿ ತೇಯ್ದುಹೋಗಿದೆ.
ಶಿರಸಿ: ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಗುರುವಾರ ಸಂಜೆ ವರುಣ ಏಕಾಏಕಿ ಅಡ್ಡಿಪಡಿಸಿದ್ದು, ಸುಮಾರು ಅರ್ಧ ಗಂಟೆ ಸುರಿದ ಭಾರಿ ಗಾಳಿ ಮಳೆಗೆ ವ್ಯಾಪಾರಿಗಳು, ಭಕ್ತರು ತೊಂದರೆ ಪಡುವಂತಾಯಿತು.



ಜಾತ್ರೆಯ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ತಂದಿದ್ದ ಬಗೆಬಗೆಯ ಬಟ್ಟೆಗಳು, ಆಟಿಕೆ ಸಾಮಾನುಗಳು ಹಾಗೂ ಇತರ ವಸ್ತುಗಳೆಲ್ಲಾ ಸಂಪೂರ್ಣ ಒದ್ದೆಯಾಗಿದೆ. ಇದೇ ಸಂದರ್ಭದಲ್ಲಿ ಜಾತ್ರಾ ಗದ್ದುಗೆಯ ಮಂಟಪವೂ ಸಹ ಮುರಿದು ಬಿದ್ದಿದ್ದು, ಯಾವುದೇ ಅಹಿತಕರ ಘಟನೆ ಜರುಗಿಲ್ಲ.
ವಿವಿಧ ಅಂಗಡಿಗಳು, ಬಸ್ ಸ್ಟ್ಯಾಂಡ್, ದೇವಳದ ಪ್ರಾಂಗಣದಲ್ಲಿ ಭಕ್ತರು ಆಸರೆ ಪಡೆದುಕೊಂಡಿದ್ದು, ಅಂಗಡಿಗಳ ಟಾರ್ಪಲ್, ತಗಡು ಶೀಟ್ ಹಾರಿಹೋಗಿದೆ.
ಬಿಸಿಲ ಬೇಗೆಯ ನಡುವೆ ಮಳೆಯ ಪ್ರವೇಶದಿಂದಾಗಿ ಎಲ್ಲವೂ ಅಸ್ತವ್ಯಸ್ತವಾಗಿದ್ದು, ವಿವಿಧ ಅಮ್ಯೂಸ್ಮೆಂಟ್ ಉಪಕರಣಗಳಿಗೂ ಹಾನಿಯಾಗಿದೆ. ಸಹಾಯಕ ಆಯುಕ್ತರು, ಪೊಲೀಸರು ಹಾನಿ ಪರಿಶೀಲನೆ ನಡೆಸಿದ್ದಾರೆ. (etbk)
