

ಸಿದ್ದಾಪುರ; ತಾಲೂಕಿನ ಕಾನಳ್ಳಿಯಲ್ಲಿ ಬುಧವಾರ ವೃಕ್ಷ ನಮನ ಎಂಬ ವಿಶೇಷವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು ಐದು ನೂರು ವರ್ಷಗಳಷ್ಟು ಹಳೆಯದಾದ ಗೋಣಿ ( ಪೈಕಾಸ್ ಮೈಸೂರಾನ್ಸಿಸ್) ಆಲದ ಪ್ರಭೇದದ ಜಾತಿಯ ಮರವು ಯಾವುದೋ ರೋಗದ ಕಾರಣ ಕಳೆದ ವರ್ಷ ಸಂಪೂರ್ಣವಾಗಿ ಒಣಗಿ ಹೋಗಿದೆ. ಪರಿಸರವು ನಮ್ಮ ಜೀವನಾಡಿ ಎಂಬದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ನಾವು ಅದರೊಂದಿಗೆ ಎಷ್ಟು ಅನ್ಯೋನ್ಯವಾಗಿದ್ದೇವೆ ಎನ್ನುವುದು ಮುಖ್ಯ. ಇಂದಿನ ದಿನಗಳಲ್ಲಿ ಮನುಷ್ಯ ರೇ ತಮ್ಮ ಸಂಬಂಧ ಗಳನ್ನು ಅನ್ಯೋನ್ಯ ವಾಗಿಟ್ಟುಕೊಳ್ಳುವುದು ಕಷ್ಟ. ಆದರೆ ಕಾನಳ್ಳಿಯ ಜನತೆ ಈ ಗೋಣಿ ಮರದ ಅಡಿಯಲ್ಲಿ ಒಡನಾಡಿದ ಅದರ ನೆನಪಿಗಾಗಿ ಇಂದು ವೃಕ್ಷಕ್ಕೆ ನಮನ ಸಲ್ಲಿಸಿದರು.
ಮರಕ್ಕೆ ಪೂಜೆ ಸಲ್ಲಿಸಿ ನಂತರ ಈ ಕಾರ್ಯಕ್ರಮದ ರೂವಾರಿ ಪರಮೇಶ್ವರಯ್ಯ ಕಾನಳ್ಳಿಮಠ ಮಾತನಾಡಿ ಜಾನುವಾರುಗಳು, ಪಕ್ಷಿಗಳು, ದಾರಿಹೋಕರಿಗೆ ಈ ಮರ ಆಶ್ರಯ ತಾಣವಾಗಿತ್ತು. ದಾರಿಯಲ್ಲಿ ಓಡಾಡುವ ಎಷ್ಟೋ ಜನರು ಇದರ ನೆರಳಿನ ಆಶ್ರಯ ಪಡೆದಿದ್ದರು. ಅದೆಷ್ಟೋ ಜನ ಉಪ್ಪಿನಕಾಯಿ ಗೆ ಗೋಣಿಕಾಯಿ ತೆಗೆಯಲು ಬರುತ್ತಿದ್ದರು. ಹಲವಾರು ಪಕ್ಷಿಗಳು ಇದರ ಹಣ್ಣು ಅರಸಿ ಬರುತ್ತಿದ್ದವು. ಹೀಗೆ ಸುಮಾರು ಐದು ನೂರು ವರ್ಷಗಳ ಹಳೆಯದಾದ ಪರೋಪಕಾರಿ ಯಾದ ಈ ಗೋಣಿ ಮರ ನೆನಪು ಮಾತ್ರ ಎಂದರು. ಇಂದು
ಬಲಿದಾನ ದಿವಸದ ಆಗಿದ್ದರಿಂದ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸಿದರು. ಹಾಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ನಿವೃತ ಶಿಕ್ಷಕ ಶ್ರೀಪಾದ ಹೆಗಡೆ ಮಾತನಾಡಿ ನಮ್ಮ ಹಾಗೂ ಪರಿಸರ ದ ಸಂಬಂಧ ಕ್ಕೆ ಸಾಕ್ಷಿಯಾಗಿ ಅಶ್ರುತರ್ಪಣ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ.
ವ್ಯಕ್ತಿ ನೆರವಾಗಿ ಸಮಾಜಕ್ಕೆ ಸಹಾಯ ಮಾಡಿದರೆ ವೃಕ್ಷ ಪರೋಕ್ಷವಾಗಿ ಪ್ರಾಣಿ ಪಕ್ಷಿ, ಮನುಷ್ಯ ರಿಗೆ ಸಹಾಯ ಮಾಡುತ್ತದೆ. ಪರೋಪಕಾರಿ ಯಾಗಿ ಕಾರ್ಯ ನಿರ್ವಹಿಸುತ್ತದೆ.
ವೃಕ್ಷರಾಜ ವಂಶಕ್ಕೆ ಸೇರಿದ ಮರ ಇದು.
ಒಂದು ಮರ ಹೋದರೆ ಮತ್ತೊಂದು ಗಿಡ ನೆಟ್ಟ ಅದು ಸದಾ ನೆನಪಿನಲ್ಲಿರುವಂತ ಕಾರ್ಯ ಆಗಬೇಕು. ಅದರೊಂದಿಗೆ ಪರಿಸರ ಬೆಳೆಸಬೇಕು, ಉಳಿಸಬೇಕು ಎನ್ನುವ ಪರಿಕಲ್ಪನೆ ಮುಂದಿನ ಜನಾಂಗಕ್ಕೆ ಬರಬೇಕು ಎಂದರು.
ಅರಣ್ಯ ರಕ್ಷಕ ವಿನೋದ್ ಮಾತನಾಡಿ ನಮ್ಮ ನಮ್ಮಲ್ಲಿಯೇ ಉತ್ತಮ ಬಾಧವ್ಯ ಇಲ್ಲದ ಇಂದಿನ ದಿನದಲ್ಲಿ ಮರಕ್ಕೆ ಇಂತಹ ಕಾರ್ಯಕ್ರಮ ಮಾಡಿದ್ದು ಇಲ್ಲಿಯ ಜನರ ಸುಸಂಸ್ಕೃತಿಯನ್ನು ತೋರಿಸುತ್ತದೆ. ಜೊತೆಗೆ ಪರಿಸರ ಅಭಿವೃದ್ಧಿ ನಮ್ಮ ಕಾಯಕ ಆಗಬೇಕು ಎಂದರು.
ಗ್ರಾಮದ ಹಿರಿಯ ಕೆರಿಯಣ್ಣ ಕಾನಳ್ಳಿ ಮಾತನಾಡಿ ಮರದ ಒಡನಾಟವನ್ನು ನೆನೆದು ಭಾವುಕರಾದರು.
ಪತ್ರಕರ್ತ ಸುರೇಶ ಮಡಿವಾಳ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ ಯರು, ಮಕ್ಕಳು, ಮಹಿಳೆಯರು, ಯುವಕರು, ಯುವತಿಯ ರು ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಮೇಘನಾ ಕಾನಳ್ಳಿ ಪ್ರಾರ್ಥಿಸಿದರು.
ಗೋಪಾಲ್ ಕಾನಳ್ಳಿ ಸ್ವಾಗತಿಸಿದರು.


